Asianet Suvarna News Asianet Suvarna News

ದುರ್ಗಾ ಮೂರ್ತಿ ವಿಸರ್ಜನೆ ವೇಳೆ ದುರಂತ, ಐವರು ಭಕ್ತರು ಸಾವು!

* ನವರಾತ್ರಿ ಸಂಭ್ರಮದ ಮಧ್ಯೆ ಪ್ರಾಣ ಕಳೆದುಕೊಂಡ ಐವರು ಯುವಕರು

* ನದಿಯಲ್ಲಿ ದುರ್ಗಾ ಮಾತೆ ಮೂರ್ತಿ ವಿಸರ್ಜನೆ ವೇಳೆ ದುರಂತ

* ಮೂರ್ತಿ ವಿಸರ್ಜನೆಗೆ ಪಕ್ಕದ ಗ್ರಾಮದಿಂ<ದ ಬಂದಿದ್ದ ಯುವಕರು

UP Five devotees from Agra drown during durga idol immersion pod
Author
Bangalore, First Published Oct 16, 2021, 2:58 PM IST

ಆಗ್ರಾ(ಅ.16): ದೇಶಾದ್ಯಂತ ದಸರಾ, ನವರಾತ್ರಿ(Navratri) ಸಂಭ್ರಮ ಕಳೆಗಟ್ಟಿತ್ತು. ಆದರೀಗ ಈ ಹಬ್ಬದ ವಾತಾವರಣದ ಮಧ್ಯೆ ರಾಜಸ್ಥಾನದ(Rajasthan) ಧೋಲ್‌ಪುರದಲ್ಲಿ ಪಾರ್ವತಿ ನದಿಯಲ್ಲಿ(Partvati River) ದುರ್ಗಾ ಮೂರ್ತಿ ವಿಸರ್ಜನೆಯ ವೇಳೆ ಆಗ್ರಾ(Agra) ಮೂಲದ ಐವರು ಮುಳುಗಿ ಸಾವನ್ನಪ್ಪಿದ್ದಾರೆ. ಹೌದು ನವರಾತ್ರಿ ಹಿನ್ನೆಲೆಯಲ್ಲಿ ಆಯೋಜಿಸಲಾಗಿದ್ದ ದುರ್ಗಾ ಮೂರ್ತಿ ವಿಸರ್ಜನೆ ವೇಳೆ ಈ ದುರಂತ ಸಂಭವಿಸಿದೆ. ಇನ್ನು ದುರ್ಗಾ ಮಾತೆಯ ಮೂರ್ತಿಯನ್ನು ನದಿಯಲ್ಲಿ ವಿಸರ್ಜಿಸಲು ಹೋಗಿ ಮೃತಪಟ್ಟ ಐವರೂ ಆಗ್ರಾದ ಭಾವನಾಪುರ ಗ್ರಾಮದಿಂದ ಧೋಲ್​ಪುರಕ್ಕೆ ಬಂದಿದ್ದರು ಎಂಬುವುದು ಉಲ್ಲೇಖನೀಯ. 

ಶುಕ್ರವಾರ ದುರ್ಗಾ ಮೂರ್ತಿಯನ್ನು ನಿಮಜ್ಜನ ಮಾಡಲು ತೆರಳಿದಾಗ ಈ ದುರ್ಘಟನೆ ಸಂಭವಿಸಿದ್ದು, ಮೃತರು ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಭಾವನಪುರ ಗ್ರಾಮದ ನಿವಾಸಿಗಳು ಎಂದು ಆಗ್ರಾ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ಮುನಿರಾಜ್ ಹೇಳಿದ್ದಾರೆ. ಹಬ್ಬದ ಸಂಭ್ರಮದಲ್ಲಿದ್ದ ಈ ಆಘಾತಕಾರಿ ಸುದ್ದಿ ಆಲಿಸಿದ ಮೃತರ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. 

ಸಾವನ್ನಪ್ಪಿದ ಐವರು ಕೂಡ ಯುವಕರಾಗಿದ್ದಾರೆ. ಶೋಧ ಕಾರ್ಯಾಚರಣೆ ಬಳಿಕ ಆ ಐವರ ಶವಗಳನ್ನು ಹೊರಗೆ ತೆಗೆಯಲಾಗಿದೆ. ಡೈವರ್‌ಗಳ ಸಹಾಯದಿಂದ 5 ದೇಹಗಳನ್ನು ನದಿಯಿಂದ ಹೊರಗೆ ತೆಗೆಯಲಾಗಿದೆ. ಮೃತಪಟ್ಟವರೆಲ್ಲರೂ ಉತ್ತರ ಪ್ರದೇಶದ ಆಗ್ರಾ ಜಿಲ್ಲೆಯ ಜಗ್ನೇರ್ ಪೊಲೀಸ್ ಠಾಣಾ ಪ್ರದೇಶದ ನಿವಾಸಿಗಳಾಗಿದ್ದಾರೆ.

ಧೋಲ್ಪುರದ ಬಸ್ಡಿ ಪೊಲೀಸ್ ಠಾಣಾ ವ್ಯಾಪ್ತಿಯ ಭೂತೇಶ್ವರ ಮಹಾದೇವ್ ಬಳಿ ಹಾದುಹೋಗುವ ಪಾರ್ವತಿ ನದಿಯಲ್ಲಿ ವಿಗ್ರಹ ವಿಸರ್ಜನೆಯ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ. ಸ್ಥಳೀಯರು ಘಟನೆಯನ್ನು ಪೊಲೀಸರಿಗೆ ಮತ್ತು ಆಡಳಿತಕ್ಕೆ ತಿಳಿಸಿದ್ದಾರೆ. ಸುಮಾರು 12ಕ್ಕೂ ಹೆಚ್ಚು ಯುವಕರ ಗುಂಪು ದುರ್ಗಾ ಮೂರ್ತಿಯನ್ನು ಹಿಡಿದುಕೊಂಡು ಪಾರ್ವತಿ ನದಿ ನೀರಿನಲ್ಲಿ ಇಳಿದಿತ್ತು. ಆದರೆ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಿದ್ದು, ರಭಸವಾಗಿ ಹರಿಯುತ್ತಿತ್ತು. ಹೀಗಾಗಿ ಈ ಐವರು ಯುವಕರು ಮುಳುಗಿದ್ದಾರೆ.

Follow Us:
Download App:
  • android
  • ios