UP Elections 2022: ಬಿಜೆಪಿ ವಿರುದ್ಧ ಮಹಾಮೈತ್ರಿಕೂಟಕ್ಕೆ ಅಖಿಲೇಶ್‌ ಸಿದ್ಧತೆ!

* ಅಪ್ನಾದಳ, ಆಪ್‌, ಆರ್‌ಎಲ್‌ಡಿ, ಓವೈಸಿ ಜತೆ ಮೈತ್ರಿಗೆ ಚಿಂತನೆ

* ಬಿಜೆಪಿ ವಿರುದ್ಧ ಮಹಾಮೈತ್ರಿಕೂಟಕ್ಕೆ ಅಖಿಲೇಶ್‌ ಸಿದ್ಧತೆ

 

Uttar Pradesh Elections Akhilesh Yadav To Form  mahagathbandhan stop BJP pod

ಲಖನೌ(ನ.25): ಉತ್ತರ ಪ್ರದೇಶ ಚುನಾವಣೆ (Uttar Pradesh Elections) ಸಮೀಪಿಸುತ್ತಿದ್ದಂತೆಯೇ ಮತ್ತೆ ಬಿಜೆಪಿ ಅಧಿಕಾರಕ್ಕೆ ಬರುವುದನ್ನು ತಡೆಗಟ್ಟಲು ಸಮಾಜವಾದಿ ಪಕ್ಷದ ನಾಯಕ ಅಖಿಲೇಶ್‌ ಯಾದವ್‌ (Samajwadi party Leader Akhilesh Yadav) ಅವರು, ‘ಮಹಾಮೈತ್ರಿಕೂಟ’ ರಚಿಸುವ ಸಿದ್ಧತೆ ಆರಂಭಿಸಿದ್ದಾರೆ. ಈ ಮೊದಲೇ ಹೇಳಿದಂತೆ ಅಖಿಲೇಶ್‌ ಅವರು ಕಾಂಗ್ರೆಸ್‌ ಆಗಲಿ ಅಥವಾ ಬಿಎಸ್‌ಪಿ (BSP) ಆಗಲಿ- ಯಾವುದೇ ದೊಡ್ಡ ಪಕ್ಷದ ಜತೆ ಮೈತ್ರಿಗೆ ಮುಂದಾಗಿಲ್ಲ. ಆದರೆ ಸಣ್ಣಪುಟ್ಟಪಕ್ಷಗಳ ಜತೆ ಮೈತ್ರಿ ಮಾತುಕತೆ ಆರಂಭಿಸಿದ್ದಾರೆ. ಎಲ್ಲ ಅಂದುಕೊಂಡಂತೆ ಆದರೆ ಆಪ್‌, ಅಪ್ನಾದಳ (ಕೆ), ಅಸಾದುದ್ದೀನ್‌ ಒವೈಸಿ (Asaduddin Owaisi) ಅವರ ಎಐಎಂಐಎಂ ಹಾಗೂ ಆರ್‌ಎಲ್‌ಡಿ ಜತೆ ಎಸ್‌ಪಿ ಮೈತ್ರಿ ಏರ್ಪಡಲಿದೆ.

ಬುಧವಾರ ಆಪ್‌ ನಾಯಕ ಸಂಜಯ ಸಿಂಗ್‌ ಹಾಗೂ ಅಪ್ನಾದಳ (ಕೆ) ನಾಯಕಿ ಕೃಷ್ಣಾ ಪಟೇಲ್‌ ಅವರ ಜತೆ ಅಖಿಲೇಶ್‌ ಚರ್ಚಿಸಿದರು. ‘ರಣನೀತಿಯ ಚರ್ಚೆ ಇದು. ಫಲಿತಾಂಶದ ಬಗ್ಗೆ ನಂತರ ತಿಳಿಸುವೆ’ ಎಂದು ಸಂಜಯ್‌ ಹೇಳಿದರು ಹಾಗೂ ‘ಎಸ್‌ಪಿ ಜತೆ ಮೈತ್ರಿಗೆ ಉತ್ಸುಕಳಾಗಿದ್ದೇನೆ’ ಎಂದು ಕೃಷ್ಣಾ ಪಟೇಲ್‌ ಹೇಳಿದರು.

