Asianet Suvarna News Asianet Suvarna News

Uphaar Fire Tragedy: 24 ವರ್ಷ ಹಿಂದಿನ ಪ್ರಕರಣ, ಸಾಕ್ಷ್ಯ ತಿರುಚಿದ ಉದ್ಯಮಿಗಳಿಗೆ 7 ವರ್ಷ ಜೈಲು!

  • 1997ರಲ್ಲಿ ನಡೆದ ಉಹಾರ ಅಗ್ನಿ ಅವಘಡ ಪ್ರಕರಣ
  • ಪ್ರಮುಖ ಸಾಕ್ಷ್ಯ ತಿರುಚಿದ ಉದ್ಯಮಿ ಸುಶೀಲ್, ಗೋಪಾಲ್ ಅನ್ಸಾಲ್
  • ತೀರ್ಪು ನೀಡಿದ ದೆಹಲಿ ಪಟಿಯಾಲ ಕೋರ್ಟ್
     
Uphaar Fire Tragedy case Delhi Court sentenced 7 year jail term to real estate Sushil Ansal and others ckm
Author
Bengaluru, First Published Nov 8, 2021, 8:19 PM IST
  • Facebook
  • Twitter
  • Whatsapp

ನವದೆಹಲಿ(ನ.08):  ಉಪಹಾರ ಅಗ್ನಿ ಅವಘಡ ಪ್ರಕರಣ ಕುರಿತು ದೆಹಲಿಯ ಪಟಿಯಾಲ ಕೋರ್ಟ್ ತೀರ್ಪು ನೀಡಿದೆ. ಸಾಕ್ಷ್ಯ ತಿರುಚಿದ ಕಾರಣಕ್ಕೆ ಉದ್ಯಮಿಗಳಾದ ಸುಶೀಲ್ ಅನ್ಸಾಲ್(Sushil Ansal) ಹಾಗೂ ಗೋಪಾಲ್ ಅನ್ಸಾಲ್(Gopal Ansal0 ಸೇರಿ ಇತರರಿಗೆ ಕೋರ್ಟ್ 7 ವರ್ಷ ಜೈಲು ಶಿಕ್ಷೆ ವಿಧಿಸಿದೆ. ಜೊತೆಗೆ 2.25 ಕೋಟಿ ರೂಪಾಯಿ ದಂಡ ವಿಧಿಸಿದೆ. ಇದರ ಜೊತೆಗೆ ಸಾಕ್ಷ್ಯ ತಿರುಚಲು ಸಹಕರಿಸಿದ ನ್ಯಾಯಾಲಯದ ಮಾಜಿ ಉದ್ಯೋಗಿ ದಿನೇಶ್ ಚಂದ್ ಶರ್ಮಾಗೂ ನ್ಯಾಯಾಲಯ ಶಿಕ್ಷೆ ವಿಧಿಸಿದೆ.

ಉಪಹಾರ್ ಅಗ್ನಿ ಅವಘಡದಲ್ಲಿ(Uphaar Fire Tragedy) ಸಾಕ್ಷ್ಯ ತಿರುಚಿದ ಕಾರಣ ಕಳೆದ ತಿಂಗಳು ಪಟಿಯಾಲಾ ಕೋರ್ಟ್ ರಿಯಲ್ ಎಸ್ಟೇಟ್ ಉದ್ಯಮಿಗಳಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್  ದೋಷಿಗಳೆಂದು ಪಟಿಯಾಲ್ ಕೋರ್ಟ್(Delhi Court) ತೀರ್ಪು ನೀಡಿತ್ತು. ಇದೀಗ ಶಿಕ್ಷೆ ಪ್ರಕಟಿಸಿದೆ. ಈಗಾಗಲೇ 2 ವರ್ಷಗಳ ಶಿಕ್ಷೆ ಅನುಭವಿಸಿ ಬಿಡುಗಡೆಯಾಗಿರುವ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಇದೀಗ 7 ವರ್ಷಗಳ ಶಿಕ್ಷೆ ಅನುಭವಿಸಬೇಕಾಗಿದೆ.

