Asianet Suvarna News Asianet Suvarna News

Road Accident ಉತ್ತರ ಪ್ರದೇಶ ನೂತನ ಉಪ ಮುಖ್ಯಮಂತ್ರಿ ಪುತ್ರ ಸಂಚರಿಸುತ್ತಿದ್ದ ಕಾರು ಅಪಘಾತ!

  • ಉತ್ತರ ಪ್ರದೇಶದ ಜಲೌನ್ ಬಳಿ ಸಂಭವಿಸಿದ ಅಪಘಾತ
  • ಟ್ರಾಕ್ಟರ್ ಹಾಗೂ ಫಾರ್ಚುನರ್ ಕಾರು ಡಿಕ್ಕಿ
  • ಯುಪಿ ನೂತ ಡಿಸಿಎಂ ಪುತ್ರ ಸಂಚರಿಸುತ್ತಿದ್ದ ಕಾರು
Uttar Pradesh DCM Keshav Prasad Maurya son met with a road accident no casualties reported ckm
Author
Bengaluru, First Published Mar 26, 2022, 6:41 PM IST | Last Updated Mar 26, 2022, 6:41 PM IST

ಉತ್ತರ ಪ್ರದೇಶ(ಮಾ.26): ಉತ್ತರ ಪ್ರದೇಶದಲ್ಲಿ ಯೋಗಿ ಆದಿತ್ಯನಾಥ್ ನೇತೃತ್ವದ 2.0 ಸರ್ಕಾರ ರಚನೆಯಾಗಿದೆ. ಯುಪಿ ಉಪ ಮುಖ್ಯಮಂತ್ರಿಯಾಗಿ ಕೇಶವ್ ಪ್ರಸಾದ್ ಮೌರ್ಯ ನಿನ್ನೆ(ಮಾ.25) ಪ್ರಮಾಣ ವಚನ ಸ್ವೀಕರಿಸಿದ್ದಾರೆ. ಆದರೆ ಒಂದೇ ದಿನಕ್ಕೆ ಆಘಾತವೊಂದು ಎದುರಾಗಿದೆ. ಕೇಶವ್ ಪ್ರಸಾದ್ ಮೌರ್ಯ ಪುತ್ರ ಯೋಗೇಶ್ ಕುಮಾರ್ ಮೌರ್ಯ ಸಂಚರಿಸುತ್ತಿದ್ದ ಫಾರ್ಚುನರ್ ಕಾರು ರಸ್ತೆ ಅಪಘಾತಕ್ಕೀಡಾಗಿದೆ. ಅದೃಷ್ಟವಶಾತ್ ಯೋಗೇಶ್ ಕುಮಾರ್ ಮೌರ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಜಲೌನ್ ಜಿಲ್ಲೆಯ ಅಲಾಂಪುರ್ ಬೈಪಾಸ್‌ನ ಕಪ್ಲಿಯಲ್ಲಿ ನಡೆದಿದೆ. ಟ್ರಾಕ್ಟರ್ ಹಾಗೂ ಯೋಗೇಶ್ ಕುಮಾರ್ ಮೌರ್ಯ ಸಂಚರಿಸುತ್ತಿದ್ದ ಟೋಯೋಟಾ ಫಾರ್ಚುನರ್ ಕಾರು ಡಿಕ್ಕಿಯಾಗಿದೆ. ಫಾರ್ಚುನರ್ ಕಾರಿನ  ಹಿಂಬಾಗ ನಜ್ಜುಗುಜ್ಜಾಗಿದೆ. ಅಪಾಯದಿಂದ ಪಾರಾಗಿರುವ ಯೋಗೇಶ್ ಕುಮಾರ್ ಮೌರ್ಯ ಕ್ಷೇಮವಾಗಿದ್ದಾರೆ.

ಯೋಗಿ ಸಂಪುಟದಲ್ಲಿ ಹೊಸ ಮುಸ್ಲಿಂ ಮುಖ, ಪ್ರಮುಖ ಜವಾಬ್ದಾರಿ ಪಡೆದ ಡ್ಯಾನಿಶ್ ಆಜಾದ್ ಅನ್ಸಾರಿ ಯಾರು ಗೊತ್ತಾ?

