ಪಬ್‌ಜಿ ಮೂಲಕ ಪ್ರೀತಿ ಶುರುವಾಗಿ ನಾಲ್ಕು ಮಕ್ಕಳೊಂದಿಗೆ ಭಾರತಕ್ಕೆ ಅಕ್ರಮವಾಗಿ ಪ್ರವೇಶಿಸಿದ ಸೀಮಾ ಹೈದರ್ ಸಾಮಾನ್ಯಳಲ್ಲ ಅನ್ನೋದನ್ನು ಯುಪಿ ಪೊಲೀಸರು ದಾಖಲೆ ಸಮೇತ ಬಹಿರಂಗ ಪಡಿಸಿದ್ದಾರೆ. ಸೀಮಾ ಹೈದರ್ ಬಳಿಯಿಂದ 2 ವಿಡಿಯೋ ಕ್ಯಾಸೆಟ್, 4 ಮೊಬೈಲ್ ಫೋನ್, 5 ಪಾಕಿಸ್ತಾನ ಪಾಸ್‌ಪೋರ್ಟ್ ಸೇರಿದಂತೆ ಕೆಲ ಮಹತ್ವದ ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿದೆ.
ಲಖನೌ(ಜು.19) ಪಾಕಿಸ್ತಾನದಿಂದ ತನ್ನ ನಾಲ್ವರು ಮಕ್ಕಳೊಂದಿಗೆ ಭಾರತದ ಪ್ರಿಯಕರನ ಜೊತೆ ಬದುಕಲು ಅಕ್ರಮವಾಗಿ ಬಂದಿರುವ ಸೀಮಾ ಹೈದರ್ ಇದೀಗ ಭಾರತಕ್ಕೆ ತಲೆನೋವಾಗಿದ್ದಾಳೆ. ಪಬ್‌ಜಿ ಗೇಮ್ ಮೂಲಕ ಪರಿಚಯವಾಗಿ ಬಳಿಕ ಪ್ರೀತಿಯಾಗಿ ಪಾಕಿಸ್ತಾನದಿಂದ ನೇಪಾಳಕ್ಕೆ ತೆರಳಿ, ನೇಪಾಳದಿಂದ ಭಾರತಕ್ಕೆ ಆಗಮಿಸಿದ ಸೀಮಾ ಹೈದರ್ ವಿಚಾರಣೆ ತೀವ್ರಗೊಂಡಿದೆ. ಉತ್ತರ ಪ್ರದೇಶ ಪೊಲೀಸರು ವಿಚಾರಣೆ ಬಳಿಕ ಸ್ಫೋಟಕ ಮಾಹಿತಿ ಬಿಚ್ಚಿಟ್ಟಿದ್ದಾರೆ. ಸೀಮಾ ಹೈದರ್ ಬಳಿಯಿಂದ 4 ಮೊಬೈಲ್ ಫೋನ್, 5 ಪಾಕಿಸ್ತಾನ ಪಾಸ್‌ಪೋರ್ಟ್, 2 ವಿಡಿಯೋ ಕ್ಯಾಸೆಟ್ ವಶಪಡಿಸಿಕೊಳ್ಳಲಾಗಿದೆ ಎಂದು ಯುಪಿ ಪೊಲೀಸರು ಹೇಳಿದ್ದಾರೆ.
ಒಂದಲ್ಲ, ಎರಡಲ್ಲ, 5 ಪಾಕಿಸ್ತಾನದ ಅಧಿಕೃತ ಪಾಸ್‌ಪೋರ್ಟ್ ಹೊಂದಿದ್ದಾಳೆ. ಇದರಲ್ಲಿ ಒಂದು ಪಾಸ್‌ಪೋರ್ಟ್ ಇನ್ನೂ ಬಳಕೆ ಮಾಡಿಲ್ಲ. ಇದರ ಜೊತೆಗೆ ಗುರುತಿನ ಚೀಟಿ ಸೇರಿದಂತೆ ಇತರ ಕೆಲ ದಾಖಲೆಗಳನ್ನು ಸೀಮಾ ಹೈದರ್ ಬಳಿಯಿಂದ ವಶಕ್ಕೆ ಪಡೆಯಲಾಗಿದೆ. ಇದೀಗ ಯುಪಿ ಪೊಲೀಸರು ವಿಚಾರಣೆ ತೀವ್ರಗೊಳಿಸಲಾಗಿದೆ.