ಪಟಾಕಿ ಅಂಗಡಿಯಲ್ಲಿ ಸ್ಫೋಟ: ಐವರು ಸಾವು, 10 ಮಂದಿಗೆ ಗಾಯ!

1997ರಲ್ಲಿ ಉಪಹಾರ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಚಿತ್ರ ಪ್ರದರ್ಶನದ ವೇಳೆ ಅಗ್ನಿ ಅವಘಡ ಸಂಭವಸಿತ್ತು. ಸೂಕ್ತ ವ್ಯವಸ್ಥೆ ಇಲ್ಲದ ಚಿತ್ರಮಂದಿರದಲ್ಲಿ ಕೂತು ಬಾರ್ಡರ್ ಸಿನಿಮಾ(Border Bollywood Movie) ನೋಡುತ್ತಿದ್ದ ಮಂದಿ ಅತ್ತ ಹೊರಗೆ ಓಡಲು ಆಗದೆ ಬೆಂಕಿಯಲ್ಲಿ ಹಲವರು ಬೆಂದು ಹೋಗಿದ್ದರು. ಸುಮಾರು 59 ಮಂದಿ ಈ ಅವಘಡಲ್ಲಿ ಸಾವನ್ನಪ್ಪಿದ್ದರು. ಅಗ್ನಿ ಅವಘಡ ಸಂಭವಿಸುತ್ತಿದ್ದಂತೆ ಚಿತ್ರಮಂದಿರದಿಂದ ಹೊರಗೆ ಓಡಲು ಯತ್ನಿಸಿದ ಕಾರಣ ಕಾಲ್ತುಳಿತ ಸಂಭವಿಸಿತ್ತು. 110ಕ್ಕೂ ಹೆಚ್ಚು ಮಂದಿ ಕಾಲ್ತುಳಿತದಲ್ಲಿ ಗಾಯಗೊಂಡಿದ್ದರು.

Uphaar Fire Tragedy case Delhi Court sentenced 7 year jail term to real estate Sushil Ansal and others ckm

ಘಟನೆ ಬಳಿಕ ಚಿತ್ರಮಂದಿರ ಮಾಲೀಕರಾದ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಸಹೋದರರು ಮೇಲೆ ಪ್ರಕರಣ ದಾಖಲಾಗಿತ್ತು. ಇದರ ಜೊತೆಗೆ ಹರ್ ಸ್ವರೂಪ್ ಪನ್ವಾರ್ ಹಾಗೂ ಧರ್ಮವೀರ್ ಮಲ್ಹೋತ್ರಾ ಮೇಲೂ ಕೇಸು ದಾಖಲಾಗಿತ್ತು.  ಅನ್ಸಾಲ್ ಸಹೋದರರ ನಿರ್ಲಕ್ಷ್ಯದಿಂದ ಘಟನೆ ಸಂಭಿವಸಿದ ಕಾರಣ 2 ವರ್ಷ ಜೈಲು ಶಿಕ್ಷೆ ಹಾಗೂ 60 ಕೋಟಿ ರೂಪಾಯಿ ದಂಡ ವಿಧಿಸಲಾಗಿತ್ತು. 

ಸುದೀರ್ಘ ವಿಚಾರಣೆ ನಡುವೆ ಸುಶೀಲ್ ಅನ್ಸಾಲ್ ಹಾಗೂ ಗೋಪಾಲ್ ಅನ್ಸಾಲ್ ಸಾಕ್ಷ್ಯಾಧಾರ ತಿರುಚಿದ್ದರು.  ಇತ್ತ  ಹರ್ ಸ್ವರೂಪ್ ಪನ್ವಾರ್ ಹಾಗೂ ಧರ್ಮವೀರ್ ಮಲ್ಹೋತ್ರಾ ಸಾವನ್ನಪ್ಪಿದ್ದಾರೆ. ಸಾಕ್ಷ್ಯ ತಿರುಚಿದ ಕಾರಣ ಅನ್ಸಾಲ್ ಸಹೋದರರಿಗೆ ಇದೀಗ ಶಿಕ್ಷೆ ಪ್ರಕಟಿಸಲಾಗಿದೆ. 

