ಎಐಎಸ್ ಅಧಿಕಾರಿ ವಿವಾದ ಬೆನ್ನಲ್ಲೇ ಯುಪಿಎಸ್‌ಸಿ ಅಧ್ಯಕ್ಷರ ರಾಜೀನಾಮೆ

ಮನೋಜ್ ಸೋನಿ ಅಧಿಕಾರವಧಿ 2029ರ ಮೇ ತಿಂಗಳಿನಲ್ಲಿ ಮುಗಿಯಬೇಕಿತ್ತು. ಅದಕ್ಕೂ 5 ವರ್ಷಗಳ ಮುಂಚಿತವಾಗಿಯೇ ವೈಯುಕ್ತಿಕ ಕಾರಣ ಕೊಟ್ಟು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

UPSC chairperson Manoj Soni resigns five before tenure mrq

ನವದೆಹಲಿ: ಐಎಎಸ್‌ ಅಧಿಕಾರಿಗಳ ನೇಮಕಾತಿಯ ವಿವಾದದ ಭುಗಿಲೆದ್ದ ಬೆನ್ನಲ್ಲೇ, ನಾಗರಿಕ ಸೇವೆ ಹುದ್ದೆಗಳಿಗೆ ಪರೀಕ್ಷೆ ನಡೆಸುವ ಕೇಂದ್ರೀಯ ಲೋಕಸೇವಾ ಆಯೋಗ (ಯುಪಿಎಸ್ಸಿ) ಅಧ್ಯಕ್ಷ ಮನೋಜ್ ಸೋನಿ ವೈಯುಕ್ತಿಕ ಕಾರಣ ನೀಡಿ ತಮ್ಮ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಈ ಬೆನ್ನಲ್ಲೇ ಕಾಂಗ್ರೆಸ್‌ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ.

2017ರಲ್ಲಿ ಯುಪಿಎಸ್ಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡಿದ್ದ ಮನೋಜ್ ಸೋನಿ ಅಧಿಕಾರವಧಿ 2029ರ ಮೇ ತಿಂಗಳಿನಲ್ಲಿ ಮುಗಿಯಬೇಕಿತ್ತು. ಅದಕ್ಕೂ 5 ವರ್ಷಗಳ ಮುಂಚಿತವಾಗಿಯೇ ವೈಯುಕ್ತಿಕ ಕಾರಣ ಕೊಟ್ಟು ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಪೂಜಾ ಖೇಡ್ಕರ್ ವಿವಾದದ ಬಳಿಕ ಕೇಂದ್ರ ಸಾರ್ವಜನಿಕ ಸೇವೆ ಆಯೋಗದ ವಿವಾದಗಳು ಹಾಗೂ ಅದರ ಸುತ್ತ ಕೇಳಿ ಬರುತ್ತಿರುವ ಆರೋಪಗಳು ಮತ್ತು ರಾಜೀನಾಮೆಗೂ ಯಾವುದೇ ರೀತಿಯಲ್ಲಿ ಸಂಬಂಧವಿಲ್ಲವೆಂದು ತಮ್ಮ ರಾಜೀನಾಮೆಯಲ್ಲಿ ಸೋನಿ ಉಲ್ಲೇಖಿಸಿದ್ದಾರೆ.

ಸಂಕಷ್ಟದಲ್ಲಿ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ IAS ಅಧಿಕಾರಿ ಪೂಜಾ

ಕಾಂಗ್ರೆಸ್‌ ತರಾಟೆ:

ಮನೋಜ್ ಸೋನಿ ರಾಜೀನಾಮೆ ಬೆನ್ನಲ್ಲೇ ಕಾಂಗ್ರೆಸ್‌ ಕೇಂದ್ರವನ್ನು ತರಾಟೆಗೆ ತೆಗೆದುಕೊಂಡಿದೆ.‘ಬಿಜೆಪಿ ಮತ್ತು ಆರ್‌ಎಸ್‌ಎಸ್‌ ಸಂವಿಧಾನಿಕ ಸಂಸ್ಥೆಗಳ ಮೇಲೆ ಹಕ್ಕು ಸಾಧಿಸುವಲ್ಲಿ ತೊಡಗಿಕೊಂಡಿದೆ. ಈ ಮೂಲಕ ಸಂಸ್ಥೆಗಳ ಘನತೆ, ಸಮಗ್ರತೆ, ಸ್ವಾಯತ್ತತೆಗೆ ಹಾನಿ ಮಾಡುತ್ತಿದೆ.’ ಮನೋಜ್‌ ಸೋನಿ ರಾಜೀನಾಮೆಗೂ, ಯುಪಿಎಸ್ಸಿ ಹಗರಣಕ್ಕೂ ಏನಾದರೂ ಸಂಬಂಧವಿದೆಯೇ?’ ಎಂದು ಎಕ್ಸ್‌ನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಪೋಸ್ಟ್ ಮಾಡಿದ್ದಾರೆ.

ಕಾಂಗ್ರೆಸ್‌ ನಾಯಕ ಜೈರಾಂ ಕೂಡ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ‘ಸಾಂವಿಧಾನಿಕ ಸಂಸ್ಥೆಗಳ ಪಾವಿತ್ರ್ಯತೆ, ಸ್ವಾಯತ್ತತೆ 2014ರಿಂದ ಹಾನಿಗೊಳಗಾಗಿದೆ’ ಎಂದಿದ್ದಾರೆ.

ಮಗಳ ಕಿತಾಪತಿ ನಂತರ ಅಮ್ಮನ ಅವಾಂತರವೂ ಬೆಳಕಿಗೆ: ಟ್ರೈನಿ ಐಎಎಸ್ ಅಧಿಕಾರಿಯ ತಾಯಿಯ ಬಂಧನ

Latest Videos
Follow Us:
Download App:
  • android
  • ios