ಬುರ್ಕಾ ಧರಿಸಿ ಸಾರಾಯಿ ಖರೀದಿಸಲು ಬಂದ ಮುಸ್ಲಿಂ ಮಹಿಳೆಗೆ ಬೆದರಿಕೆ: ಮೂವರ ಬಂಧನ
ಬುರ್ಕಾ ಧರಿಸಿ ಸಾರಾಯಿ ಖರೀದಿಸಲು ಬಂದ ಮಹಿಳೆಗೆ ತಲೆ ಕಡಿಯುವುದಾಗಿ ಬೆದರಿಕೆಯೊಡ್ಡಿದ ಮೂವರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ.
ಮುಜಾಫರ್‌ಪುರ: ಬುರ್ಕಾ ಧರಿಸಿ ಸಾರಾಯಿ ಖರೀದಿಸಲು ಬಂದ ಮಹಿಳೆಗೆ ತಲೆ ಕಡಿಯುವುದಾಗಿ ಬೆದರಿಕೆಯೊಡ್ಡಿದ ಮೂವರು ಆರೋಪಿಗಳನ್ನು ಉತ್ತರಪ್ರದೇಶ ಪೊಲೀಸರು ಬಂಧಿಸಿದ್ದಾರೆ. ಉತ್ತರಪ್ರದೇಶದ ಮುಜಾಫರ್‌ಪುರದಲ್ಲಿ ಬುರ್ಕಾ ಧರಿಸಿದ ಮುಸ್ಲಿಂ ಮಹಿಳೆಯೊಬ್ಬರು ಬಾರೊಂದಕ್ಕೆ ಮದ್ಯ ಖರೀದಿಸಲು ಹೋಗಿದ್ದಾರೆ. ಇದನ್ನು ಗಮನಿಸಿದ ಕ್ರಿಮಿನಲ್ ಹಿನ್ನೆಲೆಯುಳ್ಳ ಇಬ್ಬರು ಸಹೋದರರು ಹಾಗೂ ಮತ್ತೊಬ್ಬರು ಆಕೆಯನ್ನು ಅರ್ಧದಲ್ಲೇ ತಡೆದು ನಿಲ್ಲಿಸಿಕೊಂಡು ನಿಂದಿಸಲು ಶುರು ಮಾಡಿದ್ದಾರೆ.
ನಿನಗೆ ಮುಸ್ಲಿಂ ಆಗಿ ನಾಚಿಕೆಯಾಗುವುದಿಲ್ಲವೇ? ಹೀಗೆ ಬುರ್ಕಾ ಧರಿಸಿಕೊಂಡು ಬಂದು ಮದ್ಯ ಖರೀದಿಸುತ್ತಿದ್ದೀಯಾ? ನೀನೇನು ಹಿಂದೂವೇ ಅಥವಾ ಮುಸ್ಲಿಂ ಹೆಣ್ಣೆ, ಅದನ್ನು ಮೊದಲು ಹೇಳು, ಹೀಗೆ ಬುರ್ಕಾ ಧರಿಸಿ ಸರಾಯಿ ಖರೀದಿಸಿ ಹಿಂದೂಗಳ ಮುಂದೆ ನಮಗೆ ಅವಮಾನ ಮಾಡುತ್ತಿದ್ದೀಯಾ? ಎಂದೆಲ್ಲಾ ಆಕೆಗೆ ನಿಂದಿಸಿದ್ದಾರೆ. ಈ ವೇಳೆ ಆಕೆ ಇದು ಬೀರು ಅಷ್ಟೇ ಎಂದು ಹೇಳಿದ್ದಾಳೆ. ಬೀರು ಹೇಗಿದೆ ಎಂಬುದನ್ನು ನೋಡಿದ್ದೀಯಾ ಇದು ನಿಜವಾಗಿಯೂ ಬೀರಾ, ಸಣ್ಣ ಮಗುವನ್ನು ಬೇರೆ ಕರೆದುಕೊಂಡು ಬಂದಿದ್ದೀಯಾ ಇದು ಹೀಗೆ ಮುಂದುವರೆದರೆ ನಿನ್ನ ತಲೆ ಕಡಿಯುತ್ತೇವೆ ಎಂದೆಲ್ಲಾ ಬೆದರಿಸಿದ್ದಾರೆ. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ಈ ಬೆದರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬುರ್ಖಾ ಧರಿಸಿ ಬೀದಿಗಿಳಿಯಲು ಸೂಚನೆ, ಮಹಿಳೆಯರ ನಡುವಿನಿಂದ ಗ್ಯಾಂಗ್‌ಸ್ಟರ್ ಅತೀಕ್ ಪತ್ನಿ ಎಸ್ಕೇಪ್!
40 ವರ್ಷದ ಬಾಕು ಅಲಿಯಾಸ್ ಶಹನ್ವಾಜ್ (Shahanwaj), 30 ವರ್ಷದ ಅದಿಲ್ ಅಹ್ಮದ್ (Adil ahmed) ಹಾಗೂ 35 ವರ್ಷ ಪ್ರಾಯದ ಸಜೀದ್ ಅಹ್ಮದ್ (Sajid ahmed) ಬಂಧಿತ ಆರೋಪಿಗಳು, ಎಲ್ಲರೂ ಒಂದೇ ಪ್ರದೇಶದ ನಿವಾಸಿಗಳಾಗಿದ್ದು, ಇದೇ ರೀತಿ ಮುಂದುವರೆದರೆ ಪರಿಣಾಮ ನೆಟ್ಟಗಿರಲ್ಲ ಎಂದು ಆಕೆಗೆ ಬೆದರಿಕೆಯೊಡ್ಡಿದ್ದಾರೆ. ಎರಡು ನಿಮಿಷಗಳ ವೀಡಿಯೋದಲ್ಲಿ ನೀನೇಕೆ ಶರಾಬು ಖರೀದಿಸುತ್ತಿದ್ದೀಯಾ? ನಿನಗೆ ನನ್ನ ಪರಿಚಯವಿಲ್ವಾ? ನಾನು ಹಲವು ಬಾರಿ ಜೈಲಿಗೆ ಹೋಗಿ ಬಂದಿದ್ದೇನೆ. ನಾನು ಈಗಲೇ ನಿನ್ನ ತಲೆ ಕಡಿಯಬಲ್ಲೆ ಎಂದು ಹೇಳುವುದು ಕೇಳಿಸುತ್ತಿದೆ.
ಘಟನೆಗೆ ಸಂಬಂಧಿಸಿದಂತೆ ಮುಜಾಫರ್‌ಪುರ ಡಿಸಿಪಿ ವಿಕ್ರಮ್ ಆಯುಷ್ (VikraM Ayush) ಪ್ರತಿಕ್ರಿಯಿಸಿದ್ದು, ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಿ ಬಂಧಿಸಲಾಗಿದೆ. ಶಾಂತಿ ಕದಡಿದ ಆರೋಪದ ಮೇಲೆ ಮೂವರನ್ನು ಬಂಧಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಮಹಿಳೆ ಯಾವುದೇ ದೂರು ದಾಖಲಿಸಿಲ್ಲ ಎಂದರು.
ಕರ್ನಾಟಕ ಬಳಿಕ ಈಗ ಯುಪಿಯಲ್ಲಿ ಹಿಜಾಬ್ ಗಲಾಟೆ: ಬುರ್ಖಾ ಧರಿಸಿದ ವಿದ್ಯಾರ್ಥಿನಿಯರಿಗೆ ಕಾಲೇಜಿಗೆ ಪ್ರವೇಶ ನಿರಾಕರಣೆ..!