ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗಲು ಮುಸ್ಲಿಂ ಯುವಕ ಸದ್ದಾಂ ಹಿಂದೂ ಧರ್ಮಕ್ಕೆ ಮತಾಂತರಗೊಂಡು ಶಿವಶಂಕರ್ ಸೋನಿ ಎಂದು ಹೆಸರು ಬದಲಾಯಿಸಿಕೊಂಡಿದ್ದಾನೆ. ಯುವತಿಯು ಸದ್ದಾಂ ವಿರುದ್ಧ ದೂರು ದಾಖಲಿಸಿದ್ದರೂ, ನಂತರ ಇಬ್ಬರೂ ಸ್ವ-ಇಚ್ಛೆಯಿಂದ ವಿವಾಹವಾಗಿದ್ದಾರೆ.

ಬಸ್ತಿ (ಉ.ಪ್ರ): ವರ್ಷಗಳಿಂದ ಪ್ರೀತಿಸುತ್ತಿದ್ದ ಹುಡುಗಿಯನ್ನು ಮದುವೆಯಾಗುವುದಕ್ಕಾಗಿ ಮುಸ್ಲಿಂ ಯುವಕನೊಬ್ಬ ಹಿಂದೂ ಧರ್ಮಕ್ಕೆ ಮತಾಂತರವಾದ ಘಟನೆ ನಡೆದಿದೆ. 34 ವರ್ಷದ ಸದ್ದಾಂ ಎಂಬಾತ ಶಿವಶಂಕರ್ ಸೋನಿ ಎಂದು ಹೆಸರು ಬದಲಿಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

‘ಅತ್ಯಾಚಾರ, ಗರ್ಭಪಾತಕ್ಕೆ ಒತ್ತಾಯ, ವಿವಾಹಪೂರ್ವ ಅತ್ಯಾಚಾರ ಹಾಗೂ ಕೊಲೆ ಬೆದರಿಕೆ ಕಾರಣ ನೀಡಿ ಮೂರು ದಿನಗಳ ಹಿಂದೆ ಯುವತಿಯೊಬ್ಬಳು ಸದ್ದಾಂ ಮತ್ತು ಆತನ ಕುಟುಂಬಸ್ಥರ ವಿರುದ್ಧ ದೂರು ದಾಖಲಿಸಿದ್ದಳು. ಆದರೆ ಈಗ ಅವರಿಬ್ಬರೂ ಸ್ವ ಇಚ್ಛೆಯಿಂದಲೇ ವಿವಾಹವಾಗಿದ್ದಾರೆ’ ಎಂದು ಕೊಟ್ವಾಲಿ ಪೊಲೀಸ್ ಠಾಣೆಯ ಎಸ್ ಹೆಚ್ ಒ ದೇವೇಂದ್ರ ಸಿಂಗ್ ತಿಳಿಸಿದ್ದಾರೆ.

.ಇದನ್ನೂ ಓದಿ: ಸೀಮಾ ಹೈದರ್ ಮಹತ್ವದ ನಿರ್ಧಾರ, ಕುಂಭಮೇಳಕ್ಕೆ 51 ಲೀಟರ್ ಹಾಲು ಕೊಡೋದಾಗಿ ಘೋಷಣೆ!

‘ನಗರ ಬಜಾರ್ ನಿವಾಸಿ ಸದ್ದಾಂ ಹುಸೇನ್ ಅದೇ ಗ್ರಾಮದ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದ. ಕಳೆದ ಹತ್ತು ವರ್ಷಗಳಿಂದ ಪ್ರೀತಿಸುತ್ತಿದ್ದ ಇಬ್ಬರೂ ಬೇರೆ ಬೇರೆ ಧರ್ಮದವರಾದ್ದರಿಂದ ಸದ್ದಾಂನ ಕುಟುಂಬಸ್ಥರು ಮದುವೆಗೆ ಒಪ್ಪಿರಲಿಲ್ಲ. ಹಾಗಾಗಿ ಯುವತಿ ದೂರು ದಾಖಲಿಸಿದ್ದಳು. ಆದರೆ ನಂತರ ಪ್ರಕರಣದಲ್ಲಿ ತಿರುವು ಲಭಿಸಿದೆ. ಭಾನುವಾರ ರಾತ್ರಿ, ಸದ್ದಾಂ ಮತ್ತು ಹುಡುಗಿ ನಗರದ ಮಾರುಕಟ್ಟೆಯ ದೇವಸ್ಥಾನದಲ್ಲಿ ಹಿಂದೂ ಸಂಪ್ರದಾಯದಂತೆ ವಿವಾಹವಾದರು ಮತ್ತು ಸದ್ದಾಂ ತನ್ನ ಹೆಸರನ್ನು ಶಿವಶಂಕರ್ ಸೋನಿ ಎಂದು ಬದಲಾಯಿಸಿಕೊಂಡರು. ಇಬ್ಬರೂ ದೇವಸ್ಥಾನದಲ್ಲಿ ಏಳು ಪ್ರದಕ್ಷಿಣೆ ಹಾಕಿ ದಾಂಪತ್ಯ ಜೀವನವನ್ನು ಒಟ್ಟಿಗೆ ಕಳೆಯಲು ನಿರ್ಧರಿಸಿದರು. ಪರಸ್ಪರ ಒಪ್ಪಿಗೆ ಮದುವೆಯಾಗಲು ತಾವೇ ಈ ನಿರ್ಧಾರ ತೆಗೆದುಕೊಂಡಿರುವುದಾಗಿ ಇಬ್ಬರೂ ಪೊಲೀಸರಿಗೆ ತಿಳಿಸಿದ್ದಾರೆ.

(ಶೀರ್ಷಿಕೆ ಹೊರತುಪಡಿಸಿ ಈ ಸುದ್ದಿಯನ್ನ ಸುವರ್ಣನ್ಯೂಸ್ ಸಂಪಾದಿಸಿಲ್ಲ, ಸುದ್ದಿ ಮೂಲಗಳಿಂದ ಬಂದ ಮಾಹಿತಿಯಾಧರಿಸಿ ಪ್ರಕಟಿಸಲಾಗಿದೆ.)