ಬ್ಯಾಂಕ್ ಲಾಕರೂ ಸೇಫ್ ಅಲ್ಲ : ಮಗಳ ಮದುವೆಗೆಂದು ಇಟ್ಟಿದ್ದ 18 ಲಕ್ಷ ಗುಳುಂ
ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷವನ್ನು ಗೆದ್ದಲು ಹುಳುಗಳು ತಿಂದು ಹಾಳು ಮಾಡಿದ್ದು, ಇದರಿಂದ ಹಣ ಕೂಡಿಡಲು ಬ್ಯಾಂಕ್ ಲಾಕರ್ ಕೂಡ ಸುರಕ್ಷಿತ ಅಲ್ಲ ಎಂದು ಸಾಬೀತಾಗಿದೆ

ಉತ್ತರಪ್ರದೇಶ: ಆಪತ್ಕಾಲಕ್ಕೆ ನೆರವಿಗೆ ಬರುತ್ತದೆ. ಜೊತೆಗೆ ಮನೆಯಲ್ಲಿಟ್ಟರೆ ಹಣ ಸೇಫ್ ಅಲ್ಲ ಎಂಬ ಕಾರಣಕ್ಕೆ ಜನ ತಮ್ಮ ಬಳಿ ಇರುವ ಅಮೂಲ್ಯ ನಿಧಿಯನ್ನು ಬ್ಯಾಂಕ್ ಲಾಕರ್‌ಗಳಲ್ಲಿ ಇಡುತ್ತಾರೆ. ಅದೇ ರೀತಿ ಉತ್ತರಪ್ರದೇಶದಲ್ಲಿ ಮಹಿಳೆಯೊಬ್ಬರು ಮಗಳ ಮದುವೆಗೆಂದು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದ 18 ಲಕ್ಷವನ್ನು ಗೆದ್ದಲು ಹುಳುಗಳು ತಿಂದು ಹಾಳು ಮಾಡಿದ್ದು, ಇದರಿಂದ ಹಣ ಕೂಡಿಡಲು ಬ್ಯಾಂಕ್ ಲಾಕರ್ ಕೂಡ ಸುರಕ್ಷಿತ ಅಲ್ಲ ಎಂದು ಸಾಬೀತಾಗಿದೆ. ಇದರಿಂದ ಹಣ ಇಟ್ಟಿದ್ದ ಮಹಿಳೆ ಸಂಕಷ್ಟಕ್ಕೀಡಾಗಿದ್ದಾರೆ.
ಮೊರದಾಬಾದ್ ಮೂಲದ ಮಹಿಳೆ ಅಲ್ಕಾ ಪಾಠಕ್ (Alka Pathak)ಎಂಬುವವರು, ತಮ್ಮ ಮಗಳ ಮದುವೆಗಾಗಿ 18 ಲಕ್ಷ ಹಣವನ್ನು ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು. ಒಂದೂವರೆ ವರ್ಷದ ಹಿಂದೆ ಅವರು ಈ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದು, ಈಗ ಈ ಹಣವನ್ನು ಗೆದ್ದಲು ತಿಂದಿರುವುದು ಗಮನಕ್ಕೆ ಬಂದಿದೆ.
ಕೋಕೇನ್ ಅಮಲಿನಲ್ಲೇ ಇದ್ರಾ ಜಿ20ಗೆ ಬಂದಿದ್ದ ಕೆನಡಾ ಪ್ರಧಾನಿ: ಮಾಜಿ ರಾಯಭಾರ ಸಿಬ್ಬಂದಿ ಹೇಳೋದೇನು?