60 ಅಂತಸ್ತಿನ ಐಷಾರಾಮಿ ಫ್ಲ್ಯಾಟ್‌ನಲ್ಲಿ ಬೆಂಕಿ, 19ನೇ ಮಹಡಿ ಧಗಧಗ, ಓರ್ವ ಸಾವು!

1997ರಲ್ಲಿ ಬಿಡುಗಡೆಯಾದ ಭಾರತ ಹಾಗೂ ಪಾಕಿಸ್ತಾನ ನಡುವಿನ ಬಾರ್ಡರ್ ಚಿತ್ರ ಎಲ್ಲಾ ಚಿತ್ರಮಂದಿರಗಳಲ್ಲಿ ಹೌಸ್‌ಫುಲ್ ಪ್ರದರ್ಶನ ಕಂಡಿತ್ತು. 1971ರಲ್ಲಿ ನಡೆದ ಭಾರತ ಹಾಗೂ ಪಾಕಿಸ್ತಾನ ಯುದ್ಧವೇ ಕಥಾ ಚಿತ್ರವಾಗಿತ್ತು. ರಾಜಸ್ಥಾನದ ಲೊಂಜೆವಾಲಾದಲ್ಲಿ ನಡೆದ ಈ ಯುದ್ಧದಲ್ಲಿ ಭಾರತ ಪಾಕಿಸ್ತಾನ ಸೈನ್ಯವನ್ನು ಹಿಮ್ಮೆಟಿಸಿತ್ತು. ಈ ಚಿತ್ರ ದೇಶದಲ್ಲಿ ರಾಷ್ಟ್ರಪ್ರೇಮವನ್ನು ಉಕ್ಕಿಸಿತ್ತು. ಶಾಲಾ ವಿದ್ಯಾರ್ಥಿಗಳಿಗೆ ಈ ಚಿತ್ರ ಪ್ರದರ್ಶಿಸಲಾಗಿತ್ತು. ಇದೇ ಚಿತ್ರ ವೀಕ್ಷೆಣೆ ಮಾಡುತ್ತಿದ್ದ ಸಂದರ್ಭದಲ್ಲಿ ಉಪಹಾರ ಚಿತ್ರಮಂದಿರದಲ್ಲಿ ಅಗ್ನಿ ಅವಘಡ ಸಂಭವಿಸಿತ್ತು. ಉಸಿರುಗಟ್ಟಿ 59 ಮಂದಿ ಸಾವನ್ನಪ್ಪಿದ್ದರು. 

ಉಪಹಾರ್ ಚಿತ್ರಮಂದಿರದಲ್ಲಿ ಬಾರ್ಡರ್ ಚಿತ್ರ ಪ್ರತಿ ದಿನ ಹೌಸ್‌ಫುಲ್ ಪ್ರದರ್ಶನ ಕಾಣುತಿತ್ತು. ಸುಮಾರು 300ಕ್ಕೂ ಹೆಚ್ಚು ಮಂದಿ ಈ ಚಿತ್ರಮಂದಿರದಲ್ಲಿ ಚಿತ್ರ ವೀಕ್ಷಿಸುತ್ತಿದ್ದರು. ಸರಿಯಾದ ವ್ಯವಸ್ಥೆ ಇಲ್ಲದ, ಮಾಲೀಕರ ನಿರ್ಲಕ್ಷ್ಯದಿಂದ ಬೆಂಕಿ ಕಾಣಿಸಿಕೊಂಡಿತ್ತು. ಆದರೆ ಒಳಗೆಡ ಚಿತ್ರವ ವೀಕ್ಷಿಸುತ್ತಿದ್ದ ಪ್ರೇಕ್ಷಕರಿಗೆ ಯಾವ ಮುನ್ಸೂಚನೆಯೂ ಇರಲಿಲ್ಲ. ಹೀಗಾಗಿ ಉಸಿರುಗಟ್ಟಿ ಸಾವನ್ನಪ್ಪಿದ್ದರು.

Follow Us:
Download App:
  • android
  • ios