Asianet Suvarna News Asianet Suvarna News

ಹುಲಿ ಹಿಡಿಯಲು ಇಟ್ಟಿದ್ದ ಬೋನಿಗೆ ತಾನೇ ಬಿದ್ದ ಅರಣ್ಯ ಸಿಬ್ಬಂದಿ

ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಅರಣ್ಯ ಸಿಬ್ಬಂದಿಯೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಲವು ಗಂಟೆಗಳ ಸಾಹಸದ ಬಳಿಕ ಅರಣ್ಯ ಸಿಬ್ಬಂದಿಯನ್ನು ಬೋನಿನಿಂದ ಹೊರತಂದು ರಕ್ಷಿಸಲಾಗಿದೆ.

uttar Pradesh forest guard by accidentally fell into cage which was kept for trap tiger in lakhimpur kheri akb
Author
First Published Sep 2, 2024, 10:46 AM IST | Last Updated Sep 2, 2024, 10:46 AM IST

ಲಖೀಂಪುರ: ಹುಲಿ ಸೆರೆಗೆ ಇರಿಸಲಾಗಿದ್ದ ಬೋನಿನೊಳಗೆ ಅರಣ್ಯ ಸಿಬ್ಬಂದಿಯೆ ಸಿಕ್ಕಿಬಿದ್ದ ವಿಚಿತ್ರ ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ಹಲವು ಗಂಟೆಗಳ ಸಾಹಸದ ಬಳಿಕ ಅರಣ್ಯ ಸಿಬ್ಬಂದಿಯನ್ನು ಬೋನಿನಿಂದ ಹೊರತಂದು ರಕ್ಷಿಸಲಾಗಿದೆ. ಲಖೀಂಪುರ ಖೇರಿಯ ಇಲ್ಲಿನ ಮಹೇಶ್‌ಪುರ ಅರಣ್ಯ ಪ್ರದೇಶದ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. ಹುಲಿ ಹಿಡಿಯಲು ಇಲ್ಲಿ ಬೋನನ್ನು ಸಿದ್ಧಪಡಿಸಲಾಗಿತ್ತು. ಈ ವೇಳೆ ಸಿಬ್ಬಂದಿಯೊಬ್ಬ ಬೋನಿನ ಪರಿಶೀಲನೆಗೆ ಒಳಗೆ ಹೋಗಿದ್ದ ವೇಳೆ ಆಕಸ್ಮಿಕವಾಗಿ ಹೊರಗಿನಿಂದ ಲಾಕ್‌ ಆಗಿದೆ.  ಲಾಕ್‌ನಲ್ಲಿ ದೋಷ ಕಂಡುಬಂದ ಕಾರಣ ಏನು ಮಾಡಿದರೂ ಅದನ್ನು ತೆಗೆಯಲು ಬಂದಿಲ್ಲ. ಹೀಗಾಗಿ ಒಳಗಡೆ ಸಿಕ್ಕಿಬಿದ್ದ ಸಿಬ್ಬಂದಿ ಗಂಟೆಗಳ ಕಾಲ ಗೋಳಾಡಿದ್ದಾನೆ. ಈತನ ಗೋಳಾಟ ಇಡೀ ಅರಣ್ಯಕ್ಕೆ ಕೇಳಿದೆ ಎಂದು ವರದಿಯಾಗಿದ್ದ,  ಬಳಿಕ ಸತತ ಪ್ರಯತ್ನಗಳ ಬಳಿಕ ಕೆಲ ಸಲಕರಣೆಗಳನ್ನು ಬಳಸಿ ಗೇಟ್‌ ಬಾಗಿಲನ್ನು ತೆರಯುವಲ್ಲಿ ಸಿಬ್ಬಂದಿಗಳು ಯಶಸ್ವಿಯಾದರು.

 

 ಗಂಡನೊಂದಿಗೆ ಜಗಳ ಮಾಡುತ್ತಿದ್ದ ಹೆಂಡತಿಯನ್ನ ಎಳೆದೊಯ್ದು ತಿಂದು ತೇಗಿದ ಹುಲಿ!

 

Latest Videos
Follow Us:
Download App:
  • android
  • ios