ಮೆಂತ್ಯದ ಎಲೆ ಎಂದು ಭಾವಿಸಿ ಗಾಂಜಾದ ಸಬ್ಜಿ ಸೇವಿಸಿದ ಕುಟುಂಬ!
ಮೆಂತ್ಯದ ಸೊಪ್ಪೆಂದು ಗಾಂಜಾ ಸೊಪ್ಪಿನ ಅಡುಗೆ/ ಆಸ್ಪತ್ರೆ ಸೇರಿದ ಕುಟುಂಬ/ ಪ್ಯಾಕೇಟ್ ನೀಡಿದ್ದ ವ್ಯಕ್ತಿಯ ಬಂಧನ/ ಉತ್ತರ ಪ್ರದೇಶದ ಘಟನೆ
ಉತ್ತರ ಪ್ರದೇಶ(ಜೂ. 30) ಮೆಂತ್ಯದ ಸೊಪ್ಪೆಂದು ಭಾವಿಸಿ ಗಾಂಜಾ ಎಲೆಯ ಖಾದ್ಯ ಮಾಡಿ ಸೇವಿಸಿದ ಕುಟುಂಬ ಆಸ್ಪತ್ರೆ ಸೇರಿದೆ.
ಉತ್ತರ ಪ್ರದೇಶಸ ಕನೌಜ್ ನ ಘಟನೆ ಹೇಳುತ್ತೇವೆ ಕೇಳಿ. ನಾವಲ್ ಕಿಶೋರ್ ಎಂಬಾತ ತನ್ನದೆ ಹಳ್ಳಿಯ ಹುಡುಗನೊಬ್ಬನಿಗೆ ಗಾಂಜಾದ ಎಲೆ ತುಂಬಿರುವ ಪ್ಯಾಕೇಟ್ ನೀಡಿದ್ದಾನೆ. ಈ ಪ್ಯಾಕೇಟ್ ತೆಗೆದುಕೊಂಡು ಹೋದ ಹುಡುಗ ತನ್ನ ಅತ್ತಿಗೆ ಕೈಗೆ ಕೊಟ್ಟು ಸಬ್ಜಿ ಮಾಡುವಂತೆ ಹೇಳಿದ್ದಾನೆ.
ಗುದದ್ವಾರದಲ್ಲಿ ಕೆಜಿ ಚಿನ್ನ, ಎಂಥಾ ಚಾಲಾಕಿ ಕಣ್ರಲಾ!
ಟೊಮೆಟೋ ಬಳಸಿ ಸಬ್ಜಿ ಮಾಡಲಾಗಿದೆ. ಕುಟುಂಬದ ಆರು ಜನ ಗಾಂಜಾ ಸೊಪ್ಪಿನಿಂದ ತಯಾರಿಸಿದ ಪದಾರ್ಥ ಸೇವಿಸಿದ್ದಾರೆ. ಇದಾದ ಮೇಲೆ ಆರೋಗ್ಯದಲ್ಲಿ ಏರುಪೇರಾಗಿದೆ. ಕೂಗಾಟ ಕೇಳಿ ಪಕ್ಕದ ಮನೆಯವರು ಆಸ್ಪತ್ರೆಗೆ ಸುದ್ದಿ ಮುಟ್ಟಿಸಿದ್ದಾರೆ.
ಪೊಲೀಸರು ಬಂದು ಪರಿಶೀಲನೆ ನಡೆಸಿದಾಗ ಗಾಂಜಾ ಬಳಕೆ ಮಾಡಿರುವುದು ಗೊತ್ತಾಗಿದೆ. ಪ್ಯಾಕೇಟ್ ನೀಡಿದ್ದ ಕಿಶೋರ್ ನನ್ನು ಬಂಧಿಸಲಾಗಿದ್ದು ವಿಚಾರಣೆ ನಡೆಸುತ್ತಿದ್ದಾರೆ. ಕುಟುಂಬದ ಸದಸ್ಯರಿಗೆ ತಲೆನೋವು ಕಾಡುತ್ತಿದ್ದು ನಿಧಾನವಾಗಿ ಚೇತರಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗ ಜಿಲ್ಲೆಯಲ್ಲೂ ವಿಷಪೂರಿತ ಅಣಬೆ ಸೇವಿಸಿ ಒಂದೆ ಕುಟುಂಬದ 5 ಜನ ಮೃತಪಟ್ಟಿದ್ದು ವರ್ಷಗಳ ಹಿಂದೆ ವರದಿಯಾಗಿತ್ತು.