Asianet Suvarna News Asianet Suvarna News

ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ನಿವಾಸದ ಬಳಿ ಬಾಂಬ್, ಬೆದರಿಕೆ ಕರೆಯಿಂದ ಹೆಚ್ಚಿದ ಆತಂಕ!

ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಅದಿತ್ಯಾನಥ್ ನಿವಾಸದ ಬಳಿ ಬಾಂಬ್ ಇಡಲಾಗಿದೆ ಅನ್ನೋ ಬೆದರಿಕೆ ಕರೆಯಿಂದ ಹೆಚ್ಚುವರಿ ಪೊಲೀಸರು ಸ್ಥಳಕ್ಕೆ ದೌಡಾಯಿಸಿದ್ದಾರೆ. ಸ್ಥಳಕ್ಕೆ ಆಗಮಿಸಿರುವ ಬಾಂಬ್ ನಿಷ್ಕ್ರೀಯದಳ ಶೋಧಕಾರ್ಯ ನಡೆಸುತ್ತಿದೆ.

Uttar Pradesh CM Yogi adityanath receives bomb threat near residence police claims it was hoax call ckm
Author
First Published Feb 17, 2023, 5:54 PM IST

ಲಖನೌ(ಫೆ.17): ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಲಖನೌ ನಿವಾಸದ ಬಳಿ ಬಾಂಬ್ ಇಡಲಾಗಿದೆ ಅನ್ನೋ ಕರೆ ತೀವ್ರ ಆತಂಕಕ್ಕೆ ಕಾರಣವಾಗಿದೆ. ಈ ಮಾಹಿತಿ ಸಿಗುತ್ತಿದ್ದಂತೆ ಪೊಲೀಸರು ಅಲರ್ಟ್ ಆಗಿದ್ದಾರೆ. ಇತ್ತ ಬಾಂಬ್ ನಿಷ್ಕ್ರೀಯದಳ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಇದು ಹುಸಿ ಬಾಂಬ್ ಕರೆಯಾಗಿರಬಹುದು ಎಂದು ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ. ಆದರೆ ಬಾಂಬ್ ನಿಷ್ಕ್ರೀಯದಳ ಶೋಧಕಾರ್ಯದ ಬಳಿಕವೇ ಈ ಕುರಿತು ಸ್ಪಷ್ಟ ಚಿತ್ರಣ ಸಿಗಲಿದೆ ಎಂದು ಪೊಲೀಸರು ಹೇಳಿದ್ದಾರೆ.

ಬೆದರಿಕೆ ಕರೆಯಿಂದಾಗಿ ಆತಂಕ ಹೆಚ್ಚಿದೆ. ಪದೇ ಪದೇ ಯೋಗಿ ಆದಿತ್ಯನಾಥ್‌ಗೆ ಬೆದರಿಕೆಗಳು ಬರುತ್ತಿವೆ. ಇದೀಗ ಈ ಬಾಂಬ್ ಕರೆಯಿಂದ ಯೋಗಿ ಆದಿತ್ಯನಾಥ್ ನಿವಾಸದ ಸುತ್ತ ಮುತ್ತ ಭದ್ರತೆ ಹೆಚ್ಚಿಸಲಾಗಿದೆ. ಲಖನೌ ನಿವಾಸ ಸಮೀಪದ ರಸ್ತೆಗಳಲ್ಲಿ ಪೊಲೀಸರು ನಾಕಾಬಂಧಿ ಹಾಕಿದ್ದಾರೆ. ವಾಹನಗಳ ತಪಾಸಣೆ ನಡೆಸುತ್ತಿದ್ದಾರೆ. ಮತ್ತೊಂದು ಪೊಲೀಸರ ತಂಡದ ಲಖನೌ ನಗರ ಸುತ್ತ ಗಸ್ತು ತಿರುಗಿ ಅನುಮಾನಸ್ಪದ ವ್ಯಕ್ತಿಗಳ ಕುರಿತು ಮಾಹಿತಿ ಕಲೆ ಹಾಕುತ್ತಿದ್ದಾರೆ. 

ಪ್ರಚೋದನಕಾರಿ ಹೇಳಿಕೆ ಪ್ರಕರಣ 2019, ಯೋಗಿ ವಿರುದ್ಧ ಅಬ್ಬರಿಸಿದ ಅಜಂ ಖಾನ್‌ಗೆ ಜೈಲು!

