ಅಮೆರಿಕ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ III  ಭಾರತಕ್ಕೆ ಆಗಮಿಸಿದ್ದಾರೆ. ಶುಕ್ರವಾರ(ಮಾ.19) ಸಂಜೆ ಭಾರತಕ್ಕೆ ಆಗಮಿಸಿದ ಜೇಮ್ಸ್ ನೇರವಾಗಿ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಮೋದಿ ಹಾಗೂ ಜೇಮ್ಸ್ ಜೊತೆಗಿನ ಮಾತುಕತೆ ವಿವರ ಇಲ್ಲಿವೆ.

ನವೆದೆಹಲಿ(ಮಾ.19):  ಭಾರತದ ಅಧಿಕೃತ ಭೇಟಿಯಲ್ಲಿರುವ ಅಮೆರಿಕಾ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಜೇಮ್ಸ್ ಆಸ್ಟಿನ್ III ಪ್ರಧಾನಿ ನರೇಂದ್ರ ಮೋದಿ ಜೊತೆ ಮಾತುಕತೆ ನಡೆಸಿದ್ದಾರೆ. ಈ ವೇಳೆ ಅಮೇರಿಕ ಅಧ್ಯಕ್ಷ ಜೋ ಬಿಡೆನ್ ಶುಭಾಶಗಳನ್ನು ಮೋದಿಗೆ ತಿಳಿಸಿದ್ದಾರೆ. 

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇಂಡೋ-ಪೆಸಿಫಿಕ್ ಒಳಿತಿಗೆ ಕ್ವಾಡ್ ಮಹತ್ವದ ಆಧಾರ ಸ್ತಂಭ ಎಂದ ಮೋದಿ!

ಭಾರತ ಹಾಗೂ ಅಮೆರಿಕ ಪ್ರಜಾಪ್ರಭುತ್ವ ಆಧಾರಿತ ದೇಶವಾಗಿದೆ. ಬದ್ಧತೆಯ ಹಂಚಿಕೆಯ ಮೌಲ್ಯಗಳಲ್ಲಿ ಬೇರೂರಿರುವ ಉಭಯ ದೇಶಗಳ ನಡುವಿನ ಆತ್ಮೀಯ ಮತ್ತು ನಿಕಟ ಸಂಬಂಧವನ್ನು ಪ್ರಧಾನಿ ಮೋದಿ ಈ ವೇಳೆ ಉಲ್ಲೇಖಿಸಿದ್ದಾರೆ. ಉಭಯ ದೇಶಗಳ ನಡುವಿನ ಸಹಭಾಗಿತ್ವಕ್ಕಾಗಿ ಪ್ರಧಾನಿ ದೇಶದ ನಿಲುವ ಹಾಗೂ ದೃಷ್ಟಿಕೋನವನ್ನು ವಿವರಿಸಿದರು. ಭಾರತ-ಯುಎಸ್ ಸಂಬಂಧಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. 

ಉಭಯ ದೇಶಗಳ ನಡುವಿನ ಕಾರ್ಯತಂತ್ರದ ಸಹಭಾಗಿತ್ವಕ್ಕಾಗಿ ಪ್ರಧಾನಿ ತಮ್ಮ ದೃಷ್ಟಿಕೋನವನ್ನು ವಿವರಿಸಿದರು ಮತ್ತು ಭಾರತ-ಯುಎಸ್ ಸಂಬಂಧಗಳಲ್ಲಿ ದ್ವಿಪಕ್ಷೀಯ ರಕ್ಷಣಾ ಸಹಕಾರದ ಪ್ರಮುಖ ಪಾತ್ರವನ್ನು ಒತ್ತಿ ಹೇಳಿದರು. ಅಮರಿಕ ಅಧ್ಯಕ್ಷ ಜೋ ಬಿಡೆನ್‌ಗೆ ತಮ್ಮ ಶುಭಾಶಯ ತಿಳಿಸುವಂತೆ ಆಸ್ಟಿನ್ ಅವರಿಗೆ ಮೋದಿ ಹೇಳಿದ್ದಾರೆ.

ಉಭಯ ದೇಶಗಳ ನಡುವಿನ ದ್ವಿಪಕ್ಷೀಯ ರಕ್ಷಣಾ ಸಂಬಂಧಗಳನ್ನು ಬಲಪಡಿಸುವ ನಿಟ್ಟಿನಲ್ಲಿ ಯು.ಎಸ್. ಸರ್ಕಾರದ ಬದ್ಧತೆಯನ್ನು ಜೇಮ್ಸ್ ಆಸ್ಟಿನ್ ಪುನರುಚ್ಚರಿಸಿದ್ದಾರೆ. ಇಂಡೋ-ಪೆಸಿಫಿಕ್ ಪ್ರದೇಶದಲ್ಲಿ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಯ ಕಾರ್ಯತಂತ್ರದ ಸಹಭಾಗಿತ್ವವನ್ನು ಜೇಮ್ಸ್ ಒತ್ತಿ ಹೇಳಿದ್ದಾರೆ.