Asianet Suvarna News Asianet Suvarna News

ಭಾರತದ ರಾಷ್ಟ್ರಗೀತೆ ವೇಳೆ ಎದೆಮೇಲೆ ಕೈ ಇರಿಸಿಕೊಂಡಿದ್ದ ಬೈಡೆನ್‌ ಫುಲ್‌ ಟ್ರೋಲ್‌!

ಪ್ರಧಾನಿ ನರೇಂದ್ರ ಮೋದಿ ಸ್ವಾಗತದ ವೇಳೆ ಭಾರತದ ರಾಷ್ಟ್ರಗೀತೆಯನ್ನು ಹಾಕಲಾಗಿತ್ತು. ಈ ವೇಳೆ ಅದನ್ನು ಅಮೆರಿಕದ ರಾಷ್ಟ್ರಗೀತೆ ಎಂದು ಭಾವಿಸಿದ ಅಧ್ಯಕ್ಷ ಜೋ ಬೈಡೆನ್‌, ಎದೆಯ ಮೇಲೆ ಕೈಇರಿಸಿಕೊಂಡಿದ್ದರು. ಕೊನೆಗೆ ಇದು ದೇಶದ ರಾಷ್ಟ್ರಗೀತೆಯಲ್ಲ ಎಂದು ತಿಳಿದಾಗ ನಿಧಾನವಾಗಿ ಕೈ ಇಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ.

US President Biden oddly puts hand on heart for India anthem at Narendra Modi welcome san
Author
First Published Jun 23, 2023, 12:39 PM IST

ನವದೆಹಲಿ (ಜೂ.23): ವೈಟ್‌ಹೌಸ್‌ನಲ್ಲಿ ಭಾರತದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಸ್ವಾಗತ ನೀಡುವ ವೇಳೆ ಅಮೆರಿಕದ ಅಧ್ಯಕ್ಷ ಜೋ ಬೈಡೆನ್‌ ಮುಜುಗರದ ಸನ್ನುವೇಶ ಸೃಷ್ಟಿಸಿದ್ದಾರೆ. ಶ್ವೇತಭವನಕ್ಕೆ ಮೋದಿ ಆಗಮಿಸಿದ ವೇಳೆ ಉಭಯ ದೇಶಗಳ ನಾಯಕರು ಎರಡೂ ದೇಶಗಳ ರಾಷ್ಟ್ರಗೀತೆಗಾಗಿ ನಿಂತಿದ್ದರು. ಈ ಹಂತದಲ್ಲಿ ಮೊದಲಿಗೆ ಭಾರತದ ರಾಷ್ಟ್ರಗೀತೆಯನ್ನು ನುಡಿಸಲಾಗಿತ್ತು. ಈ ವೇಳೆ ಇದನ್ನು ಅಮೆರಿಕದ ರಾಷ್ಟ್ರಗೀತೆ ಎಂದು ಭಾವಿಸಿದ ಅಧ್ಯಕ್ಷ ಜೋ ಬೈಡೆನ್‌ ತಮ್ಮ ಕೈಯನ್ನು ಎದೆಯ ಮೇಲೆ ಇರಿಸಿದ್ದರು. ಕೆಲ ಹೊತ್ತಿನ ಬಳಿಕ ಇದು ಅಮೆರಿಕದ್ದಲ್ಲ, ಭಾರತದ ರಾಷ್ಟ್ರಗೀತೆ ಎನ್ನುವ ಅರಿವಿಗೆ ಬಂದಿದೆ. ಈ ಹಂತದಲ್ಲಿ ಅವರು ನಿಧಾನವಾಗಿ ಕೈಗಳನ್ನು ಎದೆಯ ಮೇಲಿಂದ ಕೆಳಗಿಳಿಸುತ್ತಿರುವ ವಿಡಿಯೋ ವೈರಲ್‌ ಆಗಿದೆ. 80 ವರ್ಷದ ಜೋ ಬೈಡೆನ್‌, ಶ್ವೇತಭವನದಲ್ಲಿ ಪ್ರಧಾನಿ ಮೋದಿಗೆ ಕೆಂಪು ಹಾಸಿನ ಸ್ವಾಗತ ನೀಡಿದ್ದರು. ರಷ್ಯಾ ಹಾಗೂ ಚೀನಾ ನಡುವಿನ ಅಮೆರಿಕದ ಸಂಬಂಧ ಹಳಸುತ್ತಿರುವ ನಡುವೆ ನವದೆಹಲಿ ಹಾಗೂ ವಾಷಿಂಗ್ಟನ್‌ ನಡುವಿನ ಸಂಬಂಧ ಗಟ್ಟಿ ಮಾಡುವ ಪ್ರಯತ್ನದಲ್ಲಿ ಬೈಡೆನ್‌, ಪ್ರಧಾನಿ ಮೋದಿಗೆ ಸ್ವಾಗತ ಕಾರ್ಯಕ್ರಮ ಏರ್ಪಡಿಸಿದ್ದರು.
ಇದರೊಂದಿಗೆ 7 ಸಾವಿರಕ್ಕಿಂತ ಅಧಿಕ ಅತಿಥಿಗಳು ವೈಟ್‌ಹೌಸ್‌ನ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಓಲ್ಡ್‌ ಗಾರ್ಡ್‌ ಫೈಫ್‌ ಮತ್ತು ಡ್ರಮ್‌ ಕಾರ್ಪ್ಸ್‌ ಹಾಗೂ  ಮಲ್ಟಿ ಗನ್‌ ಸೆಲ್ಯೂಟ್‌ಅನ್ನು ಮೋದಿ ಅವರುಗೆ ನೀಡಲಾಯತು. ಈ ಹಂತದಲ್ಲಿ ಉಭಯ ನಾಯಕರು ಹೆಗಲಿಗೆ ಹೆಗಲು ಕೊಟ್ಟು ನಿಂತಿದ್ದರು.

