ಮರುನಾಮಕರಣ ಚರ್ಚೆ ನಡುವೆ ಗೂಗಲ್ ಮ್ಯಾಪ್‌ನಲ್ಲಿ ತ್ರಿವರ್ಣ ಧ್ವಜ ಜೊತೆ ಭಾರತ ಹೆಸರು!
ಕೇಂದ್ರ ಬಿಜೆಪಿ ಸರ್ಕಾರ ಇಂಡಿಯಾ ಬದಲು ಭಾರತ ಹೆಸರನ್ನು ಎಲ್ಲೆಡೆ ಬಳಸುತ್ತಿದೆ. ಜಿ20 ಶೃಂಗಸಭೆಯಲ್ಲಿ ಈ ಹೆಸರು ಬಳಕೆಗೆ ಪರ ವಿರೋಧ ವ್ಯಕ್ತವಾಗಿತ್ತು. ಈ ಚರ್ಚೆ ನಡುವೆ ಇದೀಗ ಗೂಗಲ್ ಮ್ಯಾಪ್‌ನಲ್ಲಿ ಭಾರತ್ ಹೆಸರು ಉಲ್ಲೇಖಿಸಲಾಗಿದೆ. ಜೊತೆಗೆ ತ್ರಿವರ್ಣ ಧ್ವಜ ಕೂಡ ಸೇರಿಸಲಾಗಿದೆ.

ನವದೆಹಲಿ(ಅ.29) ಕೇಂದ್ರ ಬಿಜೆಪಿ ಸರ್ಕಾರ ಸಿಕ್ಕ ಅವಕಾಶಗಳಲ್ಲಿ ಭಾರತ ಹೆಸರನ್ನು ಬಳಕೆ ಮಾಡುತ್ತಿದೆ. ಇದು ಕಾಂಗ್ರೆಸ್ ಸೇರಿದಂತೆ ವಿಪಕ್ಷಗಳ ಕಣ್ಣು ಕೆಂಪಾಗಿಸಿದೆ. ಜಿ20 ಶೃಂಗಸಭೆಯಲ್ಲಿ ಪ್ರಸೆಡೆಂಟ್ ಆಫ್ ಭಾರತ್, ಪ್ರೈಮ್ ಮಿನಿಸ್ಟರ್ ಆಫ್ ಭಾರತ್ ಎಂದು ಉಲ್ಲೇಖಿಸಿತ್ತು. ಈ ಮೂಲಕ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ಇಂಡಿಯಾ ಬದಲು ಭಾರತ ಅನ್ನೋ ಹೆಸರನ್ನು ಬಳಕೆ ಅದಿಕೃತಗೊಳಿಸಿತು. ಇಂಡಿಯಾ ಹಾಗೂ ಭಾರತ ಹೆಸರಿನ ಕುರಿತು ಚರ್ಚೆಗಳು ತೀವ್ರವಾಗಿ ನಡೆದಿದೆ. ಪರವಾಗಿ ಪ್ರಚಾರ, ಅಪಸ್ವರಗಳು ವ್ಯಕ್ತವಾಗಿದೆ. ಈ ಎಲ್ಲಾ ಬೆಳವಣಿಗೆ ನಡುವೆ ಗೂಗಲ್ ಮ್ಯಾಪ್ ಇದೀಗ ಭಾರತ ಹೆಸರನ್ನು ಉಲ್ಲೇಖಿಸಿದೆ. ಗೂಗಲ್ ಮ್ಯಾಪ್‌ನಲ್ಲಿ ಭಾರತ ಎಂದು ಸರ್ಚ್ ಮಾಡಿದರೆ ತ್ರಿವರ್ಣ ಧ್ವಜ ಸೇರಿ ಭಾರತ ಮ್ಯಾಪ್ ತೋರಿಸಲಿದೆ.