ಮಗಳ ಮದುವೆಗೆ ಬೇಕಾಗುತ್ತದೆ ಎಂದು ಇವರು ಅಕ್ಟೋಬರ್ 2022ರಲ್ಲಿ 18 ಲಕ್ಷ ನಗದು ಹಾಗೂ ಸ್ವಲ್ಪ ಚಿನ್ನಾಭರಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದರು. ಇತ್ತೀಚೆಗೆ ಬ್ಯಾಂಕ್ ಸಿಬ್ಬಂದಿ ಲಾಕರ್‌ನ ವಾರ್ಷಿಕ ನಿರ್ವಹಣೆ ಹಾಗೂ ಕೆವೈಸಿ ಪರಿಶೀಲನೆಗಾಗಿ ಅಲ್ಕಾ ಪಾಠಕ್ ಅವರಿಗೆ ಕರೆ ಮಾಡಿದ್ದಾರೆ. ಹೀಗಾಗಿ ಬ್ಯಾಂಕ್‌ಗೆ ಬಂದ ಅವರು ತಮ್ಮ ಲಾಕರ್ ಒಪನ್ ಮಾಡಿದಾಗ ಶಾಕ್ ಆಗಿದ್ದಾರೆ. ಏಕೆಂದರೆ ಅವರು ಇರಿಸಿದ್ದ ನೋಟುಗಳೆಲ್ಲವೂ ಗೆದ್ದಲು(termites) ತಿಂದು ಸರಿ ಮಾಡಲಾಗದಷ್ಟು ಹಾಳಾಗಿತ್ತು. ಕೂಡಲೇ ಅಲ್ಕಾ ಅವರು ಬ್ಯಾಂಕ್ ವ್ಯವಸ್ಥಾಪಕರಿಗೆ ಈ ವಿಚಾರ ತಿಳಿಸಿದ್ದಾರೆ.
ಭಾರತ ಸರ್ಕಾರ ವಿರುದ್ಧ ಕೆನಡಾದಲ್ಲಿ ಖಲಿಸ್ತಾನಿಗಳ ಪ್ರತಿಭಟನೆ: ಭಾರತದ ಧ್ವಜ, ಮೋದಿ ಫೋಟೋಕ್ಕೆ ಬೆಂಕಿ
ಅಲ್ಕಾ ಪಾಠಕ್ ಅವರು, ಸಣ್ಣ ಉದ್ಯಮವೊಂದನ್ನು ನಡೆಸುವ ಜೊತೆಗೆ ಮಕ್ಕಳಿಗಾಗಿ ಟ್ಯೂಷನ್ ತರಗತಿಯನ್ನು ಕೂಡ ನಡೆಸುತ್ತಿದ್ದರು. ತಮ್ಮ ಉಳಿತಾಯದ ಹಣ ಹಾಗೂ ಚಿನ್ನಾಭರಣವನ್ನು ಅವರು ಸುರಕ್ಷತೆಯ ದೃಷ್ಟಿಯಿಂದ ಬ್ಯಾಂಕ್ ಲಾಕರ್‌ನಲ್ಲಿ ಇಟ್ಟಿದ್ದರು. ಆದರೆ ಬ್ಯಾಂಕ್ ಲಾಕರ್‌ನಲ್ಲಿ ಹಣ ಇಡುವಾಗ ನಿರ್ದಿಷ್ಟ ಕ್ರಮಗಳನ್ನು ಅನುಸರಿಸಲಾಗುತ್ತದೆ. ಆದರೆ ಅಲ್ಕಾ ಅವರಿಗೆ ಈ ನಿಯಮಗಳು ಯಾವುದು ತಿಳಿದಿರಲಿಲ್ಲ ಎಂದು ಅವರು ಹೇಳಿಕೊಂಡಿದ್ದಾರೆ. ಈ ಘಟನೆ ಬಗ್ಗೆ ಬ್ಯಾಂಕ್ ಮ್ಯಾನೇಜರ್ ಉನ್ನತಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಹಾನಿಯ ಪ್ರಮಾಣವನ್ನು ನಿರ್ಣಯಿಸಲು ತನಿಖೆ ಆರಂಭಿಸಿದ್ದಾರೆ ಎಂದು ತಿಳಿದು ಬಂದಿದೆ.