Asianet Suvarna News Asianet Suvarna News

ಯುಪಿ ಬದೌನ್‌ನ ಜಾಮಾ ಮಸೀದಿಯ ಸ್ಥಳ ಶಿವ ದೇವಸ್ಥಾನ, ಸೆ. 9ಕ್ಕೆ ಕೋರ್ಟ್‌ನಲ್ಲಿ ವಿಚಾರಣೆ

ಬದೌನ್‌ನ ಜಾಮಾ ಮಸೀದಿಯು ನೀಲಕಂಠ ಮಹಾದೇವನ ದೇವಾಲಯವೆಂದು ಹೇಳಲಾಗಿದೆ. ಈ ಕುರಿತು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಶುಕ್ರವಾರ, ಫಿರ್ಯಾದಿಯ ಅರ್ಜಿಯ ಮೇರೆಗೆ, ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ದಾವೆ ಹೂಡಲು ಅನುಮತಿ ನೀಡಿದ್ದಾರೆ.

Uttar Pradesh Jama Masjid in Badaun claims to be a Shiva temple hearing in court on September 9 san
Author
First Published Sep 3, 2022, 2:14 PM IST

ನವದೆಹಲಿ (ಸೆ.3): ಬದೌನ್‌ನ ಜಾಮಾ ಮಸೀದಿಯು ನೀಲಕಂಠ ಮಹಾದೇವನ ದೇವಾಲಯವೆಂದು ಹೇಳಲಾಗಿದೆ. ಈ ಕುರಿತು ಸಿವಿಲ್ ನ್ಯಾಯಾಲಯದಲ್ಲಿ ದಾವೆ ಹೂಡಲಾಗಿದೆ. ಶುಕ್ರವಾರ, ಅರ್ಜಿದಾರರು ಸಲ್ಲಿಕೆ ಮಾಡಿದ ಅರ್ಜಿಯ ಮೇರೆಗೆ, ಸಿವಿಲ್ ನ್ಯಾಯಾಲಯದ ನ್ಯಾಯಾಧೀಶರು ದಾವೆ ಹೂಡಲು ಅನುಮತಿ ನೀಡಿದ್ದಾರೆ. ಅದೇ ಸಮಯದಲ್ಲಿ, 9 ಸೆಪ್ಟೆಂಬರ್ ರಂದು ವಿಚಾರಣೆಗೆ ದಿನಾಂಕವನ್ನು ನಿಗದಿಪಡಿಸಲಾಗಿದೆ. ಆದರೆ, ಮಸೀದಿಯ ಅರೇಂಜ್ ಮೆಂಟ್ ಕಮಿಟಿಗೆ ನೋಟಿಸ್ ಜಾರಿ ಮಾಡಲಾಗಿದ್ದು, ಅದರ ಪರ ವಾದವನ್ನು ಹಾಜರುಪಡಿಸುವಂತೆ ಆದೇಶ ನೀಡಲಾಗಿದೆ. ಭಗವಾನ್ ನೀಲಕಂಠ ಮಹಾದೇವ್ ಮಹಾರಾಜ್ ಅವರನ್ನೇ ಅರ್ಜಿಯಲ್ಲಿ ಮೊದಲ ಪಕ್ಷವನ್ನಾಗಿ ಮಾಡಲಾಗಿದೆ. ಮಸೀದಿ ವಿವಾದ ನಿಧಾನವಾಗಿ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಇದೀಗ ಪೊಲೀಸ್ ಆಡಳಿತವೂ ಈ ವಿಚಾರದಲ್ಲಿ ಎಚ್ಚೆತ್ತುಕೊಂಡಿದೆ. ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯ ಸಂಚಾಲಕ ಮುಕೇಶ್ ಪಟೇಲ್, ಭರ್ಕುಯ್ಯನ್ ಪೊಲೀಸ್ ಠಾಣೆ ಸಿವಿಲ್ ಲೈನ್ಸ್ ಗ್ರಾಮದ ನಿವಾಸಿ, ವಕೀಲ ಅರವಿಂದ್ ಪರ್ಮಾರ್, ಜ್ಞಾನ್ ಪ್ರಕಾಶ್, ಡಾ. ಅನುರಾಗ್ ಶರ್ಮಾ ಮತ್ತು ಉಮೇಶ್ ಚಂದ್ರ ಶರ್ಮಾ ನ್ಯಾಯಾಲಯದಲ್ಲಿ ಈ ಕುರಿತಾಗಿ ಅರ್ಜಿ ಸಲ್ಲಿಸಿದ್ದಾರೆ. 

