ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರ ಕೆಂಪುಕೋಟೆ ಭಾಷಣಕ್ಕೆ ಅಮೆರಿಕದ ಎರಡೂ ಪಕ್ಷಗಳ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. 

ವಾಷಿಂಗ್ಟನ್‌: ಆಗಸ್ಟ್‌ 15ರ ಸ್ವಾತಂತ್ರ್ಯ ದಿನಾಚರಣೆಯಂದು ಪ್ರಧಾನಿ ನರೇಂದ್ರ ಮೋದಿ ಅವರ ಕೆಂಪುಕೋಟೆ ಭಾಷಣಕ್ಕೆ ಅಮೆರಿಕದ ಎರಡೂ ಪಕ್ಷಗಳ ಸಂಸದರು ಪಾಲ್ಗೊಳ್ಳಲಿದ್ದಾರೆ ಎಂದು ಅಧಿಕೃತ ಹೇಳಿಕೆಯೊಂದು ತಿಳಿಸಿದೆ. ಅಮೆರಿಕದ ಸಂಸತ್ತಿನ ಉಭಯ ಪಕ್ಷಗಳ ಸಂಸದರ ನಿಯೋಗದ ನೇತೃತ್ವವನ್ನು ಭಾರತೀಯ ಮೂಲದ ಅಮೆರಿಕ ಸಂಸದ ರೋ ಖನ್ನಾ ವಹಿಸಲಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು ‘ಅಮೆರಿಕದ ಉಭಯ ಪಕ್ಷಗಳ ನಿಯೋಗವನ್ನು ಮುನ್ನಡೆಸುವುದು ಮತ್ತು ಭಾರತದ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸಲು ಅಲ್ಲಿಗೆ ಬರುವುದು ಗೌರವಯುತವಾಗಿದೆ. ಭಾರತ- ಅಮೆರಿಕ ಬಾಂಧವ್ಯಕ್ಕೆ ಇದೊಂದು ಐತಿಹಾಸಿಕ ಕ್ಷಣವೂ ಹೌದು. ಪ್ರಧಾನಿ ಮೋದಿ, ಸಚಿವ ಜೈಶಂಕರ್‌, ಕ್ರಿಕೆಟ್‌, ಬಾಲಿವುಡ್‌ ಹಾಗೂ ವ್ಯಾಪಾರ ಮತ್ತು ತಂತ್ರಜ್ಞಾನ ಕ್ಷೇತ್ರದ ಹಲವರನ್ನು ಭೇಟಿಯಾಗಲು ಯೋಜಿಸಿದ್ದೇನೆ ಎಂದರು.

ವಿಪಕ್ಷಗಳಿಗೆ ಚೀನಾ ನಂಟು ಎಂದ ಸಚಿವ ಪಿಯೂಷ್‌ ವಿರುದ್ಧ ಹಕ್ಕುಚ್ಯುತಿ

ನವದೆಹಲಿ: ಚೀನಾ ಪರ ನಿಲವು ಹೊಂದಿರುವ ನ್ಯೂಸ್‌ಕ್ಲಿಕ್‌ ವೆಬ್‌ಸೈಟ್‌ಗೂ ವಿಪಕ್ಷಗಳಿಗೂ ಸಂಬಂಧ ಇದೆ ಎಂಬರ್ಥದಲ್ಲಿ ಮಾತನಾಡಿದ್ದ ರಾಜ್ಯಸಭೆಯಲ್ಲಿನ ಆಡಳಿತ ಪಕ್ಷದ ನಾಯಕ ಪಿಯೂಷ್‌ ಗೋಯಲ್‌ ಹೇಳಿಕೆ ವಿರುದ್ಧ ಹಕ್ಕಚ್ಯುತಿ ನಿರ್ಣಯ ಮಂಡಿಸಲು ವಿಪಕ್ಷಗಳು ಮುಂದಾಗಿವೆ. ಈ ಕುರಿತು ಅವು ಮಂಗಳವಾರ ರಾಜ್ಯಸಭೆಯ ಅಧ್ಯಕ್ಷ ಧನಕರ್‌ ಅವರಿಗೆ ನಿರ್ಣಯ ಮಂಡನೆಯ ನೋಟಿಸ್‌ ರವಾನಿಸಿವೆ. ತಮ್ಮ ಹೇಳಿಕೆ ಕುರಿತು ಗೋಯಲ್‌ ಕ್ಷಮೆ ಕೇಳದ ಹೊರತೂ ನಮ್ಮ ನಿರ್ಧಾರದಿಂದ ಹಿಂದಕ್ಕೆ ಸರಿಯುವುದಿಲ್ಲ ಎಂದು ವಿಪಕ್ಷಗಳ ನಾಯಕರು ಪಟ್ಟು ಹಿಡಿದಿದ್ದಾರೆ. ಅಲ್ಲದೆ ಇದೇ ವಿಷಯದ ಮುಂದಿಟ್ಟು ವಿಪಕ್ಷ ನಾಯಕರು ಮಂಗಳವಾರ ರಾಜ್ಯಸಭೆಯಲ್ಲಿ ಗದ್ದಲ ಎಬ್ಬಿಸಿದರು.