ಅಪಘಾತ ಸಂಭವಿಸಿದ ಮರುಕ್ಷಣವೇ ಕಪ್ಲಿ ಪೊಲೀಸರು ಸ್ಥಳಕ್ಕೆ ಧಾವಿಸಿದ್ದಾರೆ. ಘಟನೆಯಲ್ಲಿ ಯಾರಿಗೂ ಹಾನಿ ಸಂಭವಿಸಿಲ್ಲ ಅನ್ನೋದೇ ಸಮಾಧಾನ. ಈ ಕುರಿತು ಯುಪಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೇಶವ್ ಪ್ರಸಾದ್ ಮೌರ್ಯರನ್ನು ಟಾರ್ಗೆಟ್ ಮಾಡಿ ಮಾಡಲಾಗಿರುವ ಅಪಘಾತ ಅನ್ನೋ ಮಾತುಗಳು ಕೇಳಿಬಂದಿದೆ. ಈ ಅಪಘಾತ ಆಕಸ್ಮಿಕವಾಗಿ ಸಂಭವಿಸಿದ ಅಪಘಾತವಲ್ಲ ಅನ್ನೋ ಮಾತುಗಳು ಕೇಳಿಬರುತ್ತಿದೆ. ಹೀಗಾಗಿ ಪೊಲೀಸರು ತನಿಖೆ ಚುರುಕುಗೊಳಿಸಿದ್ದಾರೆ.

ಕೇಶವ್ ಪ್ರಸಾದ್ ಮೌರ್ಯ ಉಪ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಮರು ದಿನವೇ ಪುತ್ರನ ಕಾರು ಅಪಘಾತಕ್ಕೀಡಾಗಿರುವುದು ಸಹಜವಾಗಿ ಕೇಶವ್ ಪ್ರಸಾದ್ ಮೌರ್ಯ ಅಭಿಮಾನಿ ಹಾಗೂ ಕುಟುಂಬ ವರ್ಗದಲ್ಲಿ ಆತಂಕಕ್ಕೆ ಕಾರಣವಾಗಿದೆ. 

ಯೋಗಿ ಪ್ರಮಾಣವಚನ ಸ್ವೀಕರಿಸಿದ ಕ್ರೀಡಾಂಗಣ ಕಟ್ಟಿದ್ದು ನಾವು, ಅಖಲೇಶ್ ಯಾದವ್ ಹೇಳಿಕೆಗೆ ಆಕ್ರೋಶ!

ಚುನಾವಣೆಯಲ್ಲಿ ಸೋತರು ಕೇಶವ ಪ್ರಸಾದ ಮೌರ್ಯಗೆ ಮತ್ತೊಮ್ಮೆ ಉಪ ಮುಖ್ಯಮಂತ್ರಿ ಹುದ್ದೆ ನೀಡಲಾಗಿದೆ. ಇನ್ನು ಈ ಹಿಂದೆ ಡಿಸಿಎಂ ಆಗಿದ್ದ ದಿನೇಶ್‌ ಶರ್ಮಾ ಬದಲಾಗಿ ಬ್ರಜೇಶ್‌ ಪಾಠಕ್‌ಗೆ ಡಿಸಿಎಂ ಹುದ್ದೆ ನೀಡಲಾಗಿದೆ.2017ರಲ್ಲಿ ಬಿಜೆಪಿ ಅಧ್ಯಕ್ಷರಾಗಿದ್ದು ಹಿಂದುಳಿದ ಜಾತಿಗೆ ಸೇರಿದ್ದ ಕೇಶವ ಪ್ರಸಾದ ಮೌರ್ಯ. ಹೀಗಾಗಿ ಎಲ್ಲ ಕಡೆ ಬಿಜೆಪಿ ಅಧ್ಯಕ್ಷರೇ ಮುಖ್ಯಮಂತ್ರಿ ಆಗುವ ರೀತಿಯಲ್ಲಿ ಯುಪಿ ಯಲ್ಲಿ ಕೂಡ ಅತೀ ಹಿಂದುಳಿದ ಕೇಶವ ಮೌರ್ಯ ಮುಖ್ಯಮಂತ್ರಿ ಆಗುತ್ತಾರೆ ಎಂದು ಬಿಜೆಪಿ ತೆರೆಯ ಹಿಂದೆ ಬಿಂಬಿಸಿತ್ತು.

ಅದ್ದೂರಿಯಾಗಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಿ ಮೋದಿ, ಬಿಜೆಪಿ ರಾಷ್ಟಾ್ರಧ್ಯಕ್ಷ ಜೆ.ಪಿ.ನಡ್ಡಾ, ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಕ್ಷಣಾ ಸಚಿವ ರಾಜನಾಥ್‌ ಸಿಂಗ್‌ ಸೇರಿದಂತೆ ಹಲವು ಕೇಂದ್ರ ಸಚಿವರು, ಕರ್ನಾಟಕದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸೇರಿದಂತೆ ಬಿಜೆಪಿ ಆಡಳಿತವಿರುವ ರಾಜ್ಯಗಳ ಮುಖ್ಯಮಂತ್ರಿಗಳು, ಬಿಹಾರದ ಮುಖ್ಯಮಂತ್ರಿ ಹಾಗೂ ಎನ್‌ಡಿಎ ಮಿತ್ರ ಪಕ್ಷವಾದ ಜೆಡಿಯು ನಾಯಕರಾದ ನಿತೀಶ್‌ ಕುಮಾರ್‌, ಖ್ಯಾತ ಉದ್ಯಮಿಗಳು ಹಾಗೂ ಮನರಂಜನಾ ಕ್ಷೇತ್ರದ ದಿಗ್ಗಜರು ಭಾಗವಹಿಸಿದ್ದರು.

403 ಸ್ಥಾನ ಬಲದ ವಿಧಾನಸಭೆಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಮಿತ್ರಪಕ್ಷಗಳ ಜೊತೆಗೂಡಿ 273 ಸ್ಥಾನ ಗೆಲ್ಲುವ ಮೂಲಕ ಅಧಿಕಾರ ಪಡೆದುಕೊಂಡಿತ್ತು.

ಯೋಗಿ ಆದಿತ್ಯನಾಥ್‌ ಮತ್ತೆ ಅಧಿಕಾರ ಸ್ವೀಕರಿಸುತ್ತಿರುವುದಕ್ಕೆ ಉತ್ತರಪ್ರದೇಶದ ಜನ ಬಹಳ ಉತ್ಸಾಹಿತರಾಗಿರುವುದು ಎಲ್ಲೆಲ್ಲೂ ಕಂಡು ಬಂತು, ರಸ್ತೆ ಇಕ್ಕೆಲಗಳಲ್ಲಿ, ವಿಮಾನ ನಿಲ್ದಾಣ, ಬಸ್‌ ನಿಲ್ದಾಣಗಳಲ್ಲಿ ನೂರಾರು ತಂಡಗಳ ನೃತ್ಯ ಪ್ರದರ್ಶನ, ಬ್ಯಾಂಡ್‌, ವಾದ್ಯ ಇತ್ಯಾದಿಗಳನ್ನು ನುಡಿಸುತ್ತಾ ಜನರು ಸಂಭ್ರಮಿಸುತ್ತಿದ್ದರು ಎಂದು ಶ್ರೀಗಳೊಂದಿಗೆ ತೆರಳಿರುವ ವಾಸುದೇವ ಭಟ್‌ ಪೆರಂಪಳ್ಳಿ ಪ್ರತ್ಯಕ್ಷ ಮಾಹಿತಿ ನೀಡಿದ್ದಾರೆ.

Latest Videos
Follow Us:
Download App:
  • android
  • ios