PUBG ಲವರ್ ಸೀಮಾ ಹೈದರ್ ಸೋದರ, ಅಂಕಲ್ ಪಾಕ್ ಸೇನೆಯಲ್ಲಿ ಕೆಲಸ: ಪಾಕ್ ಮಹಿಳೆ ಬಗ್ಗೆ ಮತ್ತಷ್ಟು ಅನುಮಾನ
ಸೀಮಾ ಪಾಕಿಸ್ತಾನ ಸೇನೆ ಅಥವಾ ಅಲ್ಲಿನ ಗುಪ್ತಚರ ಇಲಾಖೆ ಐಎಸ್‌ಐ ಜತೆ ಸಂಪರ್ಕದಲ್ಲಿದ್ದಾಳಾ ಎಂಬ ಶಂಕೆಯ ಮೇರೆಗೆ ತನಿಖೆ ನಡೆಸುತ್ತಿರುವ ಪೊಲೀಸರ ಭಯೋತ್ಪಾದಕ ನಿಗ್ರಹ ತಂಡ (ಎಟಿಎಸ್) ಇದರ ಭಾಗವಾಗಿ ಆಕೆಯ ಪ್ರಿಯಕರ ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್‌ನನ್ನೂ ವಿಚಾರಣೆ ನಡೆಸಲಾಗಿದೆ.
ಸಚಿನ್ ಮೀನಾ ಹಾಗೂ ಆತನ ತಂದೆ ನೇತ್ರಪಾಲ್ ಸಿಂಗ್ ವಿರುದ್ಧ ಪ್ರಕರಣ ದಾಖಲಾಗಿದೆ. ಅಕ್ರಮವಾಗಿ ಪಾಕಿಸ್ತಾನದಿಂದ ಭಾರತಕ್ಕೆ ಆಗಮಿಸಿದ ಮಹಿಳೆಗೆ ಆಶ್ರಯ ನೀಡಿದ ಕಾರಣ ದೂರು ದಾಖಲಾಗಿದೆ. ಸೀಮಾ ಹೈದರ್ ವಿಚಾರಣೆಯಲ್ಲಿ ಹಲವು ಮಾಹಿತಿಗಳು ಲಭ್ಯವಾಗಿದೆ. ಸೀಮಾ ಹೈದರ್ ಸೋದರ ಪಾಕಿಸ್ತಾನ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ಮಾಹಿತಿಯೂ ಬಹಿರಂಗವಾಗಿದೆ. ಹೀಗಾಗಿ ಅನುಮಾನಗಳು ಹೆಚ್ಚಾಗಿದೆ.
ಸೀಮಾ ಹೈದರ್ ಸೀಮೊಲ್ಲಂಘನೆ, ಸಿಂಧ್ ಪ್ರಾಂತ್ಯದ 30 ಹಿಂದೂಗಳ ಒತ್ತೆಯಾಳಾಗಿಟ್ಟ ಪಾಕಿಸ್ತಾನ!
ಸೋಮವಾರ ಸೀಮಾ ಮತ್ತು ಸಚಿನ್‌ರನ್ನು ಎಟಿಎಸ್ 6 ತಾಸುಗಳ ಕಾಲ ವಿಚಾರಣೆ ನಡೆಸಿತ್ತು. ಆಕೆಯ ಮೊಬೈಲ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ರವಾನಿಸಲಾಗಿದೆ. ನೊಯ್ಡಾ ನಿವಾಸಿ ಸಚಿನ್‌ಗಾಗಿ ಕಳೆದ ಮೇ ತಿಂಗಳಲ್ಲಿ ಭಾರತಕ್ಕೆ ಬಂದಿದ್ದ ಸೀಮಾ ಈಗ ಆತನೊಂದಿಗೆ ವಾಸಿಸುತ್ತಿದ್ದಾಳೆ.ಇನ್ನು ಪಾಕಿಸ್ತಾನದಿಂದ ಭಾರತಕ್ಕೆ ಬಂದಿರುವ ಸೀಮಾ ಹೈದರ್‌ಳನ್ನು ಮರಳಿ ಪಾಕಿಸ್ತಾನಕ್ಕೆ ಕಳುಹಿಸದಿದ್ದರೆ 26/11ರ ಮುಂಬೈ ದಾಳಿ ರೀತಿಯೇ ಮತ್ತೆ ದಾಳಿ ನಡೆಸಲಾಗುವುದು ಎಂದು ಮುಂಬೈ ಪೊಲೀಸರ ಕಂಟ್ರೋಲ್ ರೂಮ್‌ಗೆ ಕರೆ ಮಾಡಿ ಬೆದರಿಕೆ ಹಾಕಿದ್ದ ಅಪರಿಚಿತ ವ್ಯಕ್ತಿಯ ವಿರುದ್ಧ ನಗರ ಪೊಲೀಸರು ಎಫ್‌ಐಆರ್ ದಾಖಲಿಸಿದ್ದು, ಈ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.
