ಬಂಧಿತನಾಗಿದ್ದ ವ್ಯಕ್ತಿಯನ್ನು ಬಿಡಿಸಲು ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಒತ್ತಡ ಹೇರಿದ್ದರು ಎಂದು ನವೀ ಮುಂಬೈ ಪೊಲೀಸರು ಮಹಾರಾಷ್ಟ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ.

ಮುಂಬೈ (ಜು.13): ತನ್ನ ಯೋಗ್ಯತೆಗೂ ಮೀರಿದ ಸೌಲಭ್ಯಗಳಿಗೆ ಬೇಡಿಕೆಯಿಟ್ಟು ಹಾಗೂ ನಕಲಿ ದಾಖಲೆ ನೀಡಿ ನೇಮಕಗೊಂಡು ಸುದ್ದಿಯಾಗಿರುವ ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಎಸಗಿದ್ದಾರೆ ಎನ್ನಲಾದ ಅಕ್ರಮಗಳು ಸಾಬೀತಾದರೆ ಸೇವೆಯಿಂದ ವಜಾ ಮಾಡಲಾಗುವುದು ಎಂದು ಮೂಲಗಳು ಹೇಳಿವೆ.

ಪೂಜಾ ವಿರುದ್ಧ ಈಗ ಕೇಂದ್ರ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ಮನೋಜ್ ದ್ವಿವೇದಿ ತನಿಖೆ ಆರಂಭಿಸಿದ್ದಾರೆ. ಅವರು ದೋಷಿಯೆಂದು ಸಾಬೀತಾದಲ್ಲಿ ಪೂಜಾ ಸೇವೆಯಿಂದ ವಜಾ ಗೊಳ್ಳುವ ಸಾಧ್ಯತೆ ಇದೆ. ಸತ್ಯಸಂಗತಿಯನ್ನು ಮುಚ್ಚಿಟ್ಟು ನೇಮಕವಾದ ಆರೋಪ ನಿಜವಾದರೆ ಆಕೆ ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದ ಅವು ಹೇಳಿವೆ. ಅಕ್ರಮ ಆರೋಪದ ಬೆನ್ನಲ್ಲೇ ಇತ್ತೀಚೆಗೆ ಪೂಜಾಳನ್ನು ಪುಣೆಯಿಂದ ವಾಶಿಮ್‌ಗೆ ಎತ್ತಂಗಡಿ ಮಾಡಲಾಗಿತ್ತು.

ಫೂಜಾ ತಾಯಿಯ ಹಳೆ ವಿಡಿಯೋ ವೈರಲ್

ಟ್ರೈನೀ ಐಎಎಸ್ ಪೂಜಾ ಖೇ ಡ್ಕರ್ ತಾಯಿ ಪಿಸ್ತೂಲು ಹಿಡಿದು ರೈತರನ್ನು ಬೆದರಿಸುತ್ತಿರುವ ಹಳೆಯ ವಿಡಿಯೋ ವೈರಲ್‌ ಆಗಿದೆ. ನಿವೃತ್ತ ಐಎಎಸ್ ಅಧಿಕಾರಿಯಾಗಿದ್ದ ಪೂಜಾ ತಂದೆ ದಿಲೀಪ್‌ ಅನೇಕ ಕಡೆಗಳಲ್ಲಿ ಆಸ್ತಿ ಹೊಂದಿದ್ದು, ರೈತರೊಬ್ಬರ ಜಮೀನನ್ನು ಆಕ್ರಮಿಸಲು ಪ್ರಯತ್ನಿಸಿದ್ದರು. ಆಗ ಕೈಯ್ಯಲ್ಲಿ ಪಿಸ್ತೂಲು ಹಿಡಿದಿರುವ ಪೂಜಾ ತಾಯಿ ಮನೋರಮಾ ಖೇಡ್ಕರ್ ‘ಭೂಮಿ ದಾಖಲೆಗಳಲ್ಲಿ ನನ್ನ ಹೆಸರಿದೆ’ ಎನ್ನುತ್ತ ರೈತನೊಬ್ಬನನ್ನು ಬೆದರಿಸುವುದು ಕಂಡುಬಂದಿದೆ ಹಾಗೂ ಕ್ಯಾಮರಾ ಕಂಡೊಡನೆ ಅದನ್ನು ಮರೆಮಾಚಿದ್ದಾರೆ. ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಪ್ರಯತ್ನಿಸಿದ ರೈತನನ್ನು ತಡೆಯಲಾಗಿತ್ತು ಎನ್ನಲಾಗಿದೆ.

ತನ್ನ ಖಾಸಗಿ ಆಡಿ ಕಾರಿಗೆ ಕೆಂಪು ಗೂಟದ ದೀಪ ಬಳಸುತ್ತಿದ್ದ ಟ್ರೈನಿ ಐಎಎಸ್ ಅಧಿಕಾರಿಯ ವರ್ಗಾವಣೆ

ಕಳನನ್ನು ಬಿಡಿಸಲು ಪೂಜಾ ಲಾಬಿ!

ಕಳ್ಳತನ ಆರೊಪದಲ್ಲಿ ಬಂಧಿತನಾಗಿದ್ದ ವ್ಯಕ್ತಿಯನ್ನು ಬಿಡಿಸಲು ಉಪ ಪೊಲೀಸ್ ಆಯುಕ್ತರ ಮೇಲೆ ಟ್ರೈನೀ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್ ಒತ್ತಡ ಹೇರಿದ್ದರು ಎಂದು ನವೀ ಮುಂಬೈ ಪೊಲೀಸರು ಮಹಾರಾಷ್ಟ್ರ ಸರ್ಕಾರಕ್ಕೆ ಮಾಹಿತಿ ನೀಡಿದ್ದಾರೆ. ಮೇ 18ರಂದು ಪನ್ವೇಲ್‌ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ. ‘ಬಂಧಿತ ಈಶ್ವರ್ ಉತ್ತರವಾಡೆ ನಿರ್ದೋಷಿಯಾಗಿದ್ದು ಆತನನ್ನು ಬಿಡುಗಡೆಗೊಳಿಸಬೇಕು’ ಎಂದು ಉಪ ಪೊಲೀಸ್ ಆಯುಕ್ತ ವಿವೇಕ್ ಪಾನ್ಸರೆಗೆ ಪೂಜಾ ಕರೆ ಮಾಡಿದ್ದರು ಎನ್ನಲಾಗಿದೆ.

ಸಂಚಾರಿ ನಿಯಮ ಉಲ್ಲಂಘನೆ 

ಸಂಚಾರಿ ನಿಯಮ ಉಲ್ಲಂಘಿಸಿದ್ದಕ್ಕೆ ಸಂಬಂಧಪಟ್ಟಂತೆ ಪೂಜಾ ಖೇಡ್ಕರ್, ಐಷಾರಾಶಮಿ ಆಡಿ ಕಾರ್ ವಿರುದ್ಧ ಈವರೆಗೆ 21 ದೂರುಗಳು ದಾಖಲಾಗಿದ್ದು , ರೂ.27,000 ದಂಡ ವಿಧಿಸಲಾಗಿದೆ. 

ಸೇನೆಯಿಂದ ಸಿಕ್ಕ ಪರಿಹಾರದಲ್ಲಿ ನಮಗೇನೂ ಸಿಕ್ಕಿಲ್ಲ, ಸೊಸೆ ನಮ್ಮೊಂದಿಗಿಲ್ಲ: ಹುತಾತ್ಮ ಅನ್ಶುಮನ್ ಪೋಷಕರ ಅಳಲು

Scroll to load tweet…