ಇನ್ನು ಎಐಎಂಐಎಂ ಜತೆ ಮಾತುಕತೆಗೆ ಸಿದ್ಧ ಎಂದು ಎಸ್‌ಪಿ ಮಿತ್ರಪಕ್ಷ ಎಸ್‌ಬಿಜೆಪಿ ನಾಯಕ ಓಂ ಪ್ರಕಾಶ್‌ ರಾಜಭರ್‌ ಹೇಳಿದ್ದಾರೆ. ಆದರೆ ಒವೈಸಿಗೆ 10 ಸೀಟು ಮಾತ್ರ ಬಿಟ್ಟುಕೊಡುವುದಾಗಿ ಸ್ಪಷ್ಟಪಡಿಸಿದ್ದಾರೆ.

ಜಯಂತ್ ಚೌಧರಿ ಭೇಟಿ

ಇನ್ನು ಮಂಗಳವಾರವಷ್ಟೇ ಅಖಿಲೇಶ್ ಯಾದವ್ ಆರ್‌ಎಲ್‌ಡಿ ನಾಯಕ ಜಯಂತ್ ಚೌಧರಿಯನ್ನು ಭೇಟಿಯಾಗಿದ್ದರು. ಈ ಭೇಟಿ ಬಳಿಕ ಜಯಂತ್ ಚೌಧರಿ (Jayant Chaudhary) ಅವರು ಫೋಟೋ ಒಂದನ್ನು ಹಂಚಿಕೊಂಡಿದ್ದಾರೆ ಮತ್ತು 'ಮುಂದುವರೆಯುವ ಹೆಜ್ಜೆ' ಎಂದು ಬರೆದಿದ್ದಾರೆ. ಅತ್ತ ಅಖಿಲೇಶ್ ಯಾದವ್ ಕೂಡ ಟ್ವೀಟ್ ಮಾಡಿದ್ದಾರೆ. ‘ಶ್ರೀ ಜಯಂತ್ ಚೌಧರಿ ಅವರೊಂದಿಗೆ ಬದಲಾವಣೆಯ ಕಡೆಗೆ’ ಎಂದು ಫೋಟೋಗೆ ಕ್ಯಾಪ್ಶನ್ ಕೊಟ್ಟಿದ್ದಾರೆ. ಮೂಲಗಳ ಪ್ರಕಾರ, ಬುಧವಾರ ಇಬ್ಬರೂ ನಾಯಕರು ಮೈತ್ರಿಯನ್ನು (Alliance) ಘೋಷಿಸಬಹುದು. ಸೀಟು ಹಂಚಿಕೆಗೆ ಸಂಬಂಧಿಸಿದಂತೆ ಒಪ್ಪಂದ ಮಾಡಿಕೊಳ್ಳಲಾಗಿದೆ. ಜಯಂತ್ ಚೌಧರಿ ಅವರು 50 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದಾರೆ. ಆರ್‌ಎಲ್‌ಡಿ 36 ಸ್ಥಾನಗಳಲ್ಲಿ ಸ್ಪರ್ಧಿಸಲಿದೆ. ಆರ್‌ಎಲ್‌ಡಿ 50 ಸ್ಥಾನಗಳಿಗೆ ಬೇಡಿಕೆ ಇಟ್ಟಿದ್ದು, ಎಸ್‌ಪಿ 30ರಿಂದ 32 ಸ್ಥಾನ ನೀಡಲು ಸಿದ್ಧವಿದೆ ಎನ್ನಲಾಗಿದೆ. 