ಮಲ್ಲಿಕಾರ್ಜುನ್‌ ಖರ್ಗೆ ಬಳಿಕ ಪ್ರಧಾನಿ ಮೋದಿಯನ್ನು ರಾವಣನಿಗೆ ಹೋಲಿಸಿದ ರಾಹುಲ್‌ ಗಾಂಧಿ!

ಮಗ, ಅಳಿಯನ ಉದ್ಧಾರಕ್ಕೆ ಸೋನಿಯಾ ಅವಿಶ್ವಾಸ ನಿರ್ಣಯ: ಬಿಜೆಪಿ ಸಂಸದ

ನವದೆಹಲಿ: ಗಾಂಧಿ ಕುಟುಂಬದ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ಬಿಜೆಪಿ ಸಂಸದ ನಿಶಿಕಾಂತ ದುಬೆ, ಸೋನಿಯಾ ಗಾಂಧಿ ತಂದಿರುವ ಅವಿಶ್ವಾಸ ನಿರ್ಣಯ ಎರಡು ಉದ್ದೇಶ ಹೊಂದಿದೆ. ಅದೇನೆಂದರೆ ಮಗನನ್ನು ಸೆಟ್‌ (ಬೇರೂರುವಂತೆ) ಮಾಡುವುದು ಹಾಗೂ ಅಳಿಯನ್ನು ‘ಭೇಂಟ್‌’ (ಎಲ್ಲರಿಗೂ ಪರಿಚಯಿಸುವುದು) ಮಾಡಿಸುವುದು ಎಂದು ಛೇಡಿಸಿದ್ದಾರೆ. ಅವಿಶ್ವಾಸ ನಿರ್ಣಯದ ಮೇಲಿನ ಚರ್ಚೆಯ ಮೇಲೆ ಮಾತನಾಡಿದ ದುಬೆ, ‘ಸೋನಿಯಾ ಇಲ್ಲೇ ಕೂತಿದ್ದಾರೆ. ಅವಿಶ್ವಾಸ ನಿರ್ಣಯ ತಂದ ಹಿಂದಿನ ಉದ್ದೇಶ ಸ್ಪಷ್ಟವಾಗಿದೆ. ಮಗ ಹಾಗೂ ಅಳಿಯನ ಉದ್ಧಾರ ಮಾಡುವ ತಂತ್ರ ಅದರ ಹಿಂದಿದೆ’ ಎಂದು ಕಿಡಿಕಾರಿದರು.

ಇಡೀ ಭಾರತವೇ ನನ್ನ ಮನೆ: ಆ.12ರಿಂದ ತವರು ಕ್ಷೇತ್ರ ವಯನಾಡ್‌ಗೆ ರಾಹುಲ್ ಭೇಟಿ

ಇನ್ನು ರಾಹುಲ್‌ ಗಾಂಧಿ ಜೈಲು ಶಿಕ್ಷೆಗೆ ಸುಪ್ರೀಂ ಕೋರ್ಟ್‌ ತಡೆ ನೀಡಿದ್ದನ್ನು ಪ್ರಸ್ತಾಪಿಸಿದ ದುಬೆ, ಸುಪ್ರೀಂಕೋರ್ಟು ರಾಹುಲ್‌ರನ್ನು ನಿರ್ದೋಷಿ ಎಂದಿಲ್ಲ. ಕೇವಲ ತಡೆ ನೀಡಿದೆ ಅಷ್ಟೇ. ಕ್ಷಮೆ ಕೇಳಲ್ಲ ಎಂದು ರಾಹುಲ್‌ ಹೇಳುತ್ತಿದ್ದಾರೆ. ನಾನು ಸಾವರ್ಕರ್‌ ಅಲ್ಲ ಎಂದೂ ಹೇಳುತ್ತಿದ್ದಾರೆ. ರಾಹುಲ್‌ ಎಂದೂ ಸಾವರ್ಕರ್‌ ಆಗಲು ಸಾಧ್ಯವಿಲ್ಲ ಎಂದರು.