ಹಿಂದೆಂದು ಕಾಣದಂತ ಪ್ರತಿಭಟನೆ ಎದುರಿಸಿದ ಪಿ ಚಿದಂಬರಂ ನಿಮ್ಮಂತವರಿಂದ ಕಾಂಗ್ರೆಸ್‌ಗೆ ಈ ಪರಿಸ್ಥಿತಿ ಎಂದು ಪ್ರತಿಭಟನೆ ಕಾಂಗ್ರೆಸ್ ವಕೀಲರಿಂದ ನೇರಾನೇರ ಘೋಷಣೆ

ಕೋಲ್ಕತಾ(ಮೇ.04): ಕಾಂಗ್ರೆಸ್ ಹಿರಿಯ ನಾಯಕ, ವಕೀಲ ಪಿ ಚಿದಂಬರಂ ಕಾಂಗ್ರೆಸ್ ವಕೀಲರ ಆಕ್ರೋಶಕ್ಕೆ ತುತ್ತಾಗಿದ್ದಾರೆ. ಪಶ್ಚಿಮ ಬಂಗಳ ಸಿಎಂ ಮಮತಾ ಬ್ಯಾನರ್ಜಿ ಪರ ವಕಾಲತ್ತು ವಹಿಸಲು ಕೋಲ್ಕತಾ ಹೈಕೋರ್ಟ್‌ಗೆ ಆಗಮಿಸಿದ ಪಿ ಚಿದಂಬರಂ ವಿರುದ್ಧ ಕಾಂಗ್ರೆಸ್ ವಕೀಲರು ಪ್ರತಿಭಟನ ನಡೆಸಿದ್ದಾರೆ. ಮಮತಾ ಬ್ಯಾನರ್ಜಿ ದಲ್ಲಾಳಿ, ಇಂತವರಿಂದಲೇ ಪಕ್ಷ ಪಾತಾಳಕ್ಕೆ ಕುಸಿದಿದೆ. ಗೋ ಬ್ಯಾಕ್ ಚಿದಂಬರಂ ಎಂದು ಘೋಷಣೆಗಳನ್ನು ಕೂಗಿದ್ದಾರೆ.

ಪಶ್ಚಿಮ ಬಂಗಾಳ ಸರ್ಕಾರದ ಮೆಟ್ರೋ ಡೈರಿ ಷೇರುಗಳನ್ನು ಖಾಸಗಿ ಕಂಪನಿಗಳಿಗೆ ಮಾರಾಟ ಮಾಡುವ ನಿರ್ಧಾರದ ವಿರುದ್ಧ ಬಂಗಾಳ ಕಾಂಗ್ರೆಸ್ ಅಧ್ಯಕ್ಷ ಅಧೀರ್ ಚೌಧರಿ ಕೋರ್ಟ್ ಮೆಟಿಲೇರಿದ್ದಾರೆ. ಕಾಂಗ್ರೆಸ್ ಹಿರಿಯ ನಾಯಕನಾಗಿ ಚಿದಂಬರಂ ಚೌಧರಿ ವಿರುದ್ಧ ಮಮತಾ ಬ್ಯಾನರ್ಜಿ ಸರ್ಕಾರ ಪರ ವಾದಿಸುತ್ತಿದ್ದಾರೆ. ಇದಕ್ಕಾಗೆ ಕೋಲ್ಕತಾ ಹೈಕೋರ್ಟ್‌ಗೆ ಆಗಮಿಸಿದ್ದರು. ವಾದ ವಿವಾದ ಬಳಿಕ ಕೋರ್ಟ್‌ನಿಂದ ನಿರ್ಗಮಿಸುವ ವೇಳೆ ಕಾಂಗ್ರೆಸ್ ವಕೀಲರು ಹಾಗೂ ನಾಯಕರು ತೀವ್ರ ಪ್ರತಿಭಟನೆ ನಡೆಸಿದ್ದಾರೆ.

Goa Elections: TMC ಹಾಗೂ AAP ಜೊತೆ ಮಾತನಾಡುತ್ತಿದ್ದೇವೆ ಎಂದ ಕಾಂಗ್ರೆಸ್ ಹಿರಿಯ ನಾಯಕ!

ಪಶ್ಚಿಮ ಬಂಗಾಳ ಸರ್ಕಾರ ನಡೆಸತ್ತಿರುವ ಭ್ರಷ್ಟಾಚಾರ, ತಮಗೆ ಬೇಕಾದವರಿಗೆ ಷೇರುಗಳನ್ನು ಮಾರಾಟ, ಸರ್ಕಾರಿ ಆಸ್ತಿಗಳ ಮಾರಾಟ ಮಾಡುವುದನ್ನು ಇಡೀ ಬಂಗಾಳ ಜನತೆ ಪ್ರಶ್ನಿಸುತ್ತಿದ್ದಾರೆ. ಅವರ ಪರವಾಗಿ ಕಾಂಗ್ರೆಸ್ ಅಧ್ಯಕ್ಷ ಕೋರ್ಟ್ ಮೆಟ್ಟಿಲೇರಿದ್ದಾರೆ. ಇದನ್ನು ಬೆಂಬಿಸುವುದನ್ನು ಬಿಟ್ಟು ಚೌಧರಿ ವಿರುದ್ಧ ಹಾಗೂ ಬಂಗಾಳ ಸರ್ಕಾರ ನಿರ್ಧಾರವನ್ನು ಸಮರ್ಥಿಸಿಕೊಂಡು ವಾದ ಮಾಡುತ್ತಿರುವ ಚಿದಂಬರಂ ಕಾಂಗ್ರೆಸ್ ಪಕ್ಷಕ್ಕೆ ಮಾರಕ ಎಂದು ಪ್ರತಿಭಟನಾಕಾರರು ಹೇಳಿದ್ದಾರೆ.

