ಇದೇ ಮೊದಲ ಬಾರಿಗೆ ನಡೆದ ಕ್ವಾಡ್ ಸಮ್ಮಿಟ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ, ಆಸ್ಟ್ರೇಲಿಯಾ ಪ್ರಧಾನಿ ಪಾಲ್ಗೊಂಡಿದ್ದಾರೆ. ಸಮ್ಮಿಟ್‌ನಲ್ಲಿ ಮೋದಿ ಮಾತಿನ ಪ್ರಮುಖಾಂಶ ಇಲ್ಲಿದೆ.
ನವದೆಹಲಿ(ಮಾ.12): ಇಂಡೋ-ಪೆಸಿಫಿಕ್ ಒಳಿತಿಗೆ ಕ್ವಾಡ್ ಆಧಾರ ಸ್ತಂಭ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ. ವರ್ಚುವಲ್ ಮೂಲಕ ನಡೆದ ಮೊತ್ತದ ಮೊದಲ ಕ್ವಾಡ್ ಶೃಂಗ ಸಭೆಯಲ್ಲಿ ಪಾಲ್ಗೊಂಡ ಮೋದಿ ಮಹತ್ವದ ವಿಚಾರ ಹಂಚಿಕೊಂಡಿದ್ದಾರೆ.
ಜಪಾನ್ ಪ್ರಧಾನಿ ಜೊತೆ ಮೋದಿ ಫೋನ್ ಮಾತುಕತೆ: ದ್ವಿಪಕ್ಷೀಯ ಸಂಬಂಧ ವೃದ್ಧಿಗೆ ಮಹತ್ವದ ಚರ್ಚೆ!.
ಅಮೆರಿಕ ಅಧ್ಯಕ್ಷ ಜೋ ಬೈಡೆನ್, ಜಪಾನ್ ಪ್ರಧಾನಿ ಯೋಶಿಹಿದಾ ಸುಗಾ,, ಆಸ್ಟ್ರೇಲಿಯಾ ಪ್ರಧಾನಿ ಸ್ಕಾಟ್ ಮಾರಿಸನ್ ಸಮ್ಮಿಟ್‌ನಲ್ಲಿ ಮಹತ್ವದ ವಿಚಾರ ಚರ್ಚೆ ಮಾಡಿದ್ದಾರೆ. ಇಂಡೋ-ಪೆಸಿಫಿಕ್ ವಲಯದ ಹವಾಮಾನ ವೈಪರಿತ್ಯ, ಭದ್ರತೆಯಲ್ಲಿ ಎದುರಾಗಿರುವ ಸವಾಲು ಹಾಗೂ ತಂತ್ರಜ್ಞಾನ ಬಳಸಿಕೊಂಡು ಪರಿಹಾರ ಹುಡುಕಲು ಕ್ವಾಡ್ ಜಾಗತಿಕ ಶಕ್ತಿಯಾಗಲಿದೆ ಎಂದು ಮೋದಿ ಹೇಳಿದ್ದಾರೆ.
ವಸುದೈವ ಕುಟುಂಬಕಂ ತತ್ವಶಾಸ್ತ್ರದಲ್ಲಿ ನಾವು ಬೆಳೆದುಬಂದಿದ್ದೇವೆ, ಇಡೀ ಜಗತ್ತನ್ನೇ ಒಂದೇ ಕುಟುಂಬ ಎಂದು ಪರಿಗಣಿಸುವ ಭಾರತ ಇದೀಗ ಕ್ವಾಡ್ ಮೂಲಕ ನಾವೆಲ್ಲಾ ಒಗ್ಗಟ್ಟಾಗಿ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಟ ಮಾಡಬೇಕಿದೆ. ನಮ್ಮ ಹಂಚಿಕೆಯ ಮೌಲ್ಯಗಳನ್ನು ಹೆಚ್ಚಿಸಲು ಮತ್ತು ಸುರಕ್ಷಿತ, ಸ್ಥಿರ ಮತ್ತು ಸಮೃದ್ಧ ಇಂಡೋ-ಪೆಸಿಫಿಕ್ ಉತ್ತೇಜಿಸಲು ನಾವು ಹಿಂದೆಂದಿಗಿಂತಲೂ ಒಗ್ಗಟ್ಟಾಗಿ ಹೆಜ್ಜೆ ಇಡಲಿದ್ದೇವೆ ಎಂದು ಮೋದಿ ಹೇಳಿದ್ದಾರೆ.
21 ವಿದ್ವಾಂಸರ ವ್ಯಾಖ್ಯಾನಗಳೊಂದಿಗೆ ಭಗವದ್ಗೀತೆಯ 11 ಸಂಪುಟ ಲೋಕಾರ್ಪಣೆ ಮಾಡಿದ ಮೋದಿ!.
ನಮ್ಮ ಪ್ರಜಾಪ್ರಭುತ್ವದ ಮೌಲ್ಯ ಹಾಗೂ ಇಂಡೋ-ಪೆಸಿಫಿಕ್ ಅಭಿವೃದ್ಧಿ ಬದ್ಧತೆಯಿಂದ ನಾವು ಒಂದಾಗಿದ್ದೇವೆ. ಇಂದಿನ ನಮ್ಮ ಅಜೆಂಡಾ ಲಸಿಕೆ ಮೂಲಕ ಹೆಚ್ಚಿನ ವಲಯಗಳನ್ನು ಆರೋಗ್ಯ ಸಮಸ್ಯೆಯಿಂದ ಮುಕ್ತವಾಗಿಸುವುದು. ಇದರ ಜೊತೆಗೆ ಬಹುದೊಡ್ಡ ಸವಾಲಾಗಿರುವ ಹವಾಮಾನ ಬದಲಾವಣೆ, ತಂತ್ರಜ್ಞಾನಗಳ ಬಳಕೆಗೆ ಮೂಲಕ ಕ್ವಾಡ್ ಜಾಗತಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಮೋದಿ ಹೇಳಿದ್ದಾರೆ.
