ಧಾರ್ಮಿಕ ಸ್ಥಳಗಳಲ್ಲಿದ್ದ 778 ಧ್ವನಿವರ್ಧಕಗಳನ್ನು ತೆರವು ಮಾಡಿದ ಉತ್ತರ ಪ್ರದೇಶ!

ಯೋಗಿ ಆದಿತ್ಯನಾಥ್ ಅವರ ಆದೇಶದ ಬಳಿಕ, ಕಳೆದ 48 ಗಂಟೆಗಳಲ್ಲಿ ವಿವಿಧ ಧರ್ಮದ ಧಾರ್ಮಿಕ ಪ್ರದೇಶಗಳಲ್ಲಿದ್ದ 778 ಧ್ವನಿವರ್ಧಕಗಳನ್ನು ಸ್ಥಳೀಯ ಆಡಳಿತ ತೆರವು ಮಾಡಿದೆ.
 

After Chief Minister Yogi Adityanath Order 778 loud speakers removed in Uttar Pradesh religious sites san

ಲಕ್ನೋ (ಏ.27): ಮಸೀದಿಗಳಲ್ಲಿ ( Mosque ) ಧ್ವನಿವರ್ಧಕ ( Loud Speakers ) ಬಳಕೆ ಮಾಡುವಂತೆ ಕುರಿತಾಗಿ ದೇಶದಲ್ಲಿ ವಿವಾದ ಎದ್ದಿರುವ ನಡುವೆಯೇ, ರಾಜಕಾರಣಿಗಳೂ ಕೂಡ ಪರ ವಿರೋಧದ ಚರ್ಚೆ ಕೂಡ ಆರಂಭವಾಗಿದೆ. ಈ ನಡುವೆ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳನ್ನು ಬಳಕೆ ಮಾಡುವ ನಿಟ್ಟಿನಲ್ಲಿ ಯೋಗಿ ಆದಿತ್ಯನಾಥ್ (Yogi Adityanath) ಸರ್ಕಾರ ಈಗಾಗಲೇ ಕ್ರಮ ಕೈಗೊಳ್ಳಲು ಆರಂಭಿಸಿದೆ. ಮೂಲಗಳ ಪ್ರಕಾರ ಕಲೆದ 48 ಗಂಟೆಗಳಲ್ಲಿ ಉತ್ತರ ಪ್ರದೇಶದಾದ್ಯಂತ (Uttar Pradesh) 778 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.

ಇದರಲ್ಲಿ 711 ಧ್ಬನಿವರ್ಧಕಗಳನ್ನು ರಾಜಧಾನಿ ಲಕ್ನೋ (Lucknow) ಪ್ರದೇಶವೊಂದರಿಂದಲೇ ತೆಗೆದುಹಾಕಲಾಗಿದ್ದರೆ, ರಾಜ್ಯಾದ್ಯಂತ 21 ಸಾವಿರಕ್ಕೂ ಅಧಿಕ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಬಳಕೆಗೆ ಅವಕಾಶ ನೀಡಲಾಗಿದ್ದರೂ, ಇದರ ಶಬ್ದದ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ. ಲಕ್ನೋ ನಂತರ ಆಗ್ರಾ ವಲಯದಿಂದ ಅಂದಾಜು 30 ಧ್ವನಿವರ್ಧಕಗಳನ್ನಯ ತೆಗೆದುಹಾಕಲಾಗಿದ್ದರೆ, ಗೌತಮ ಬುದ್ಧ ನಗರದಿಂದ 19, ಕಾನ್ಪುರ ವಲಯದಲ್ಲಿ 13, ಮೀರತ್ ವಲಯದಿಂದ 2 ಹಾಗೂ ರಾಯ್ ಬರೇಲಿ, ಪ್ರಯಾಗ್ ರಾಜ್ ಹಾಗೂ ವಾರಾಣಾಸಿ ವಲಯದಲ್ಲಿ ತಲಾ ಒಂದು ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದೆ.

ಉಳಿದಂತೆ ರಾಯ್ ಬರೇಲಿ ವಲಯದಿಂದ 5469, ಲಕ್ನೋ ವಲಯದಿಂದ 4803, ಮೀರತ್ ವಲಯದಿಂದ 4711, ಗೋರಖ್ ಪುರ ವಲಯದಿಂದ 2354, ಪ್ರಯಾಗ್ ರಾಜ್ ವಲಯದಿಂದ 1073, ಆಗ್ರಾದಿಂದ 903, ವಾರಾಣಾಸಿಯಿಂದ 887, ಕಾನ್ಪುರ ವಲಯದಿಂದ 359, ಗೌತಮ ಬುದ್ಧ ನಗರದಿಂದ 378, ವಾರಾಣಾಸಿ ಸಿಟಿಯಿಂದ 106 ಹಾಗೂ ಕಾನ್ಪುರ ಸಿಟಿಯಲ್ಲಿ 95 ಧ್ವನಿವರ್ಧಕಗಳಲ್ಲಿ ಶಬ್ದದ ಪ್ರಮಾಣವನ್ನು ತೀವ್ರವಾಗಿ ಕಡಿಮೆ ಮಾಡಲಾಗಿದೆ.