ಇದುವರೆಗೆ ಯಾವುದೇ ಬಾಂಬ್ ಪತ್ತೆಯಾಗಿಲ್ಲ. ಸಿಎಂ ನಿವಾಸದ ಬಳಿ ಬಹುತೇಕ ಶೋಧ ಕಾರ್ಯ ಮುಕ್ತಾಯಗೊಂಡಿದೆ. ಆದರೆ ಯಾವುದೇ ಬಾಂಬ್  ಪತ್ತೆಯಾಗಿಲ್ಲ. ಹೀಗಾಗಿ ಇದು ಹುಸಿ ಬಾಂಬ್ ಬೆದರಿಕೆ ಕರೆ ಎಂದು ಪೊಲೀಸರು ಹೇಳಿದ್ದಾರೆ. ಇದೀಗ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಗಾಗಿ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಯೋಗಿ ಆದಿತ್ಯನಾಥ್‌ಗೆ ಬೆದರಿಕೆ ಹೆಚ್ಚಿರುವ ಕಾರಣ ಪ್ರತಿ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗುತ್ತದೆ. ಹೀಗಾಗಿ ಈ ಕರೆಯನ್ನು ಗಂಭೀರವಾಗಿ ಪರಿಗಣಿಸಲಾಗಿತ್ತು. ಇದೀಗ ಹುಸಿ ಬಾಂಬ್ ಕರೆ ಮಾಡಿದ ವ್ಯಕ್ತಿಯನ್ನು ಪತ್ತೆ ಹಚ್ಚಿ ಕಾನೂನು ರೀತಿ ಕ್ರಮ ಕೈಗೊಳ್ಳುತ್ತೇವೆ ಎಂದು ಪೊಲೀಸ್ ಅಧಿಕಾರಿ ಹೇಳಿದ್ದಾರೆ. 

ಯೋಗಿ ಆದಿತ್ಯನಾಥ್ ಪದೇ ಪದೇ ಬಾಂಬ್ ಬೆದರಿಕೆ ಸ್ವೀಕರಿಸಿದ್ದಾರೆ. ಕಳೆದ ವರ್ಷ ಆಗಸ್ಟ್ 15 ರಂದು ಯೋಗಿ ಆದಿತ್ಯನಾಥ್ ಹಾಗೂ ಬಿಜೆಪಿ ನಾಯಕ ದೇವೇಂದ್ರ ತಿವಾರಿಯನ್ನು ಬಾಂಬ್ ಮೂಲಕ ಹತ್ಯೆ ಮಾಡುವುದಾಗಿ ಬೆದರಿಕೆ ಪತ್ರವೊಂದು ಪತ್ತೆಯಾಗಿತ್ತು. ದೇವೇಂದ್ರ ತಿವಾರಿ ನಿವಾಸದ ಬಳಿಕ ಬ್ಯಾಗ್ ಒಂದರಲ್ಲಿ ಈ ಪತ್ರ ಪತ್ತೆಯಾಗಿತ್ತು. ಸಹದವಾಗಿ ಸ್ವಾತಂತ್ರ್ಯ ದಿನಾಚರಣೆ ವೇಳೆ ಉಗ್ರರ ದಾಳಿ ಸಾಧ್ಯತೆಗಳು ಇರುತ್ತವೆ. ಹೀಗಾಗಿ ಭಾರಿ ಭದ್ರತೆ ನಿಯೋಜಿಸಲಾಗಿತ್ತು. 2022ರ ಜೂನ್ ತಿಂಗಳಲ್ಲಿ ಯೋಗಿ ಆದಿತ್ಯನಾಥ್ ಬಾಂಬ್ ಮೂಲಕ ಸ್ಫೋಟಿಸುವುದಾಗಿ ವ್ಯಕ್ತಿಯೊಬ್ಬ ಬೆದರಿಕೆ ಹಾಕಿದ್ದ. ಟ್ವಿಟರ್ ಮೂಲಕ ಬೆದರಿಕೆ ಹಾಕಿದ್ದ ವ್ಯಕ್ತಿಯನ್ನು ಪೊಲೀಸರು ಬಂಧಿಸಿದ್ದರು.

Besharam Rang ಗೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಹೇಳಿದ್ದೇನು?

2020ರಲ್ಲಿ ಪೊಲೀಸ್ ಮುಖ್ಯಕಚೇರಿ ವ್ಯಾಟ್ಸ್ಆ್ಯಪ್ ನಂಬರ್‌ಗೆ ಇದೇ ರೀತಿಯ ಬೆದರಿಕೆ ಸಂದೇಶ ಬಂದಿತ್ತು. ಬಾಂಬ್ ಮೂಲಕ ಯೋಗಿ ಆದಿತ್ಯನಾಥ್ ಹತ್ಯೆಗೈಯುವುದಾಗಿ ಬೆದರಿಕೆ ಸಂದೇಶ ಭಾರಿ ಆತಂಕಕ್ಕೆ ಕಾರಣಾಗಿತ್ತು. ಈ ವೇಳೆಯೂ ಯೋಗಿ ಆದಿತ್ಯನಾಥ್ ಕಾರ್ಯಕ್ರಮಗಳು ಹಾಗೂ ನಿವಾಸದ ಸುತ್ತ ಭಾರಿ ಭದ್ರತೆ ನಿಯೋಜಿಸಲಾಗಿತ್ತು.
 

Follow Us:
Download App:
  • android
  • ios