ಲಖನೌ[ಜ.14]: ಪೌರತ್ವ ತಿದ್ದುಪಡಿ ಕಾಯ್ದೆ (ಸಿಎಎ) ಜಾರಿಯ ಅಧಿಸೂಚನೆಯನ್ನು ಕೇಂದ್ರ ಸರ್ಕಾರ ಹೊರಡಿಸುತ್ತಿದ್ದಂತೆಯೇ ಈ ಕಾಯ್ದೆಯನ್ನು ದೇಶದಲ್ಲೇ ಮೊದಲ ಬಾರಿ ಬಿಜೆಪಿ ಆಳ್ವಿಕೆಯ ಉತ್ತರ ಪ್ರದೇಶ ಸರ್ಕಾರ ಜಾರಿಗೊಳಿಸಿದೆ.

ಆಷ್ಘಾನಿಸ್ತಾನ, ಪಾಕಿಸ್ತಾನ ಹಾಗೂ ಬಾಂಗ್ಲಾದೇಶದಿಂದ ನಿರಾಶ್ರಿತರಾಗಿ ಬಂದು ರಾಜ್ಯದಲ್ಲಿ ನೆಲೆಸಿರುವ ಮುಸ್ಲಿಮೇತರರು ಎಷ್ಟು ಎಂಬ ಅಂಕಿ-ಅಂಶ ಸಲ್ಲಿಸಲು ಯೋಗಿ ಸರ್ಕಾರವು ಎಲ್ಲ ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ. ಸೋಮವಾರದ ಮಾಹಿತಿ ಪ್ರಕಾರ ವಿವಿಧ ಜಿಲ್ಲೆಗಳಿಂದ ಈವರೆಗೆ 32 ಸಾವಿರ ನಿರಾಶ್ರಿತರು ರಾಜ್ಯದಲ್ಲಿದ್ದಾರೆ ಎಂಬ ಮಾಹಿತಿ ಸರ್ಕಾರಕ್ಕೆ ಬಂದಿದೆ.

CAA ವಿರೋಧಿಸಿ ಸುಪ್ರೀಂ ಕದ ತಟ್ಟಿದ ಕೇರಳ: ಕೇಂದ್ರಕ್ಕೆ ಸೆಡ್ಡು ಹೊಡೆದ ಮೊದಲ ರಾಜ್ಯ!

ಉತ್ತರಪ್ರದೇಶದಲ್ಲಿ ಇಂಥ 40 ಸಾವಿರ ನಿರಾಶ್ರಿತರು ಇದ್ದಾರೆ ಎನ್ನಲಾಗಿದ್ದು, ಇವರಲ್ಲಿ ಪೀಲಿಭೀತ್‌ ಜಿಲ್ಲೆಯೊಂದರಲ್ಲೇ ಸುಮಾರು 30-35 ಸಾವಿರ ಜನರಿದ್ದಾರೆ ಎನ್ನಲಾಗಿದೆ.