ನವದೆಹಲಿ(ಡಿ.30): ಕೊರೋನಾ ಮಹಾಮಾರಿ ಅಬ್ಬರಿಸುತ್ತಿರುವ ಈ ಸಂದರ್ಭದಲ್ಲಿ ತಮ್ಮನ್ನು ತಾವು ಸುರಕ್ಷಿತರನ್ನಾಗಿಡಲು ಮಾಸ್ಕ್ ಧರಿಸುವುದೂ ಒಂದು ವಿಧಾನವಾಗಿದೆ. ಉತ್ತಮ ಗುಣಮಟ್ಟದ ಮಾಸ್ಕ್ ಶೇ. 70ರಷ್ಟು ಸೋಂಕು ತಡೆಯುತ್ತದೆ ಜೊತೆಗೆ ಇನ್ನಿತರ ವೈರಾಣುಗಳನ್ನೂ ತಡೆಯುತ್ತದೆ.

ಸರ್ಜಿಕಲ್ ಮಾಸ್ಕ್‌ಗಳು ಬಹಳ ಪರಿಣಾಮಕಾರಿಯಾಗಿರುತ್ತವೆ. ಹೀಗಿದ್ದರೂ ಅನೇಕ ಮಂದಿ ಬಟ್ಟೆಯಿಂದ ತಯಾರಿಸಿದ ಮಾಸ್ಕ್‌ಗಳನ್ನು ಬಳಸುತ್ತಾರೆ. ಈ ಮಾಸ್ಕ್ಗಳು ಆರ್ಥಿಕವಾಗಿ ಹಾಗೂ ಪ್ರಕೃತಿಯನಗ್ನು ಗಮನದಲ್ಲಿಟ್ಟುಕೊಂಡರೆ ಒಂದು ಉತ್ತಮ ಆಯ್ಕೆಯಾಗಿದೆ.

ಮರು ಬಳಸಲಾಗುವ ಮಾಸ್ಕ್ ಯಾವಾಗದವರೆಗೆ ಸುರಕ್ಷಿತ?

ಕೊರೋನಾ ನಿಯಂತ್ರಣದ ವೇಳೆ ಪದೇ ಪದೇ ಉಪಯೋಗಿಸಬಹುದಾದ ಮಾಸ್ಕ್ ನಿಮಗೆ ಉತ್ತಮ ಆಯ್ಕೆಯೇ? ಆದರೆ ಹೊಸ ಅಧ್ಯಯನವನ್ನು ಗಮನಿಸಿದರೆ ಮಾಸ್ಕ್ ಬಳಸದಿರುವುದನ್ನು ಹೋಲಿಸಿದರೆ ಂದೇ ಮಾಸ್ಕ್ ಪದೇ ಪದೇ ಬಳಸುವುದು ಬಹಳ ಅಪಾಯಕಾರಿ. ಯಾಕೆ? ಇಲ್ಲಿದೆ ವಿವರ.

ಅಧ್ಯಯನದ ಅನ್ವಯ ಸರ್ಜಿಕಲ್ ಮಾಸ್ಕ್ ಮತ್ತೊಮ್ಮೆ ಬಳಸುವುದು ಮಹಾಮಾರಿ ನಿಯಂತ್ರಣದಲ್ಲಿ ವಿಫಲವಾಗಬಹುದು. ಇದಕ್ಕೆ ಪ್ರಮುಖ ಕಾರಣ ಇದರ ಫ್ಯಾಬ್ರಿಕ್ ಹಾಗೂ ಶೈಲಿ. ಪದೇ ಪ್ದೇ ಬಳಸುವುದರಿಂದ ಹಾಗೂ ಎಕ್ಸ್ಪೋಜರ್‌ನಿಂದ ಮಾಸ್ಕ್ ತನ್ನ ಸರಿಯಾದ ರೂಪ ಕಳೆದುಕೊಳ್ಳುತ್ತದೆ. ಮಾಸ್ಕ್ ತಯಾರಿಸಲು ಬಳಸುವ ಫ್ಯಾಬ್ರಿಕ್ ಒಂದು ಅಬ್ಸಾರ್ಬರ್ ಲೇಯರ್‌ನಂತೆ ತಯಾರಿಸಲಾಗುತ್ತದೆ. ಹೀಗಾಗಿ ಸಮಯ ಕಳೆಯುತ್ತಿದ್ದಂತೆಯೇ ಇದು ತನ್ನ ಕ್ಷಮತೆ ಕಳೆದುಕೊಳ್ಳುತ್ತದೆ.