ಇದರ ಪ್ರಕಾರ ಜಾಮಾ ಮಸೀದಿಯು ರಾಜ ಮಹಿಪಾಲನ ಕೋಟೆ ಮತ್ತು ನೀಲಕಂಠ ಮಹಾದೇವನ(Neelakanta Temple) ದೇವಸ್ಥಾನ ಎಂಬ ವಿಷಯವನ್ನು ನ್ಯಾಯಾಲಯಕ್ಕೆ ಸಲ್ಲಿಸಿರುವ ಅರ್ಜಿಯಲ್ಲಿ ತಿಳಿಸಿದ್ದಾರೆ. ನ್ಯಾಯಾಲಯ ಶುಕ್ರವಾರ ಅರ್ಜಿಯನ್ನು ವಿಚಾರಣೆಗೆ ತೆಗೆದುಕೊಂಡಿದ್ದು, ವಿಚಾರಣೆ ಮಾಡುವುದಾಗಿ ಹೇಳಿದೆ.

ಅರ್ಜಿಯಲ್ಲಿ ಕೆಲವೊಂದು ಸಾಕ್ಷ್ಯವನ್ನೂ ಇರಿಸಲಾಗಿದೆ. ಐತಿಹಾಸಿಕ ಪುಸ್ತಕಗಳಲ್ಲಿ ಮಸೀದಿ ಇರುವ ಸ್ಥಳ ನೀಲಕಂಠ ಮಹಾದೇವ ದೇವಾಲಯವಾಗಿತ್ತು. ಅದರ ಉಲ್ಲೇಖವೂ ಕೂಡ ಇದೆ ಎಂದು ಅರ್ಜಿಯಲ್ಲಿ ಸಾಕ್ಷಿಯಾಗಿ ಹೇಳಲಾಗಿದೆ.  ಇದೇ ವೇಳೆ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಕಟಿಸಲಿರುವ ಪುಸ್ತಕದಲ್ಲಿ ನೀಡಿರುವ ಇತಿಹಾಸದಲ್ಲಿ ಈ ಅಂಶ ಇದೆ ಎಂಬ ವಾದವೂ ಇದೆ. ಇದೇ ವೇಳೆ ದೇಶದ ಮೇಲೆ ದಾಳಿ ನಡೆಸಿದ ರಾಜರ ಇತಿಹಾಸದ ಮಾಹಿತಿ ಸೇರಿದಂತೆ ಹಲವು ಸಂಗತಿಗಳನ್ನು ಸೇರಿಸಲಾಗಿದೆ. ಅದೇ ಸಮಯದಲ್ಲಿ, ಬದೌನ್‌ನ ಜಾಮಾ ಮಸೀದಿಯನ್ನು ದೇಶದ ಅತಿದೊಡ್ಡ ಮಸೀದಿಗಳ ಸಾಲಿನಲ್ಲಿ ಇಡಲಾಗಿದೆ. ಇದು ದೇಶದ ಏಳನೇ ದೊಡ್ಡ ಮಸೀದಿಯಾಗಿದೆ. ದೆಹಲಿಯ ಜಾಮಾ ಮಸೀದಿಯ ನಂತರ ಇದು ದೇಶದ ಮೂರನೇ ಅತ್ಯಂತ ಹಳೆಯ ಮಸೀದಿಗಳಲ್ಲಿ ಒಂದಾಗಿದೆ.

ಗ್ಯಾನವಾಪಿ ಪ್ರಕರಣದಲ್ಲಿ ವಿಚಾರಣೆ ಮುಕ್ತಾಯ, ಸೆ. 12ಕ್ಕೆ ತೀರ್ಪು?

