UP Elections: ಯೋಗಿ ನಾಡಿಗೆ ಬಂಗಾಳ ಸಿಎಂ, ಅಖಿಲೇಶ್ ಪರ ದೀದೀ ಪ್ರಚಾರ!

* ರಂಗೇರಿದ ಉತ್ತರ ಪ್ರದೇಶ ಚುನಾವಣಾ ಅಖಾಡ

* ಉತ್ತರ ಪ್ರದೇಶಕ್ಕೆ ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ

* ಎಸ್‌ಪಿ ನಾಯಕ ಅಖಿಲೇಶ್ ಪರ ದೀದೀ ಪ್ರಚಾರ

UP elections Mamata Banerjee to campaign for Akhilesh Yadav pod

ಲಕ್ನೋ(ಫೆ.07): ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ 2022 ಕ್ಕೆ ಸಮಾಜವಾದಿ ಪಕ್ಷವು ಸಜ್ಜಾಗುತ್ತಿರುವಾಗ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೆಬ್ರವರಿ 7 ರಂದು ಎರಡು ದಿನಗಳ ಭೇಟಿಗಾಗಿ ಲಕ್ನೋಗೆ ಭೇಟಿ ನೀಡಲಿದ್ದಾರೆ. ಫೆಬ್ರವರಿ 8 ರಂದು ಲಕ್ನೋದಲ್ಲಿ ಎಸ್‌ಪಿ ರಾಷ್ಟ್ರೀಯ ಅಧ್ಯಕ್ಷ ಅಖಿಲೇಶ್ ಯಾದವ್ ಅವರೊಂದಿಗೆ ಮಮತಾ ಬ್ಯಾನರ್ಜಿ ಜಂಟಿ ಪತ್ರಿಕಾಗೋಷ್ಠಿ ನಡೆಸಲಿದ್ದಾರೆ. ಇದರೊಂದಿಗೆ ಇಬ್ಬರೂ ನಾಯಕರು ವರ್ಚುವಲ್ ಸಭೆಯನ್ನೂ ನಡೆಸಲಿದ್ದಾರೆ. ಎಸ್‌ಪಿ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್‌ಮಯ್‌ ನಂದ್‌ ಈ ಮಾಹಿತಿ ನೀಡಿದ್ದಾರೆ. ಫೆಬ್ರವರಿ 7 ರಂದು ಸಂಜೆ ಮಮತಾ ಬ್ಯಾನರ್ಜಿ ಲಕ್ನೋಗೆ ಬರಲಿದ್ದಾರೆ ಎಂದು ಅವರು ಈ ಸಂದರ್ಭದಲ್ಲಿ ಹೇಳಿದ್ದಾರೆ.

UP Elections: ಪಂಜಾಬ್‌ನಲ್ಲಿ ರಾಹುಲ್ ಗಾಂಧಿ ಮೇಲೆ ದಾಳಿ, ನೋಡುತ್ತಲೇ ನಿಂತ ಸಿಎಂ ಚನ್ನಿ!