बढ़ते कदम! pic.twitter.com/NqYFSz4MV1

— Jayant Singh (@jayantrld) November 23, 2021

ಸೀಟಿನ ವಿಚಾರವಾಗಿ ಮುಂದುವರೆದ ಸಸ್ಪೆನ್ಸ್ 

ಯುಪಿ ವಿಧಾನಸಭೆ ಚುನಾವಣೆಗೆ ಇನ್ನು ಮೂರು ತಿಂಗಳು ಮಾತ್ರ ಬಾಕಿ ಇದೆ. ಜಯಂತ್ ಚೌಧರಿ ಅವರು ಎಸ್‌ಪಿ ಜೊತೆಗಿನ ಸೀಟು ಹಂಚಿಕೆಯನ್ನು ಶೀಘ್ರದಲ್ಲೇ ಅಂತಿಮಗೊಳಿಸಬೇಕೆಂದು ಬಯಸಿದ್ದಾರೆ. ಜಯಂತ್ ಚೌಧರಿ ಪಶ್ಚಿಮ ಯುಪಿ ಸ್ಥಾನಗಳನ್ನು ಕೇಳುತ್ತಿದ್ದಾರೆ. ಇದರಲ್ಲಿ ಮೀರತ್, ಮುಜಾಫರ್‌ನಗರ, ಶಾಮ್ಲಿ, ಮಥುರಾ, ಬುಲಂದ್‌ಶಹರ್‌ನ ಅನೇಕ ಅಸೆಂಬ್ಲಿಗಳಿವೆ. ಸೀಟುಗಳ ವಿಚಾರದಲ್ಲಿ ಜಯಂತ್ ಪ್ರಸ್ತಾವನೆಗೆ ಅಖಿಲೇಶ್ ಯಾದವ್ ಒಪ್ಪಿಗೆ ನೀಡಿಲ್ಲ ಎಂದು ವರದಿಯಾಗಿದೆ.

ತಲೆಕೆಳಗಾದ ಚುನಾವಣಾ ಲೆಕ್ಕಾಚಾರ, ಗೊಂದಲದಲ್ಲಿ ಪಕ್ಷಗಳು!

ಎಲ್ಲಾ ಮೂರು ಕೃಷಿ ಕಾನೂನುಗಳನ್ನು (Farm Laws) ಹಿಂತೆಗೆದುಕೊಳ್ಳುವ ಪ್ರಧಾನಿ ನರೇಂದ್ರ ಮೋದಿಯವರ (Prime Minister Narendra Modi) ದೊಡ್ಡ ನಿರ್ಧಾರದ ನಂತರ, ಈಗ 2022 ರ ಚುನಾವಣೆಗೆ ಬಹಳ ಮುಖ್ಯವಾದ ಉತ್ತರ ಪ್ರದೇಶ ರಾಜಕೀಯದಲ್ಲಿ ಮಹತ್ವದ ಬದಲಾವಣೆಗಳಾಗುವ ಸುಳಿವು ಲಭಿಸಿದೆ. ಶನಿವಾರ, ಆರ್‌ಎಲ್‌ಡಿ ಅಧ್ಯಕ್ಷ (RLD President) ಜಯಂತ್ ಚೌಧರಿ (Jayant Chaudhari) ಅವರ ಸಾರ್ವಜನಿಕ ಸಭೆಯಲ್ಲಿ ಸುಮಾರು ಶೇ 70 ರಷ್ಟು ಮುಸ್ಲಿಮರಿದ್ದರು (Muslims), ಆದರೂ ಜಯಂತ್‌ರವರು ರಾಮ್ ರಾಮ್ ಎನ್ನುವ ಮೂಲಕ ಸಾರ್ವಜನಿಕ ಸಭೆಯನ್ನು ಪ್ರಾರಂಭಿಸಿದರು. ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್ ಯಾದವ್ (Akhilesh Yadav) ಜೊತೆಗಿನ ಮೈತ್ರಿಯ ಬಗ್ಗೆ ಅವರು ಪರೋಕ್ಷವಾಗಿ ಮಾತನಾಡಿರುವುದು ಕಂಡುಬಂದಿದೆ. ಕೃಷಿ ಕಾನೂನು ಹಿಂಪಡೆದ ನಂತರ ಸಮಾಜವಾದಿ ಪಕ್ಷ (Samajwadi Party) ಅವರಿಗೆ ಹೆಚ್ಚಿನ ಸ್ಥಾನಗಳನ್ನು ನೀಡುವ ಉತ್ಸಾಹದಲ್ಲಿ ಇಲ್ಲ ಎಂದು ಮೂಲಗಳು ತಿಳಿಸಿವೆ.

Latest Videos
Follow Us:
Download App:
  • android
  • ios