ಬೆಂಗಳೂರು, (ಫೆ.02): ಮಿಲಿಟರಿಯಿಂದ-ಮಿಲಿಟರಿಯ ಸಂಬಂಧಗಳನ್ನು ಹಾಗೂ ಸಹಕಾರವನ್ನು ಹೆಚ್ಚಿಸಿ ಉಭಯ ದೇಶ ಅಮೆರಿಕ ಮತ್ತು ಭಾರತದ ನಡುವೆ ಸಶಕ್ತ ಬಾಂಧವ್ಯವನ್ನು ಇನ್ನೂ ಗಟ್ಟಿಗೊಳಿಸಲು ಅಮೆರಿಕ ಬದ್ಧವಾಗಿದೆ. 

ಇಂಡೋ ಪೆಸಿಫಿಕ್ ವಲಯದಲ್ಲಿ ಭಾರತ ಮತ್ತು ಅಮೆರಿಕದ ರಕ್ಷಣಾ ಸಹಭಾಗಿತ್ವಕ್ಕೆ ಅಮೆರಿಕ ಒತ್ತು ಕೊಡುವುದರ ಪ್ರತೀಕವಾಗಿ ಅಮೆರಿಕದ ವಿವಿಧ ವಿಭಾಗಗಳ ಉನ್ನತ ಅಧಿಕಾರಿಗಳನ್ನೊಳಗೊಂಡ 100 ಜನರ ನಿಯೋಗವು ಏರೋ ಇಂಡಿಯಾ 2021 ರಲ್ಲಿ ಭಾಗವಹಿಸುತ್ತಿದೆ.

ಏರೋ ಇಂಡಿಯಾದ ಪ್ರಮುಖ ಆಕರ್ಷಣೆಗಳಲ್ಲಿ ಒಂದಾದ B-1B ಲ್ಯಾನ್ಸರ್ ಹೆವಿ ಬಾಂಬರ್,  ಫೆಬ್ರವರಿ 3 ಏರೋ ಇಂಡಿಯಾ 2021 ಉದ್ಘಾಟನಾ ದಿನದಂದು 'ಫ್ಲೈ ಬೈ' ಮಾಡಲಿದೆ. ಭಾರತದ ಸ್ವಾತಂತ್ರಾನಂತರದ ದಿನಗಳಲ್ಲಿ ಇದೇ ಮೊದಲ ಬಾರಿಗೆ ಅಮೆರಿಕದ B-1B ಬಾಂಬರ್ ಭಾರತದ ನೆಲದ ಮೇಲೆ ಕಾಣಿಸಿಕೊಳ್ಳುವ ಮೂಲಕ ಇತಿಹಾಸ ಸೃಷ್ಟಿಸಲಿದೆ. 

ಏರ್ ಶೋ ಕಣ್ತುಂಬಿಕೊಳ್ಳಲು ಹೆಚ್ಚುವರಿ ಬಸ್: ಡೋಂಟ್ ಮಿಸ್

B-1, 28ನೇ ಬಾಂಬ್ ವಿಂಗ್, ಎಲ್ಸ್ ವರ್ತ್ ಏರ್ ಫೋರ್ಸ್ ಬೇಸ್, ಸೌತ್ ಡಕೋಟದ ವಿಮಾನವಾಗಿದ್ದು ಸದರಿ B-1B ಲ್ಯಾನ್ಸರ್ ಸೂಪರ್ ಸಾನಿಕ್ ಹೆವಿ ಬಾಂಬರ್ ಆಗಿದೆ. ಇದೊಂದು ಅದ್ಭುತ ವಿಮಾನ. ಇದು ಜಗತ್ತಿನ ಎಲ್ಲಡೆ ಅಮೆರಿಕಕ್ಕೆ ಸೇರಿದ ಬೇಸ್ ಗಳಿಂದ ಹಾಗೂ ಫಾರ್ವರ್ಡ್-ಡಿಪ್ಲಾಯ್ಡ್ ಜಾಗಗಳಿಂದ ಕೂಡ ಮಿಷನ್ ಗಳನ್ನು ಸಫಲಗೊಳಿಸುವ ಸಾಮರ್ಥ್ಯ ಹೊಂದಿದೆ. ಇದು ಅಮೆರಿಕದ ಏರ್ ಫೋರ್ಸ್ ಗೆ ಸಾಂಪ್ರದಾಯಿಕವಾಗಿ ಗೈಡೆಡ್ ಮತ್ತು ಅನ್ ಗೈಡೆಡ್ ಆಯುಧಗಳನ್ನು ಹೊರುತ್ತದೆ. ಇದು ಅಮೆರಿಕದ ಲಾಂಗ್-ರೇಂಜ್ ಬಾಂಬರ್ ಫೋರ್ಸ್ ಗೆ ಇರುವ ಬೆನ್ನೆಲುಬು ಎಂದೇ ಹೇಳಲಾಗುತ್ತದೆ.