ಇದಲ್ಲದೆ, ಲಕ್ನೋ ಪೊಲೀಸರು ಕೆಲ ಧಾರ್ಮಿಕ ಸ್ಥಳಗಳಿಗೆ ತೆರಳಿ ಅಕ್ರಮವಾಗಿ ಎಷ್ಟು ಧ್ವನಿವರ್ಧಕಗಳನ್ನು ಅಳವಡಿಸಲಾಗಿದೆ ಅದರ ಶಬ್ದದ ಪ್ರಮಾಣ ಎಷ್ಟು ಎನ್ನುವುದನ್ನು ಪರಿಶೀಲನೆ ಮಾಡುತ್ತಿದ್ದಾರೆ. ಇದಲ್ಲದೇ ಧ್ವನಿವರ್ಧಕಕ್ಕೆ ಅವಕಾಶ ಇದೆಯೇ ಅಥವಾ ಇಲ್ಲವೇ ಎಂಬುದನ್ನು ಕೂಡ ಪರಿಶೀಲಿಸಲಾಗುತ್ತಿದೆ. ನಿಯಮ ಉಲ್ಲಂಘಿಸಿದವರಿಗೆ ನೋಟಿಸ್ ನೀಡಲಾಗುತ್ತಿದೆ. ಲಕ್ನೋದ ಕ್ಯಾನ್ಸರ್‌ಬಾಗ್‌ನಲ್ಲಿರುವ ಲಕ್ನೋದ ರೋಷನ್ ಅಲಿ ಮಸೀದಿಯಲ್ಲಿ ನಾಲ್ಕು ಧ್ವನಿವರ್ಧಕಗಳನ್ನು ಅಳವಡಿಸಲಾಗಿದ್ದು, ಪೊಲೀಸರ ಸೂಚನೆಯ ನಂತರ 3 ಅನ್ನು ತೆಗೆದುಹಾಕಲಾಗಿದೆ ಮತ್ತು ನಾಲ್ಕನೇ ಧ್ವನಿವರ್ಧಕದ ಧ್ವನಿಯನ್ನು ಕಡಿಮೆ ಮಾಡಲಾಗಿದೆ

ಸೂರ್ಯೋದಯ, ಸೂರ್ಯಾಸ್ತದ ವೇಳೆ ಹನುಮಾನ್ ಚಾಲೀಸಾ ಪಠಣ ಆರಂಭಿಸಿದ ದೇಗುಲ

ಕಳೆದ ವಾರ, ಸಿಎಂ ಯೋಗಿ ಆದಿತ್ಯನಾಥ್ ಅವರು ವಸತಿ ಪ್ರದೇಶಗಳಲ್ಲಿ ಧಾರ್ಮಿಕ ಸ್ಥಳಗಳಲ್ಲಿ ಧ್ವನಿವರ್ಧಕಗಳ ಶಬ್ದವನ್ನು ನಿರ್ಬಂಧಿಸಲು ನಿರ್ದೇಶನವನ್ನು ನೀಡಿದ್ದರು. ಈ ಕುರಿತು ಮಾಹಿತಿ ನೀಡಿರುವ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ (ಗೃಹ) ಅವನೀಶ್ ಅವಸ್ಥಿ, “ರಾಜ್ಯದ ಧಾರ್ಮಿಕ ಸ್ಥಳಗಳಿಂದ ಅಕ್ರಮ ಧ್ವನಿವರ್ಧಕಗಳನ್ನು ತೆಗೆದುಹಾಕಲು ಶನಿವಾರ ಆದೇಶ ಹೊರಡಿಸಲಾಗಿದೆ. ಈ ಸಂಬಂಧ ಏಪ್ರಿಲ್ 30 ರೊಳಗೆ ವರದಿಯನ್ನು ಜಿಲ್ಲೆಗಳಿಂದ ಕೋರಲಾಗಿದೆ. ಆದೇಶಕ್ಕೆ ಅನುಗುಣವಾಗಿ, ರಾಜ್ಯದಲ್ಲಿ ಶಬ್ದ ಮಿತಿ ಮಾನದಂಡಗಳನ್ನು ಉಲ್ಲಂಘಿಸುವ ಸ್ಥಳಗಳ ಪಟ್ಟಿಯನ್ನು ಮಾಡಲು ಸ್ಥಳೀಯ ಪೊಲೀಸರಿಗೆ ಆದೇಶಿಸಲಾಗಿದೆ.

ಧ್ವನಿವರ್ಧಕ ತೆಗೆದಿರಿಸಿದ ಮಂದಿರ, ಮಸೀದಿ: ಸೌಹಾರ್ದತೆಯ ಸಂದೇಶ ಸಾರಿದ ಯುಪಿಯ ಈ ನಗರ!

ಧಾರ್ಮಿಕ ಮುಖಂಡರೊಂದಿಗೆ ಸಂವಾದವನ್ನು ಸ್ಥಾಪಿಸಲು ಮತ್ತು ಅವರೊಂದಿಗೆ ಸಮನ್ವಯ ಸಾಧಿಸುವ ಮೂಲಕ ಅನಧಿಕೃತ ಧ್ವನಿವರ್ಧಕಗಳನ್ನು ತೆಗೆದುಹಾಕುವುದನ್ನು ಖಚಿತಪಡಿಸಿಕೊಳ್ಳಲು ಪೊಲೀಸರಿಗೆ ಸೂಚಿಸಲಾಗಿದೆ ಎಂದು ಅವಸ್ತಿ ಮಾಹಿತಿ ನೀಡಿದ್ದರು. ಸೋಮವಾರ, ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು 125 ಧ್ವನಿವರ್ಧಕಗಳನ್ನು ತೆಗೆದುಹಾಕಲಾಗಿದ್ದು ಮತ್ತು ಸುಮಾರು 17,000 ಜನರು ತಮ್ಮ ಧ್ವನಿವರ್ಧಕಗಳ ಧ್ವನಿಯನ್ನು  ಕಡಿಮೆ ಮಾಡಿದ್ದಾರೆ ಎಂದು ತಿಳಿಸಿದರು.

Latest Videos
Follow Us:
Download App:
  • android
  • ios