Scroll to load tweet…

ಪಶ್ಚಿಮ ಬಂಗಾಳದಲ್ಲಿ ಕಾಂಗ್ರೆಸ್ ಹೀನಾಯ ಫಲಿತಾಂಶ ಕಾಣಲು ಪಿ ಚಿದಂಬರಂನಂತ ನಾಯಕರೇ ಕಾರಣ . ಗೋ ಬ್ಯಾಕ್, ಗೋ ಬ್ಯಾಕ್ ಎಂದು ಚಿದಂಬರಂ ಎದುರೇ ಪ್ರತಿಭಟನೆ ನಡೆಸಿದ್ದಾರೆ. ಕೆಲ ಹೊತ್ತು ಕೋಲ್ಕತಾ ಹೈಕೋರ್ಟ್ ಆವರಣದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು. 

‘ಕೋಮುವಾದಿ’ ಪಕ್ಷದ ಜತೆ ಮೈತ್ರಿಗೆ ಆನಂದ್‌ ಶರ್ಮಾ ಆಕ್ಷೇಪ
ಪಶ್ಚಿಮ ಬಂಗಾಳ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್‌ ಹಾಗೂ ಎಡರಂಗ ಮೈತ್ರಿಕೂಟವು ಕೋಮುವಾದಿ ಪಕ್ಷ ಎಂದು ಹೇಳಲಾದ ಐಎಸ್‌ಎಫ್‌ (ಇಂಡಿಯನ್‌ ಸೆಕ್ಯುಲರ್‌ ಫ್ರಂಟ್‌) ಜತೆ ಮೈತ್ರಿ ಮಾಡಿಕೊಂಡಿರುವುದು ವಿವಾದಕ್ಕೆ ಕಾರಣವಾಗಿದೆ. ಇದು ಕಾಂಗ್ರೆಸ್‌ ಹಾಗೂ ಎಡರಂಗಗಳಲ್ಲಿ ತೀವ್ರ ಒಡಕು ಸೃಷ್ಟಿಸಿದೆ.

BJP Hits Back : ಗ್ರಾಮ ಪಂಚಾಯ್ತಿ ಚುನಾವಣೆಯನ್ನೂ ಚಿದಂಬರಂ ಗೆದ್ದಿಲ್ಲ!

ಐಎಸ್‌ಎಫ್‌ ಮುಖಂಡ ಹಾಗೂ ಮುಸ್ಲಿಂ ಮೌಲ್ವಿ ಅಬ್ಬಾಸ್‌ ಸಿದ್ದಿಕಿ ಅವರ ಜತೆ ಮೈತ್ರಿ ಮಾಡಿಕೊಂಡಿದ್ದನ್ನು ಹಾಗೂ ಇತ್ತೀಚಿನ ಸಮಾವೇಶದಲ್ಲಿ ವೇದಿಕೆ ಹಂಚಿಕೊಂಡಿದ್ದನ್ನು ಕಾಂಗ್ರೆಸ್‌ ಮುಖಂಡ ಆನಂದ್‌ ಶರ್ಮಾ ಪ್ರಶ್ನಿಸಿದ್ದಾರೆ. ‘ಇದು ನೆಹರು ಹಾಕಿಕೊಟ್ಟಜಾತ್ಯತೀತ ಮೌಲ್ಯಗಳಿಗೆ ತಿಲಾಂಜಲಿ ಕೊಟ್ಟಂತೆ. ಕೋಮುವಾದಿಗಳ ಜತೆ ಮೈತ್ರಿ ಮಾಡಿಕೊಳ್ಳುವ ವಿಷಯದಲ್ಲಿ ಸಿಡಬ್ಲುಸಿಯನ್ನು ಕೇಳದೇ ರಾಜ್ಯ ಕಾಂಗ್ರೆಸ್‌ ಅಧ್ಯಕ್ಷ ಅಧೀರ್‌ ರಂಜನ್‌ ಚೌಧರಿ ಏಕಪಕ್ಷೀಯ ನಿರ್ಧಾರ ಕೈಗೊಂಡಿದ್ದೇಕೆ?’ ಎಂದಿದ್ದಾರೆ. ಜೊತೆಗೆ ಕೋಮುವಾದಿಗಳ ವಿರುದ್ಧ ಹೋರಾಟ ನಡೆಸುವ ವಿಷಯದಲ್ಲಿ ಬೇಕಾದ್ದನ್ನಷ್ಟೇ ಆಯ್ದುಕೊಳ್ಳುವುದು ಸರಿಯಲ್ಲ ಎನ್ನುವ ಮೂಲಕ ಬಿಜೆಪಿಗೊಂದು ನೀತಿ, ಐಎಸ್‌ಎಫ್‌ಗೊಂದು ನೀತಿ ಸರಿಯಲ್ಲ ಎಂದಿದ್ದಾರೆ.

ಆದರೆ, ‘ಎಲ್ಲ ಯೋಚನೆ ಮಾಡಿಯೇ ಐಎಸ್‌ಎಫ್‌ ಜತೆ ಮೈತ್ರಿ ಮಾಡಿಕೊಳ್ಳಲಾಗಿದೆ. ಕಾಂಗ್ರೆಸ್‌ ವರಿಷ್ಠರನ್ನು ತೃಪ್ತಿಪಡಿಸಲು ಶರ್ಮಾ ಹೇಳಿಕೆ ನೀಡಿದ್ದಾರೆ. ಇದು ಬಿಜೆಪಿಗೆ ಅನುಕೂಲ ಕಲ್ಪಿಸುತ್ತದೆ’ ಎಂದು ಚೌಧರಿತಿರುಗೇಟು ನೀಡಿದ್ದಾರೆ.