Asianet Suvarna News Asianet Suvarna News

ಮೊಹರಂ ಮೆರವಣಿಗೆಯಲ್ಲಿ ಭಾರತ ವಿರೋಧಿ ಘೋಷಣೆ, 33 ಜನರ ಬಂಧನ!

ಜೌನ್‌ಪುರದ ಮಿರ್‌ಗಂಜ್ ಪ್ರದೇಶದ ಗೋಧ್ನಾ ಬಜಾರ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಯ 30 ಸೆಕೆಂಡುಗಳ ವೀಡಿಯೊ ಕ್ಲಿಪ್ ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ, ಯುವಕರು ಇತರರನ್ನು ಪ್ರಚೋದಿಸಲು ಭಾರತ ವಿರೋಧಿ ಘೋಷಣೆಗಳನ್ನು ಕೂಗುತ್ತಿದ್ದರು ಎನ್ನಲಾಗಿದೆ.
 

Uttar Pradesh Jaunpur 33 Arrested for Raising Anti India Slogans During Muharram Procession san
Author
First Published Aug 3, 2023, 5:01 PM IST

ನವದೆಹಲಿ (ಆ.3): ಮೊಹರಂನ 10 ನೇ ದಿನದ ಅಂಗವಾಗಿ ಕಳೆದ ಶನಿವಾರ ನಡೆದ ಮೆರವಣಿಗೆ ಸಂದರ್ಭದಲ್ಲಿ ಭಾರತ ವಿರೋಧಿ ಮತ್ತು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಕೂಗಿದ ಕಾರಣಕ್ಕಾಗಿ ಜೌನ್‌ಪುರ ಜಿಲ್ಲೆಯಲ್ಲಿ ಉತ್ತರ ಪ್ರದೇಶ ಪೊಲೀಸರು 33 ಜನರನ್ನು ಬಂಧಿಸಿದ್ದಾರೆ. ಮೆರವಣಿಗೆಯಲ್ಲಿ ಮುಸ್ಲಿಂ ವ್ಯಕ್ತಿಗಳಿ ಪಾಕಿಸ್ತಾನ್‌ ಜಿಂದಾಬಾದ್‌ ಎಂದು ಘೋಷಣೆಗಳನ್ನು ಕೂಗಿರುವ ವಿಡಿಯೋ ವೈರಲ್‌ ಆದ ಬೆನ್ನಲ್ಲಿಯೇ ಕಾರ್ಯಪ್ರವೃತ್ತರಾದ ಉತ್ತರ ಪ್ರದೇಶ ಪೊಲೀಸರು, ಈ ಘೋಷಣೆ ಕೂಗಿದ 33 ಜನರನ್ನು ಬಂಧಿಸಿ ಜೈಲಿಗಟ್ಟಿದ್ದಾರೆ. "ಜುಲೈ 31 ರಂದು ಹೊರಬಿದ್ದ ವೀಡಿಯೊದ ಆಧಾರದ ಮೇಲೆ, ಜೌನ್‌ಪುರ ಜಿಲ್ಲೆಯ ಹಳ್ಳಿಯೊಂದರ ಮೊಹರಂ ಮೆರವಣಿಗೆಯ ಸಮಯದಲ್ಲಿ ಕೆಲವು ಸಮಾಜ ವಿರೋಧಿ ಶಕ್ತಿಗಳು ಭಾರತ ವಿರೋಧಿ ಮತ್ತು 'ಪಾಕಿಸ್ತಾನ್ ಜಿಂದಾಬಾದ್' ಘೋಷಣೆಗಳನ್ನು ಎತ್ತಿದ್ದರು. ಈ ಘಟನೆಗೆ ಸಂಬಂಧಪಟ್ಟಂತೆ ನಾವು 33 ಜನರನ್ನು ಬಂಧಿಸಿದ್ದೇವೆ' ಎಂದು ಗ್ರಾಮೀಣ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್ಪಿ) ಶೈಲೇಂದ್ರ ಕುಮಾರ್ ಸಿಂಗ್ ತಿಳಿಸಿದ್ದಾರೆ.

