ಭಾಗ್ಪತ್‌(ಮೇ.11): ಕೊರೋನಾ ಸಾವು-ನೋವು ಹೆಚ್ಚಾಗುತ್ತಿರುವ ನಡುವೆಯೇ, ಚಿತಾಗಾರಗಳಲ್ಲಿ ಹೆಣಗಳ ಮೇಲಿನ ಬಟ್ಟೆಮತ್ತಿತರೆ ವಸ್ತುಗಳಣ್ನು ಕದಿಯುತ್ತಿದ್ದ 7 ಜನರನ್ನು ಉತ್ತರಪ್ರದೇಶದ ಭಾಗ್ಪತ್‌ ಪೊಲೀಸರು ಬಂಧಿಸಿದ್ದಾರೆ.

ಆರೋಪಿಗಳು ಹೆಣಗಳ ಮೇಲೆ ಹೊದಿಸುವ ಬಟ್ಟೆ, ಸೀರೆ ಮತ್ತಿತರ ವಸ್ತುಗಳನ್ನು ಕದಿಯುತ್ತಿದ್ದರು. ಮತ್ತು ಅವುಗಳನ್ನು ಒಗೆದು, ಇಸ್ತಿ್ರ ಮಾಡಿ ಗ್ವಾಲಿಯರ್‌ ಕಂಪನಿ ಲೇಬಲ್‌ ಅಂಟಿಸಿ ಮಾರಾಟ ಮಾಡುತ್ತಿದ್ದರು ಎಂದು ಪೊಲೀಸರು ತಿಳಿಸಿದ್ದಾರೆ. ಆರೋಪಿಗಳಿಂದ ಕದ್ದ 520 ಬೆಡ್‌ಶೀಟ್‌ಗಳು, 127 ಕುರ್ತಾ, 52 ಬಿಳಿ ಸೀರೆ ಮತ್ತಿತರ ಬಟ್ಟೆವಶಪಡಿಸಿಕೊಳ್ಳಲಾಗಿದೆ.

ಇಲ್ಲಿನ ಕೆಲವು ಬಟ್ಟೆ ವ್ಯಾಪಾರಿಗಳು ಇವರಿಗೆ ದಿನಕ್ಕೆ 300 ರು. ಕೊಟ್ಟು ಕದಿಯಲು ಹೇಳುತ್ತಿದ್ದರು ಎಂದು ತಿಳಿದುಬಂದಿದೆ. ಆರೋಪಿಗಳಲ್ಲಿ ಮೂವರು ಒಂದೇ ಕುಟುಂಬಕ್ಕೆ ಸೇರಿದವರಾಗಿದ್ದು, 10 ವರ್ಷದಿಂದ ಇದೇ ರೀತಿಯ ಕಳ್ಳತನ ಮಾಡಿ ಜೀವಿಸುತ್ತಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೂಚನೆ: ಕೊರೋನಾ ಮಹಾಮಾರಿ ಎಲ್ಲೆಡೆ ಹರಡುತ್ತಿದೆ. ಹೀಗಿರುವಾಗ ಎಲ್ಲರೂ ತಪ್ಪದೇ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಪಾಡಿ ಹಾಗೂ ಲಸಿಕೆ ಪಡೆಯಿರಿ ಎಂಬುವುದು ಏಷ್ಯಾನೆಟ್‌ ನ್ಯೂಸ್‌ ಕಳಕಳಿಯ ವಿನಂತಿ. ಒಗ್ಗಟ್ಟಿನಿಂದ ನಾವು ಈ ಕೊರೋನಾ ಸರಪಳಿ ಮುರಿಯೋಣ #ANCares #IndiaFightsCorona