Asianet Suvarna News Asianet Suvarna News

ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಸ್ತೆಯಲ್ಲಿ ನಡೆಯದ ಈದ್ ನಮಾಜ್, ಜನತೆಯನ್ನು ಶ್ಲಾಘಿಸಿದ ಯೋಗಿ!

ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ಸುಮಾರು 50,000 ರಿಂದ ಒಂದು ಲಕ್ಷ ಜನರು ನಮಾಜ್ ಮಾಡುತ್ತಿದ್ದರು. ಇದೇ ಮೊದಲ ಬಾರಿಗೆ ರಸ್ತೆಗಳಲ್ಲಿ ನಮಾಜ್ ಮಾಡಲು ಸರ್ಕಾರ ಅವಕಾಶ ನಿರಾಕರಣೆ ಮಾಡಿತ್ತು.

Uttar Pradesh Chief Minister Yogi Adityanath praises people For 1st time Eid namaz not offered on UP roads san
Author
Bengaluru, First Published May 4, 2022, 7:48 PM IST

ಲಕ್ನೋ (ಮೇ. 4): ಈದ್ ಉಲ್ ಫಿತರ್ (Eid-ul-Fitr), ಅಕ್ಷಯ ತೃತೀಯ (Akshay Tritiya) ಹಾಗೂ ಪರಶುರಾಮ ಜಯಂತಿಗಳನ್ನು (Parshuram Jayanti) ಶಾಂತಿಯುತವಾಗಿ ಆಚರಿಸಿದ ಉತ್ತರ ಪ್ರದೇಶದ ಜನತೆಯನ್ನು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ (Uttar Pradesh Chief Minister Yogi Adityanath) ಶ್ಲಾಘನೆ ಮಾಡಿದ್ದಾರೆ. ಇಡೀ ಉತ್ತರ ಪ್ರದೇಶದಲ್ಲಿ ಒಂದೇ ಒಂದು ಅಹಿತಕರ ಘಟನೆಗಳು ವರದಿಯಾಗಿಲ್ಲ ಎನ್ನುವುದು ವಿಶೇಷ. ಅದಲ್ಲದೆ, ಇದೇ ಮೊದಲ ಬಾರಿಗೆ ಉತ್ತರ ಪ್ರದೇಶದ ರಸ್ತೆಗಳಲ್ಲಿ ಈದ್ ಉಲ್ ಫಿತರ್ ನಮಾಜ್ ಅನ್ನು ಮಾಡದೇ ಇರುವ ಮೂಲಕ ನೆಲದ ಕಾನೂನಿಗೆ ಬೆಲೆ ನೀಡಿದ್ದಾರೆ. 

 ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಒಂದೇ ದಿನದಲ್ಲಿ ಮೂರು ಹಬ್ಬಗಳನ್ನು ಆಚರಿಸುವಾಗ ಜನರು ರಾಜ್ಯದ "ಗಂಗಾ-ಜಮುನಿ ತೆಹಜೀಬ್" ಅನ್ನು ಪ್ರದರ್ಶಿಸಿದ್ದಕ್ಕಾಗಿ ಶ್ಲಾಘಿಸಿದರು. ಸಾಮಾನ್ಯವಾಗಿ ಈದ್ ಸಂದರ್ಭದಲ್ಲಿ ರಸ್ತೆಗಳಲ್ಲಿ ನಮಾಜ್ ಮಾಡುವುದು ಸಾಮಾನ್ಯವಾಗಿತ್ತು. ಆದರೆ, ಯೋಗಿ ಆದಿತ್ಯನಾಥ್ ಸರ್ಕಾರ, ರಸ್ತೆಗಳಲ್ಲಿ ಯಾವುದೇ ರೀತಿಯ ಧಾರ್ಮಿಕ ಚಟುವಟಿಕೆಗಳನ್ನು ಮಾಡುವಂತಿಲ್ಲ ಎಂದು ಆದೇಶ ಹೊರಡಿಸಿದ್ದರು. ಅದನ್ನು ಈದ್ ದಿನ ಪಾಲಿಸಲಾಗಿದೆ.

ಅಧಿಕಾರಿಗಳ ಪ್ರಕಾರ, ಉತ್ತರ ಪ್ರದೇಶದ ರಸ್ತೆಗಳು ಮತ್ತು ಇತರ ಸ್ಥಳಗಳಲ್ಲಿ ಸುಮಾರು 50,000 ರಿಂದ ಒಂದು ಲಕ್ಷ ಜನರು ನಮಾಜ್ ಮಾಡುತ್ತಿದ್ದರು. ಜನರನ್ನು ಹೊಗಳಿ, ಮುಖ್ಯಮಂತ್ರಿ ಆದಿತ್ಯನಾಥ್ ಈ ಕುರಿತಾಗಿ ಟ್ವೀಟ್ ಮಾಡಿದ್ದಾರೆ. "ಉತ್ತರ ಪ್ರದೇಶದಲ್ಲಿ ಹಲವಾರು ಧಾರ್ಮಿಕ ಕಾರ್ಯಕ್ರಮಗಳು ಯಶಸ್ವಿಯಾಗಿ ನಡೆದಿವೆ. ರಾಜ್ಯದ ಜನರು ರಸ್ತೆಗಳಲ್ಲಿ ಆಯೋಜಿಸದೆ ಉತ್ತಮ ಉಪಕ್ರಮವನ್ನು ತೆಗೆದುಕೊಂಡಿದ್ದಾರೆ."ಎಂದು ಹೇಳಿದ್ದಾರೆ.

