ನವದೆಹಲಿ[ಅ.17]: ರಾಯ್ಬರೇಲಿಯ ಕಾಂಗ್ರೆಸ್ ಶಾಸಕಿ ಅಧಿತಿ ಸಿಂಗ್ ತಮ್ಮದೇ ಪಕ್ಷದ ಶಾಸಕ ಅಂಗದ್ ಸಿಂಗ್‌ ಜೊತೆ ವಿವಾಹವಾಘಲಿದ್ದಾರೆ. ಅಂಗದ್ ಸಿಂಗ್ ಪಂಜಾಬ್‌ನ ಶಹೀದ್ ಭಗತ್ ಸಿಂಗ್ ನಗರದ ಕಾಂಗ್ರೆಸ್ ಶಾಸಕ. ಇವರಿಬ್ಬರೂ ನವೆಂಬರ್ 21ರಂದು ದೆಹಲಿಯ ರೆಸಾರ್ಟ್‌ವೊಂದರಲ್ಲಿ ಮದುವೆಯಾಗಲಿದ್ದಾರೆ. ನವೆಂಬರ್ 23ರಂದು ಆರತಕ್ಷತೆ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಇನ್ನು 2017ರಲ್ಲಿ ಚುನಾವಣಾ ಕಣಕ್ಕಿಳಿದಿದ್ದ ಅಂಗದ್ ಸಿಂಗ್ ಹಾಗೂ ಅಧಿತಿ ಸಿಂಗ್ ತಮ್ಮ ಮೊದಲ ಪ್ರಯತ್ನದಲ್ಲೇ ಜಯಶಾಲಿಯಾಗಿದ್ದರು. 

ಅಧಿತಿ ಸಿಂಗ್, ರಾಯ್ಬರೇಲಿಯ ಸದರ್ ಕ್ಷೇತ್ರದಿಂದ 5 ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಅಖಿಲೇಶ್ ಸಿಂಗ್ ಮಗಳು. ಇತ್ತ ಅಂಗದ್ ಸಿಂಗ್ ತಂದೆ ದಿಲ್ಬಾಗ್ ಸಿಂಗ್ ಕೂಡಾ ಪಂಜಾಬ್‌ನ ನವಾಂಶಹರ್‌ ಕ್ಷೇತ್ರದಿಂದ 6 ಬಾರಿ ಶಾಶಕರಾಗಿ ಆಯ್ಕೆಯಾಗಿದ್ದಾರೆ. 

ದಾಂಪತ್ಯ ಜೀವನಕ್ಕೆ ಕಾಲಿಟ್ಟ 'ಆ ದಿನಗಳು' ನಟಿ!

ಅಂಗದ್ ಹಾಗೂ ಅಧಿತಿ ಸಿಂಗ್ ಮದುವೆ ಹಿಂದೂ ಹಾಗೂ ಸಿಖ್ ಈ ಎರಡೂ ಸಂಪ್ರದಾಯದನ್ವಯ ನಡೆಯಲಿದೆ ಎಂದು ತಿಳಿದು ಬಂದಿದೆ. ನವೆಂಬರ್ 21 ರಂದು ರೆಸಾರ್ಟ್‌ನಲ್ಲಿ ನಡೆಯುವ ಮದುವೆ ಹಿಂದೂ ಸಂಪ್ರದಾಯದಂತೆ ನಡೆದರೆ, ಪಂಜಾಬ್‌ನ ನವಾಂಶಹರ್‌ನಲ್ಲಿ ನಡೆಯುವ ಮದುವೆ ಸಿಖ್ ಸಂಪ್ರದಾಯದಂತೆ ನಡೆಯಲಿದೆ. ಮದುವೆ ಕಾರ್ಯಕ್ರಮದಲ್ಲಿ ಆಪ್ತರಷ್ಟೇ ಪಾಲ್ಗೊಳ್ಳಿದ್ದಾರೆನ್ನಲಾಗಿದೆ.

ಲಭ್ಯವಾದ ಮಾಹಿತಿ ಅನ್ವಯ ಅಂಗದ್ ಸಿಂಗ್ ಕುಟುಂಬ ಪಂಜಾಬ್‌ನ ನವಾಂಶಹರ್‌ನಲ್ಲಿ ಅದ್ಧೂರಿ ರಿಸೆಪ್ಷನ್ ಆಯೋಜಿಸಿದೆ. ಸ್ಥಳೀಯ ಕಾಂಗ್ರೆಸ್ ನಾಯಕರು ಹಾಗೂ ಇನ್ನಿತರರಿಗೆ ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವಂತೆ ಆಮಂತ್ರಣ ನೀಡಲಾಗಿದೆ. 

ಫೋಟೋ ಶೂಟ್‌ನಲ್ಲಿ ಬ್ಯೂಸಿಯಾದ ವಧು ವರ: ಹಣದ ಚೀಲದೊಂದಿಗೆ ಕಳ್ಳ ಪರಾರಿ!