ಏರೋ ಇಂಡಿಯಾ 2021ರ ಹಿನ್ನೆಲೆಯಲ್ಲಿ ಬೆಂಗಳೂರಿನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಶಾರ್ಜೆ ಅಫ಼ೇರ್ಸ್ ಡಾನ್ ಹೆಫ್ಲಿನ್ ಅವರು ಅಮೆರಿಕಕ್ಕೆ ಭಾರತ ಅತ್ಯಂತ ವಿಶ್ವಾಸಾರ್ಹ ರಕ್ಷಣಾ ಸಹಭಾಗಿಯಾಗಿದ್ದು, ಅಚು ಪ್ರಪಂಚದಲ್ಲೇ ಅತ್ಯುತ್ತಮ ರಕ್ಷಣಾ ಯಂತ್ರಗಳ ಪ್ರಸ್ತಾಪವನ್ನು ತಂದಿದೆ ಎಂದರು. 'ಇಂಡೊ ಪೆಸಿಫಿಕ್ ವಲಯದಲ್ಲಿ ಭಾರತದ ಪಾತ್ರ ಬಹಳ ಮುಖ್ಯವಾಗಿದ್ದು, ನಮ್ಮ ಸಹಯೋಗವು ಎಲ್ಲಾ ದೇಶಗಳ ಸಮೃದ್ಧಿ ಮತ್ತು ಸುರಕ್ಷೆಯನ್ನು ಒಳಗೊಂಡ ನಿಯಮಾಧಾರಿತ ಅಂತಾರಾಷ್ಟ್ರೀಯ ವ್ಯವಸ್ಥೆ ಎಂಬ ಸಮಾನ ಪರಿಕಲ್ಪನೆಯನ್ನು ಆಧರಿಸಿದೆ,' ಎಂದರು.

ಅಮೆರಿಕ ಮತ್ತು ಭಾರತದ ರಕ್ಷಣಾ ಕಂಪನಿಗಳ ನಡುವೆ ಹೆಚ್ಚುತ್ತಿರುವ ಜಂಟಿ ಒಪ್ಪಂದಗಳು ಮತ್ತು ಕಾರ್ಯಗಳು ಭಾರತದಲ್ಲಿ ಇರುವ ರಕ್ಷಣಾ ಸರಬರಾಜುದಾರರ ಜಾಲವನ್ನು ಇನ್ನೂ ಸುಧೃಢ ಮಾಡುವಲ್ಲಿ ಮಹತ್ವದ ಪಾತ್ರ ವಹಿಸಿವೆ. ಇದು ಇಂಡೊ ಪೆಸಿಫಿಕ್ ಪ್ರದೇಶದ ಗಡಿ ಪ್ರದೇಶದಲ್ಲಿರುವ ಸಹಭಾಗಿಗಳನ್ನು ಬಲಗೊಳಿಸುವ ಪ್ರಯತ್ನದ ಭಾಗವಾಗಿದೆ. ಈ ಕಂಪನಿಗಳು ಜಗತ್ತಿನಾದ್ಯಂತ ಮಾರುಕಟ್ಟೆಗಳಿಗೆ ರಫ್ತು ಮಾಡಲು ಉತ್ಪಾದನೆ ಮಾಡುವುದಲ್ಲದೆ ಉದ್ಯೋಗ ಸೃಷ್ಟಿಯನ್ನೂ ಮಾಡುತ್ತವೆ ಎಂದು ಹೇಳಿದರು.