ಮುಸ್ಲಿಂ ಕುಟುಂಬವೊಂದು ಬೈಕ್‌ನಲ್ಲಿ ಹೋಗುತ್ತಿದ್ದ ವೇಳೆ ಅವರನ್ನು ಅಡ್ಡಗಟ್ಟಿ, ಬಣ್ಣ ಎರಚಿದಿ ವಿಡಿಯೋ ವೈರಲ್‌ ಆಗುತ್ತಿದ್ದಂತೆ ಉತ್ತರ ಪ್ರದೇಶ ಪೊಲೀಸರು ಕ್ರಮ ಕೈಗೊಳ್ಳಲು ಮುಂದಾಗಿದ್ದಾರೆ.

ನವದೆಹಲಿ (ಮಾ.24):  ಉತ್ತರ ಪ್ರದೇಶದ ಬಿಜ್ನೋರ್‌ನಲ್ಲಿ ಮುಸ್ಲಿಂ ಕುಟುಂಬದ ಮೇಲೆ ಬಣ್ಣ ಎರಚಿ ಕಿರುಕುಳ ನೀಡಿದ ಕೆಲವು ಅಪರಿಚಿತ ವ್ಯಕ್ತಿಗಳಿಗಾಗಿ ಪೊಲೀಸರು ಹುಡುಕಾಟ ಆರಂಭ ಮಾಡಿದ್ದಾರೆ. ಬೈಕ್‌ನಲ್ಲಿ ಪ್ರಯಾಣ ಮಾಡುತ್ತಿದ್ದ ಮುಸ್ಲಿಂ ಕುಟುಂಬವನ್ನು ಅಡ್ಡಗಟ್ಟಿ ಅವರ ಮೇಲೆ ಬಲವಂತವಾಗಿ ಬಣ್ಣಗಳನ್ನು ಎರಚಿ ನೀರು ಎಸೆದಿರುವ ವಿಡಿಯೋ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ. ಇದರ ಬೆನ್ನಲ್ಲಿಯೇ ಪೊಲೀಸರು ಈ ಅನಾಮಿಕ ವ್ಯಕ್ತಿಗಳ ಹುಡುಕಾಟ ಆರಂಭಿಸಿದ್ದಾರೆ. ಈ ವಿಡಿಯೋದಲ್ಲಿ ವ್ಯಕ್ತಿಗಳು ಜೈ ಶ್ರೀರಾಮ್‌ ಎಂದು ಘೋಷಣೆಯನ್ನೂ ಕೂಗಿರುವುದು ದಾಖಲಾಗಿದೆ. ಪೊಲೀಸರ ಪ್ರಕಾರ, ಈ ಘಟನೆಯು ಮಾರ್ಚ್ 20 ರ ಬುಧವಾರದಂದು ನಗರದ ಧಾಂಪುರ್ ಪ್ರದೇಶದಲ್ಲಿ ಸಂಭವಿಸಿದೆ.

ಆ ಪ್ರದೇಶದ ಸರ್ಕಲ್ ಆಫೀಸರ್‌ಗೆ ಮುಸ್ಲಿಂ ಕುಟುಂಬವನ್ನು ಭೇಟಿ ಮಾಡಿ ಎಫ್‌ಐಆರ್‌ ದಾಖಲಿಸುವ ಸೂಚಿಸುವಂತೆ ತಿಳಿಸಲಾಗಿದೆ ಎಂದು ಬಿಜ್ನೋರ್ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಎಸ್‌ಪಿ) ಹೇಳಿಕೆಯಲ್ಲಿ ತಿಳಿಸಿದ್ದಾರೆ.

"ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿರುವ ವೀಡಿಯೊವನ್ನು ಬಿಜ್ನೋರ್ ಪೊಲೀಸರು ಗಮನಿಸಿದ್ದರೆ. ಈ ವೈರಲ್ ವೀಡಿಯೊದಲ್ಲಿ, ಮೋಟಾರು ಸೈಕಲ್‌ನಲ್ಲಿ ಹೋಗುತ್ತಿದ್ದ ಕುಟುಂಬಕ್ಕೆ ಕೆಲವು ಪುರುಷರು ಕಿರುಕುಳ ನೀಡಿದ್ದು ಬಲವಂತವಾಗಿ ಬಣ್ಣ ಹಚ್ಚುತ್ತಿದ್ದಾರೆ. ಸಿಸಿಟಿವಿ ದೃಶ್ಯಾವಳಿಗಳ ಸಹಾಯದಿಂದ ಬಿಜ್ಮೋರ್ ಪೊಲೀಸರು ಈ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸುತ್ತಿದ್ದಾರೆ" ಎಂದು ಬಿಜ್ನೋರ್ ಎಸ್‌ಎಸ್‌ಪಿ ನೀರಜ್ ಜಾದುವಾನ್ ಸೋಶಿಯಲ್‌ ಮೀಡಿಯಾದಲ್ಲಿ ಹಂಚಿಕೊಂಡ ವಿಡಿಯೋದ ಬಗ್ಗೆ ತಿಳಿಸಿದ್ದಾರೆ.

ಮದ್ವೆ ಆಗಿ 8 ವರ್ಷ ಆಯ್ತು ಮಗು ಬೇಡ್ವಾ ಎಂದ ನೆಟ್ಟಿಗರಿಗೆ 'ಇವ್ನು ದೊಡ್ಡವನಾಗ್ಲಿ ಮಗು ಮಾಡ್ಕೋತೀನಿ..' ಎಂದ ನಟಿ!

"ಸಂತ್ರಸ್ತ ಕುಟುಂಬವನ್ನು ವೈಯಕ್ತಿಕವಾಗಿ ತಲುಪಲು ಮತ್ತು ಅವರಿಂದ ದೂರನ್ನು ಸ್ವೀಕರಿಸಿದ ನಂತರ ಎಫ್‌ಐಆರ್ ದಾಖಲಿಸಲು ಮತ್ತು ಅವರ ಮೇಲ್ವಿಚಾರಣೆಯಲ್ಲಿ ತನಿಖೆಯನ್ನು ಖಚಿತಪಡಿಸಿಕೊಳ್ಳಲು ಸರ್ಕಲ್ ಆಫೀಸರ್ (ಸಿಒ) ಧಂಪುರ್ ಅವರಿಗೆ ಸೂಚಿಸಲಾಗಿದೆ...," ಅವರು ಮಾಹಿತಿ ನೀಡಿದ್ದಾರೆ.

Breaking: ಬಿಜೆಪಿ ಸೇರಿದ ವಾಯುಸೇನೆ ಮಾಜಿ ಮುಖ್ಯಸ್ಥ ಆರ್‌ಕೆಎಸ್‌ ಭದೌರಿಯಾ!

Scroll to load tweet…