ಪ್ರತಿಯೊಬ್ಬರೂ ಪರಸ್ಪರರ ನಂಬಿಕೆಯನ್ನು ಗೌರವಿಸಬೇಕು ಮತ್ತು ಸಾಮರಸ್ಯವನ್ನು ಕಾಪಾಡಿಕೊಳ್ಳಲು ಕಾನೂನಿನ ನಿಯಮವನ್ನು ಎಲ್ಲರೂ ಅನುಸರಿಸಬೇಕು ಎಂದು ಉತ್ತರ ಪ್ರದೇಶ ಮುಖ್ಯಮಂತ್ರಿ ಒತ್ತಿ ಹೇಳಿದ್ದರು.  "ಆರೋಗ್ಯಕರ ಮತ್ತು ಸಾಮರಸ್ಯದ ಸಮಾಜಕ್ಕಾಗಿ, ನಂಬಿಕೆಗೆ ಗೌರವದ ಜೊತೆಗೆ ಕಾನೂನಿನ ನಿಯಮವೂ ಅಗತ್ಯವಾಗಿದೆ. ಇದು ರಾಜ್ಯದ ಅಭಿವೃದ್ಧಿ ಮತ್ತು ನಾಗರಿಕರ ಸ್ವಾವಲಂಬನೆಗೆ ಅಡಿಪಾಯವಾಗಲಿದೆ" ಎಂದು ಆದಿತ್ಯನಾಥ್ ಹಿಂದಿಯಲ್ಲಿ ಟ್ವೀಟ್ ಮಾಡಿದ್ದಾರೆ.  ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ (ಕಾನೂನು ಮತ್ತು ಸುವ್ಯವಸ್ಥೆ) ಪ್ರಶಾಂತ್ ಕುಮಾರ್ ಅವರು ಹಬ್ಬಗಳನ್ನು ಶಾಂತಿಯುತವಾಗಿ ಆಚರಿಸಿದ್ದಕ್ಕಾಗಿ ಧಾರ್ಮಿಕ ಮುಖಂಡರಿಗೆ ಧನ್ಯವಾದ ಅರ್ಪಿಸಿದರು.

ಪ್ರತಿಯೊಬ್ಬರೂ ಅದರ "ಸಾಂಪ್ರದಾಯಿಕ ಗಂಗಾ-ಜಮುನಿ ತೆಹಜೀಬ್" ನಡುವೆ ಹಬ್ಬಗಳನ್ನು ಆಚರಿಸಿದರು ಎಂದು ಉನ್ನತ ಪೋಲೀಸ್ ಅವರಿಗೆ ಧನ್ಯವಾದ ಹೇಳಿದರು. ಈದ್ ಉಲ್ ಫಿತರ್ ಸಂದರ್ಭದಲ್ಲಿ ಸುಮಾರು 32,000 ಸ್ಥಳಗಳಲ್ಲಿ ಶಾಂತಿಯುತವಾಗಿ ನಮಾಜ್ ಸಲ್ಲಿಸಲಾಗಿದೆ ಎಂದು ಅವರು ಮಾಹಿತಿ ನೀಡಿದರು. ರಾಜ್ಯದಲ್ಲಿ ಎಲ್ಲಿಯೂ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆದಿಲ್ಲ ಮತ್ತು ಜನರು ಸಾಂಪ್ರದಾಯಿಕ ಉತ್ಸಾಹ ಮತ್ತು ಸಂಭ್ರಮದಿಂದ ಈದ್ ಆಚರಿಸಿದರು.

GO BACK CHIDAMBARAM ಹಿಂದೆಂದು ಕಾಣದ ಪ್ರತಿಭಟನೆ ಎದುರಿಸಿದ ಪಿ ಚಿದಂಬರಂ, ಮಮತಾ ದಲ್ಲಾಳಿ ಎಂದ ವಕೀಲರು!

ಮೇ 3 ರಂದು ಅಕ್ಷಯ ತೃತೀಯ ಮತ್ತು ಪರಶುರಾಮ ಜಯಂತಿಯನ್ನು ಆಚರಿಸಲಾಗಿರುವುದರಿಂದ ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಬಿಗಿ ಬಂದೋಬಸ್ತ್ ಮಾಡಿದ್ದಾರೆ ಎಂದು ಯುಪಿ ಎಡಿಜಿ (ಕಾನೂನು ಮತ್ತು ಸುವ್ಯವಸ್ಥೆ) ತಿಳಿಸಿದ್ದರು.

ರಷ್ಯಾ ಅಧ್ಯಕ್ಷನಿಗೆ ಕ್ಯಾನ್ಸರ್​​: ಯುದ್ಧದ ಟೈಮಲ್ಲಿ ಪುಟಿನ್​ ಪದತ್ಯಾಗ? ಮುಂದೇನಾಗಲಿದೆ

ಲಕ್ನೋದಲ್ಲಿ ನಡೆದ ಈದ್ ನಮಾಜ್ ಕಾರ್ಯಕ್ರಮದಲ್ಲಿ ಯುಪಿ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್, ಮಾಜಿ ಸಿಎಂ ಅಖಿಲೇಶ್ ಯಾದವ್, ಮಾಜಿ ಉಪ ಮುಖ್ಯಮಂತ್ರಿ ದಿನೇಶ್ ಶರ್ಮಾ, ರಾಜ್ಯ ಸಚಿವ ಡ್ಯಾನಿಶ್ ಆಜಾದ್ ಅನ್ಸಾರಿ ಉಪಸ್ಥಿತರಿದ್ದರು. ಈದ್-ಉಲ್-ಫಿತರ್ ಸಂದರ್ಭದಲ್ಲಿ ಲಕ್ನೋದ ಈದ್ಗಾ ಮೈದಾನದಲ್ಲಿ ಐದು ಲಕ್ಷಕ್ಕೂ ಹೆಚ್ಚು ಜನರು ನಮಾಜ್ ಮಾಡಿದರು.

Follow Us:
Download App:
  • android
  • ios