ಇಷ್ಟು ದಿನ ಇಂಡಿಯಾ ಎಂದು ಸರ್ಚ್ ಮಾಡಿದರೆ ಮಾತ್ರ ಭಾರತದ ಮ್ಯಾಪನ್ನು ತೋರಿಸುತ್ತಿತ್ತು. ಆದರೆ ಇದೀಗ ಕನ್ನಡದಲ್ಲಿ ಭಾರತ ಅಥವಾ ಹಿಂದಿ, ಇಂಗ್ಲೀಷ್ ಸೇರಿದಂತೆ ಇತರ ಭಾಷೆಗಳಲ್ಲಿ ಸರ್ಚ್ ಮಾಡಿದರೆ ಭಾರತದ ಮ್ಯಾಪನ್ನು ಗೂಗಲ್ ತೋರಿಸುತ್ತದೆ. ವಿಶೇಷ ಅಂದರೆ ಭಾರತ ಹೆಸರಿನ ಜೊತೆಗೆ ತ್ರಿವರ್ಣ ಧ್ವಜವೂ ಪ್ರದರ್ಶಿಸುತ್ತದೆ.
ಭಾರತ ಅಥವಾ ಇಂಡಿಯಾ ಚರ್ಚೆ ಬಗ್ಗೆ ಬಾಲಿವುಡ್ ಬೆಡಗಿ ಕಂಗನಾ ಬಾಯ್ಬಿಟ್ಟು ಹೇಳಿದ್ದೇನು?
ಇಂಡಿಯಾ’ ಹೆಸರು ಅಳಿಸಿಹಾಕಿ ದೇಶಕ್ಕೆ ‘ಭಾರತ’ ಎಂದು ಮರುನಾಮಕರಣ ಮಾಡುವ ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಯತ್ನವನ್ನು ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಪ್ರಶ್ನಿಸಿದ್ದರು. ಸಂವಿಧಾನವು ವಾಸ್ತವವಾಗಿ ಇಂಡಿಯಾ ಹಾಗೂ ಎರಡೂ ಹೆಸರುಗಳನ್ನು ಬಳಸುತ್ತದೆ. ಇದರಲ್ಲಿ ಯಾವುದೇ ಸಮಸ್ಯೆ ಇಲ್ಲ. ಎರಡೂ ಸಂಪೂರ್ಣವಾಗಿ ಸ್ವೀಕಾರಾರ್ಹವಾಗಿವೆ’ ಎಂದರು. ‘ಆದರೆ, ನಾವು ನಮ್ಮ ವಿಪಕ್ಷ ಒಕ್ಕೂಟಕ್ಕೆ ಭಾರತ ಎಂದು ಹೆಸರಿಸಿದ್ದರಿಂದ ಸರ್ಕಾರ ಸ್ವಲ್ಪ ಕೆರಳಿಸಿದಂತಿದೆ ಮತ್ತು ಅದು ಅವರೆಲ್ಲರಿಗೂ ಇದರಿಂದ ತಲೆಬಿಸಿ ಆಗಿರಬಹುದು. ಹೀಗಾಗಿ ಕೇಂದ್ರ ಸರ್ಕಾರವು ಹೆಸರನ್ನು ಬದಲಾಯಿಸಲು ನಿರ್ಧರಿಸಿದಂತಿದೆ’ ಎಂದು ಹೇಳಿದರು.
ಇದೀಗ ಕರ್ನಾಟಕದಲ್ಲೂ ಹೆಸರು ಬದಲಾವಣೆ ಚರ್ಚೆ ನಡೆಯುತ್ತಿದೆ. ರಾಮನಗರ ಜಿಲ್ಲೆಯನ್ನು ಬೆಂಗಳೂರಿಗೆ ಸೇರಿಸುವುದರಿಂದ ಆರಂಭಗೊಂಡ ಚರ್ಚೆ ಇದೀಗ ಕರ್ನಾಟಕ ಹೆಸರನ್ನು ಬಸವಣ್ಣನ ನಾಡು ಎಂದು ಮರುನಾಮಕರಣ ಮಾಡಬೇಕು ಅನ್ನೋ ಚರ್ಚೆಗಳು ನಡೆಯುತ್ತಿದೆ. ಕನ್ನಡ ರಾಜ್ಯೋತ್ಸವ ಸಂದರ್ಭದಲ್ಲಿ ಈ ಚರ್ಚೆ ಶುರುವಾಗಿದೆ.
ಇಂಡಿಯಾ-ಭಾರತ್ ಹೆಸರಿನ ಗದ್ದಲದ ನಡುವೆ, ಕಂಪನಿಯ ಹೆಸರನ್ನು ಭಾರತ್‌ಡಾರ್ಟ್ ಎಂದು ಬದಲಿಸಿದ ಬ್ಲ್ಯೂಡಾರ್ಟ್!