ಅಖಿಲೇಶ್ ಪರ ಪ್ರಚಾರ ನಡೆಸಲಿದ್ದಾರೆ

ಮಾಹಿತಿ ಪ್ರಕಾರ, ಫೆಬ್ರವರಿ 7 ರಂದು ಮಮತಾ ಬ್ಯಾನರ್ಜಿ ಲಕ್ನೋದಲ್ಲಿ ರಾತ್ರಿ ವಿಶ್ರಾಂತಿ ಪಡೆಯಲಿದ್ದಾರೆ. ಎರಡನೇ ದಿನವಾದ ಫೆಬ್ರವರಿ 8 ರಂದು ಮಧ್ಯಾಹ್ನ 12:00 ಗಂಟೆಗೆ ಸಮಾಜವಾದಿ ಪಕ್ಷದ ಕಚೇರಿಯಲ್ಲಿ ಜಂಟಿ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೂಡ ಸಮಾಜವಾದಿ ಪಕ್ಷಕ್ಕೆ ವಿಧಾನಸಭಾ ಚುನಾವಣೆಯಲ್ಲಿ ಭಾರಿ ಬಹುಮತದಿಂದ ಗೆಲ್ಲುವಂತೆ ಮನವಿ ಮಾಡಲಿದ್ದಾರೆ ಎಂದು ಹೇಳಲಾಗುತ್ತಿದೆ. ಫೆಬ್ರವರಿ 8 ರಂದು ಮಮತಾ ಬ್ಯಾನರ್ಜಿ ಉತ್ತರ ಪ್ರದೇಶಕ್ಕೆ ಭೇಟಿ ನೀಡಲಿದ್ದಾರೆ ಎಂದು ಎಸ್ಪಿ ರಾಷ್ಟ್ರೀಯ ಉಪಾಧ್ಯಕ್ಷ ಕಿರಣ್ಮೋಯ್ ನಂದ್ ತಿಳಿಸಿದ್ದಾರೆ. ಅವರು ಯುಪಿಯಲ್ಲಿ ಅಖಿಲೇಶ್ ಯಾದವ್ ಪರ ಪ್ರಚಾರ ಮಾಡಲಿದ್ದಾರೆ. ಅಖಿಲೇಶ್ ಯಾದವ್ ಮತ್ತು ಮಮತಾ ಬ್ಯಾನರ್ಜಿ ಅವರು ಲಕ್ನೋದಲ್ಲಿ ಜಂಟಿ ಪತ್ರಿಕಾಗೋಷ್ಠಿಯೊಂದಿಗೆ ವರ್ಚುವಲ್ ರ್ಯಾಲಿಯನ್ನು ಉದ್ದೇಶಿಸಿ ಮಾತನಾಡಲಿದ್ದಾರೆ.

ಇದಕ್ಕೂ ಮುನ್ನ ಅಖಿಲೇಶ್ ಯಾದವ್ ಅವರು ಬಂಗಾಳ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಮಮತಾ ಬ್ಯಾನರ್ಜಿಯವರ ಟಿಎಂಸಿ ಪಕ್ಷಕ್ಕೆ ಬೆಂಬಲ ನೀಡಿದ್ದರು. ಆದರೆ, ಅವರು ಪ್ರಚಾರಕ್ಕಾಗಿ ಬಂಗಾಳಕ್ಕೆ ಹೋಗಿರಲಿಲ್ಲ ಎಂಬುವುದು ಉಲ್ಲೇಖನೀಯ.

UP Elections: ಬ್ರಾಹ್ಮಣ ಎಂಬುವುದು ಜಾತಿಯಲ್ಲ, ಜೀವನ ಸಾಗಿಸುವ ಉತ್ತಮ ಮಾರ್ಗ: ಯುಪಿ ಡಿಸಿಎಂ

ಇನ್ನು ಉತ್ತರ ಪ್ರದೇಶದಲ್ಲಿ ಏಳು ಹಂತಗಳಲ್ಲಿ ಚುನಾವಣೆ ನಡೆಯಲಿದೆ. ಫೆಬ್ರವರಿ 10 ರಂದು ಮೊದಲ ಹಂತದ ಮತದಾನ ನಡೆಯಲಿದ್ದು, ಮಾರ್ಚ್ 7 ರಂದು ಕೊನೆಯ ಹಂತದ ಮತದಾನ ನಡೆಯಲಿದೆ. ಮಾರ್ಚ್ 10 ರಂದು ಚುನಾವಣಾ ಫಲಿತಾಂಶ ಪ್ರಕಟವಾಗಲಿದೆ. ಒಂದು ತಿಂಗಳ ಕಾಲ ನಡೆಯುವ ಉತ್ತರ ಪ್ರದೇಶ ವಿಧಾನಸಭಾ ಚುನಾವಣೆಯ ರಾಜಕೀಯ ಸಮರದಲ್ಲಿ 15.2 ಕೋಟಿ ಮತದಾರರು ಒಟ್ಟು 403 ಸ್ಥಾನಗಳಿಗೆ ಅಭ್ಯರ್ಥಿಗಳ ಭವಿಷ್ಯವನ್ನು ನಿರ್ಧರಿಸಲಿದ್ದಾರೆ.

Latest Videos
Follow Us:
Download App:
  • android
  • ios