ಜೌನ್‌ಪುರದ ಮಿರ್‌ಗಂಜ್ ಪ್ರದೇಶದ ಗೋಧ್ನಾ ಬಜಾರ್‌ನಲ್ಲಿ ನಡೆದಿದೆ ಎನ್ನಲಾದ ಘಟನೆಯ 30 ಸೆಕೆಂಡುಗಳ ವೀಡಿಯೊ ಕ್ಲಿಪ್  ಸಹಾಯದಿಂದ ಆರೋಪಿಗಳನ್ನು ಗುರುತಿಸಲಾಗಿತ್ತು ಎಂದು ಶೈಲೇಂದ್ರ ಕುಮಾರ್‌ ಸಿಂಗ್ ಹೇಳಿದ್ದಾರೆ.  ತಮ್ಮೊಂದಿಗೆ ಪಾಕಿಸ್ತಾನ್‌ ಜಿಂದಾಬಾದ್‌ ಎನ್ನುವ ಘೋಷಣೆಯನ್ನು ಕೂಗಲು ಜೊತೆಯಾಗಿ ಎಂದು ಇತರರು ಮಿಹರಂ ಮೆರವಣಿಗೆ ವೇಳೆ ಹೇಳುವಾಗ ಈ ವಿಡಿಯೋವನ್ನು ಚಿತ್ರೀಕರಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಡೈವೋರ್ಸ್‌ ಪಡೆದ ತಿಂಗಳ ಒಳಗೆ 2ನೇ ಮದುವೆಗೆ ರೆಡಿಯಾದ ಮೆಗಾ ಕುಟುಂಬದ ಕುಡಿ ನಿಹಾರಿಕಾ?

ಬೇಹುಗಾರಿಕೆ ಮಾಡುತ್ತಿದ್ದ ವ್ಯಕ್ತಿಯ ಬಂಧನ: ಮತ್ತೊಂದು ಘಟನೆಯಲ್ಲಿ, ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌ಐಗಾಗಿ ಗೂಢಚಾರಿಕೆ ನಡೆಸಿದ ಆರೋಪದ ಮೇಲೆ ಯುಪಿ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ಯುವಕನನ್ನು ಬಂಧಿಸಿದೆ. ಗೊಂಡಾ ಜಿಲ್ಲೆಯ ದಿನಪುರವಾ ನಿವಾಸಿ ಮುಕಿಮ್ ಸಿದ್ದಿಕಿ ಅಲಿಯಾಸ್ ಅರ್ಷದ್ (21) ನನ್ನು ಸೋಮವಾರ ಬಂಧಿಸಲಾಗಿದೆ ಎಂದು ಎಟಿಎಸ್ ಬಿಡುಗಡೆ ಮಾಡಿದ ಹೇಳಿಕೆ ತಿಳಿಸಿದೆ. ಆತನ ಬಳಿಯಿದ್ದ ಎರಡು ಸಿಮ್ ಕಾರ್ಡ್ ಹಾಗೂ ಮೊಬೈಲ್ ವಶಪಡಿಸಿಕೊಳ್ಳಲಾಗಿದೆ ಜುಲೈ 16 ರಂದು, ಎಟಿಎಸ್ ಐಎಸ್ಐಗಾಗಿ ಬೇಹುಗಾರಿಕೆ ಮತ್ತು ದೇಶ ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಮೊಹಮ್ಮದ್ ರಯೀಸ್, ಅರ್ಮಾನ್ ಅಲಿ ಮತ್ತು ಮೊಹಮ್ಮದ್ ಸಲ್ಮಾನ್ ಸಿದ್ದಿಕಿ ಅವರನ್ನು ಬಂಧಿಸಿತ್ತು. ಮೂವರು ಆರೋಪಿಗಳ ವಿಚಾರಣೆ ವೇಳೆ ಸಿದ್ದಿಕಿ ಕೂಡ ಐಎಸ್‌ಐ ಪರ ಕೆಲಸ ಮಾಡಿರುವುದು ಬೆಳಕಿಗೆ ಬಂದಿದೆ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.

ಸಿನಿಮಾ ನಟಿಯ ಖಾಸಗಿ ವಿಡಿಯೋ ಲೀಕ್‌, ಖ್ಯಾತ ನಿರ್ಮಾಪಕನ ವಿರುದ್ಧ ದೂರು

Follow Us:
Download App:
  • android
  • ios