ದೇಶದ ಮೇಲೆ ಆಕ್ರಮಣ ಮಾಡಿದ ಮುಸ್ಲಿಂ ದಾಳಿಕೋರರು (Muslim Invaders) ಈ ದೇವಾಲಯವನ್ನು ಜಾಮಾ ಮಸೀದಿಯಾಗಿ (Jama Masjid) ಬದಲಾವಣೆ ಮಾಡಿದ್ದಾರೆ. ಆದರೆ, ಶಿವಲಿಂಗ (Shivling) ಹಾಗೂ ಶಿವನ ಇತರ ಮೂರ್ತಿಗಳನ್ನು ಅದರ ಅಡಿಯಲ್ಲಿ ಸಮಾಧಿ ಮಾಡಲಾಗಿದೆ. ಇವುಗಳ ಪೂಜೆ, ಆರತಿಗೆ ಅವಕಾಶ ಮಾಡಿಕೊಡಬೇಕು. 2005-06ರಲ್ಲಿ ವಾರ್ತಾ ಇಲಾಖೆ ಪ್ರಕಟಿಸಿದ ಪುಸ್ತಕದಲ್ಲೂ ಇದರ ಬಗ್ಗೆ ಮಾಹಿತಿ ಇದೆ. ಈ ದೇವಾಲಯವನ್ನು ಕ್ರಿ.ಶ.905 ರಲ್ಲಿ ರಾಜ ಲಖನ್ಪಾಲ್ ನಿರ್ಮಿಸಿದ ಎಂದು ಹೇಳಲಾಗುತ್ತದೆ. ನಂತರ ಅವನ ವಂಶಸ್ಥ ರಾಜ ಮಹಿಪಾಲನು ಕೋಟೆಯ ರೂಪವನ್ನು ನೀಡಿದ್ದ. ಕ್ರಿ.ಶ 1175 ರಲ್ಲಿ, ರಾಜ ಅಜಯ್ಪಾಲ್ ಇದನ್ನು ನವೀಕರಣ ಮಾಡಿದ. ನಂತರ, ಮೊಘಲ್ ಆಕ್ರಮಣಕಾರ ಇಲ್ತಮಷ್‌ (Iltamush) ಇದರ ಮೇಲೆ ದಾಳಿ ಮಾಡಿದಾಗ, ದೇವಾಲಯದ ಸ್ವರೂಪವನ್ನು ಜಾಮಾ ಮಸೀದಿಯ ರೂಪಕ್ಕೆ ಬದಲಾಯಿಸಲಾಯಿತು.

ಗ್ಯಾನವಾಪಿ ಮಸೀದಿ ‘ಶಿವಲಿಂಗ’ ಪೂಜೆಗೆ ಯತ್ನ: ಶ್ರೀಗಳಿಗೆ ಪೊಲೀಸರ ತಡೆ

ಅದರ ಪಶ್ಚಿಮ-ದಕ್ಷಿಣ ಪ್ರದೇಶದಲ್ಲಿ, ನೀಲಕಂಠ ಮಹಾದೇವ ಮತ್ತು ಅವರ ಕುಟುಂಬದ ವಿಗ್ರಹಗಳು ಮತ್ತು ಶಿವಲಿಂಗವನ್ನು ಹಾನಿಗೊಳಿಸಲಾಯಿತು ಮತ್ತು ಅಲ್ಲಿ ಹೂಳಲಾಯಿತು. ಇನ್ನು ಕೆಲವು ಪುಸ್ತಕಗಳನ್ನು ಉಲ್ಲೇಖಿಸಿದ ಅವರು, ಜಾಮಾ ಮಸೀದಿಯನ್ನು ತನಿಖೆ ಮಾಡಿದರೆ ಕೋಟೆ ಮತ್ತು ದೇವಾಲಯದ ಅವಶೇಷಗಳು ಪತ್ತೆಯಾಗುತ್ತವೆ ಎಂದು ಹೇಳಿದರು. ಇದರ ಗೋಡೆಗಳು ಎರಡು ಗಜಗಳಷ್ಟು ಅಗಲ ಮತ್ತು 60 ಅಡಿ ಎತ್ತರವಿದೆ. ಗುಮ್ಮಟದ ಎತ್ತರ 90 ಅಡಿ, ಉದ್ದ 280 ಅಡಿ ಮತ್ತು ಅಗಲ 228 ಅಡಿ. ಇದು ಎಲ್ಲಾ ಕೋಟೆಗಳ ಸ್ವರೂಪದ್ದಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Follow Us:
Download App:
  • android
  • ios