ಈ ವೇಳೆ ಯುನೈಟೆಡ್‌ ಸ್ಟೇಟ್ಸ್‌ ಆರ್ಮಿ ಓಲ್ಡ್‌ ಗಾರ್ಡ್‌ ಫೈಫ್‌ ಮತ್ತು ಡ್ರಮ್‌ ಕಾರ್ಪ್ಸ್‌, ಮೊದಲಿಗೆ ಭಾರತದ ರಾಷ್ಟ್ರಗೀತೆಯಾದ ಜನ ಗಣ ಮನವನ್ನು ನುಡಿಸಿದರು. ಈ ಹಂತದಲ್ಲಿ ಬೈಡನ್‌ ಎದೆಯ ಎಡಭಾಗಕ್ಕೆ ಕೈಗಳನ್ನು ಇಟ್ಟು ಪ್ಲೆಡ್ಜ್‌ ಮಾಡಲು ಆರಂಭಿಸಿದ್ದರು. ಅಂದಾಜು 15 ಸೆಕೆಂಡ್‌ಗಳ ಬಳಿಕ ಇದು ಅಮೆರಿಕದ ರಾಷ್ಟ್ರಗೀತೆಯಲ್ಲ ಎನ್ನುವುದು ಅರಿವಿಗೆ ಬಂದಿದೆ. ಅಮೆರಿಕದ ರಾಷ್ಟ್ರಗೀತೆಯಾದ 'ದಿ ಸ್ಟಾರ್‌ ಸ್ಪ್ಯಾಂಗಲ್ಡ್‌  ಬ್ಯಾನರ್‌' ಇವರು ನುಡಿಸುತ್ತಿಲ್ಲ ಎನ್ನುವುದು ಅರಿವಿಗೆ ಬಂದಾಗ ನಿಧಾನವಾಗಿ ಕೈಗಳನ್ನು ಕೆಳಗೆ ಇಳಿಸುತ್ತಿರುವುದು ಕಂಡಿದೆ.

ಸ್ವಾಗತ ಸಮಾರಂಭದಲ್ಲಿ ಭಾರತೀಯ ಮೂಲದ ಯುವ ಪಿಟೀಲು ವಾದಕಿಯಾದ ವಿಭಾ ಜಯರಾಮನ್‌ ಕಾರ್ಯಕ್ರಮದೊಂದಿಗೆ ಆರಂಭವಾಯಿತು. ವಿಭಾ ಜಯರಾಮನ್‌ ಅವರ ಪಿಟೀಲು ವಾದನಕ್ಕೆ ಅಮೆರಿಕದ ಫರ್ಸ್ಟ್‌ ಲೇಡಿ ಜಿಲ್‌ ಬೈಡೆನ್‌ ಕೂಡ ಮೆಚ್ಚುಗೆ ಸೂಚಿಸಿ ಟ್ವೀಟ್‌ ಮಾಡಿದ್ದಾರೆ. ಅದರೊಂದಿಗೆ ಪೆನ್‌ ಮಾಸಲಾ ಕ್ಯಾಪೆಲ್ಲಾ ಗ್ರೂಪ್‌ ಕೂಡ ಕಾರ್ಯಕ್ರಮ ನೀಡಿತು. ಮೋದಿ ಶ್ವೇತಭವನಕ್ಕೆ ಆಗಮಿಸಿದ ಬೆನ್ನಲ್ಲಿಯೇ ಭಾರತೀಯ ಅಮೆರಿಕನ್ನರು ಮೋದಿ ಮೋದಿ ಎಂದು ಹರ್ಷೋದ್ಘಾರ ಮಾಡಿದರು.

PM Modi US Visit: ಭಾರತದ ಪ್ರಧಾನಿಗೆ 'ನಮೋ' ಎಂದ ಅಮೆರಿಕದ ರಾಜಕಾರಣಿಗಳು

"ಯುನೈಟೆಡ್ ಸ್ಟೇಟ್ಸ್ ಮತ್ತು ಭಾರತದ ನಡುವಿನ ಸಂಬಂಧವು 21 ನೇ ಶತಮಾನದ ವ್ಯಾಖ್ಯಾನಿಸುವ ಸಂಬಂಧಗಳಲ್ಲಿ ಒಂದಾಗಿದೆ ಎಂದು ನಾನು ದೀರ್ಘಕಾಲ ನಂಬಿದ್ದೇನೆ" ಎಂದು ಬಿಡೆನ್ ಹೇಳಿದರು. "ನಾನು ಅಧ್ಯಕ್ಷನಾದ ನಂತರ, ನಾವು ಪರಸ್ಪರ ನಂಬಿಕೆ, ಪ್ರಾಮಾಣಿಕತೆ ಮತ್ತು ಗೌರವದ ಮೇಲೆ ನಿರ್ಮಿಸಲಾದ ಸಂಬಂಧವನ್ನು ನಿರ್ಮಿಸುವುದನ್ನು ಮುಂದುವರೆಸಿದ್ದೇವೆ." ಎಂದಿದ್ದಾರೆ.

PM Modi US Visit: ಭಯೋತ್ಪಾದನೆ ವಿಚಾರದಲ್ಲಿ ಪಾಕಿಸ್ತಾನಕ್ಕೆ ಚಾಟಿ ಬೀಸಿದ ಮೋದಿ, ಬೈಡೆನ್‌

Follow Us:
Download App:
  • android
  • ios