ರಾಜಕೀಯ ಬದಿಗಿಟ್ಟು ಸತ್ಯವನ್ನು ಅರಿತುಕೊಳ್ಳಿ: ಮೋದಿ ವಿರೋಧಿಗಳಿಗೆ ಯೋಗಿ ಪಾಠ!

* ಪಿಎಂ ಮೋದಿಗೆ ಸಿಎಂ ಯೋಗಿ ಸಾಥ್

* ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್‌ಗೆ ಒತ್ತು ಕೊಟ್ಟ ಮೋದಿ

* ಸ್ವಾರ್ಥವನ್ನು ಬದಿಗಿಟ್ಟು ಸತ್ಯವನ್ನು ಒಪ್ಪಿಕೊಳ್ಳಿ ಎಂದ ಉತ್ತರ ಪ್ರದೇಶ ಸಿಎಂ

Up CM Yogi hails modi cabinet sabka saat sabka vikas pod

ನವದೆಹಲಿ(ಜು.10): ಪ್ರಧಾನಿ ಮೋದಿಯವರ ಹೊಸ ಟೀಂ ಸಜ್ಜಾಗಿದೆ. ಈಗಾಗಲೇ ನೂತನ ಜವಾಬ್ದಾರಿ ಹೊತ್ತುಕೊಂಡ ಸಚಿವರು ತಮಗೆ ಕೊಟ್ಟ ಜವಾಬ್ದಾರಿ ಸೂಕ್ತವಾಗಿ ನಿಭಾಯಿಸಲು ಸಜ್ಜಾಗಿದ್ದಾರೆ. ಮೋದಿ ಹೊಸ ಕ್ಯಾಬಿನೆಟ್‌ ಬಗ್ಗೆ ಅನೇಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ. ಹೀಗಿದ್ದರೂ ಅನೇಕ ಮಂದಿ ಇದಕ್ಕೆ ವಿರೋಧ ವ್ಯಕ್ತಪಡಿಸಿದ್ದು, ಅನೇಕ ಬಗೆಯ ಟೀಕೆಗಳನ್ನು ಮಾಡಿದ್ದಾರೆ. ಆದರೀಗ ಮೋದಿ ವಿರೋಧಿಸುತ್ತಿದ್ದವರಿಗೆ, ಉತ್ತರ ಪ್ರದೇಶ ಸಿಎಂ ಯೋಗಿ ಮಾತಿನೇಟು ನೀಡಿದ್ದಾರೆ. ಯಾಕೆ ಮೋದಿ ಟೀಂ ಬೆಸ್ಟ್? ಎಂದು ಉತ್ತರಿಸಿರುವ ಸಿಎಂ ಯೋಗಿ ಮೋದಿ ಯಾವ ರೀತಿ ಸಬ್‌ ಕಾ ಸಾಥ್, ಸಬ್‌ ಕಾ ವಿಕಾಸ್, ಸಬ್‌ ಕಾ ವಿಶ್ವಾಸ್‌ ಎಂಬುವುದನ್ನು ಸಾಕಾರಗೊಳಿಸಿದ್ದಾರೆ ಎಂಬುವುದನ್ನು ತಿಳಿಸಿದ್ದಾರೆ.

ಹೌದು ಈ ಸರಣಿ ಟ್ವೀಟ್ ಮಾಡಿರುವ ಯೋಗಿ ಆದಿತ್ಯನಾಥ್ ಮೋದಿ ಕ್ಯಾಬಿನೆಟ್‌ ಬಗ್ಗೆ ಶ್ಲಾಘಿಸಿದ್ದಾರೆ. ತಮ್ಮ ಟ್ವೀಟ್‌ನಲ್ಲಿ ಪಿಎಂ ಮೋದಿಯವರ ಹೊಸ ಕ್ಯಾಬಿನೆಟ್ ಇಡೀ ಭಾರತವನ್ನು ಪ್ರತಿನಿಧಿಸುತ್ತದೆ. ನಮ್ಮ ಮಹಾನ್ ಪುರುಷರು, ಅದರಲ್ಲೂ ವಿಶೇಷವಾಗಿ ಬಾಬಾ ಸಾಹೇಬ್ ಮತ್ತು ಲೋಹಿಯಾರಂತಹ ಚಿಂತಕರು ದೇಶದಲ್ಲಿ ಯಾವ ರೀತಿಯ ಜನರ ಪ್ರತಿನಿಧಿ ಹಾಗೂ ಜನರ ಭಾಗವಹಿಸುವಿಕೆಯನ್ನು ಕಲ್ಪಿಸಿಕೊಂಡಿದ್ದರೋ, ಮೋದಿಯವರ ನಾಯಕತ್ವದಲ್ಲಿ ಈ ಕಲ್ಪನೆ ಸರ್ಕಾರದಿಂದ ಸಮಾಜದವರೆಗೆ ಸಾಕಾರಗೊಳ್ಳುತ್ತಿದೆ ಎಂದಿದ್ದಾರೆ. 

ಇನ್ನು ಒಬಿಸಿ ವರ್ಗಕ್ಕೆ ಮೋದಿ ಕೊಟ್ಟಿರುವ ಮಹತ್ವದ ಬಗ್ಗೆ ಟ್ವೀಟ್ ಮಾಡಿರುವ ಯೋಗಿ ಹಿಂದುಳಿದವರಿಗೆ ಬಲ ತುಂಬಿದರಷ್ಟೇ ಪ್ರಜಾಪ್ರಭುತ್ವಕ್ಕೆ ಅರ್ಥ ಸಿಗುತ್ತದೆ ಎಂಬುವುದು ಲೋಹಿಯಾರವರ ನಂಬಿಕೆಯಾಗಿತ್ತು. ಪ್ರಧಾನಮಂತ್ರಿ ಒಬಿಸಿ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಿದ್ದಾರೆ ಮತ್ತು ಒಬಿಸಿ ನಾಯಕತ್ವಕ್ಕೆ ಸಂಪುಟದಲ್ಲಿ ಪ್ರಮುಖ ಹುದ್ದೆ ನೀಡುವ ಮೂಲಕ ದೇಶದ ಜವಾಬ್ದಾರಿಯನ್ನೂ ನೀಡಿದ್ದಾರೆ. ಲೋಹಿಯಾರವರು ಇಂದು ಇರುತ್ತಿದ್ದರೆ, ಅವರ ಆಲೋಚನೆಗಳು ಫಲ ನೀಡುತ್ತಿರುವುದನ್ನು ಕಂಡು ಖುಷಿ ಪಡುತ್ತಿದ್ದರು ಎಂದಿದ್ದಾರೆ. 

ಇದೇ ವೇಳೆ ಮೋದಿ ವಿರೋಧಿಗಳಿಗೆ ಬುದ್ಧಿಮಾತು ಹೇಳಿರುವ ಉತ್ತರ ಪ್ರದೇಶ ಸಿಎಂ ಇಂದು, ದೇಶ ಇಷ್ಟು ದೊಡ್ಡ ಅರ್ಥಪೂರ್ಣ ಮತ್ತು ಸಕಾರಾತ್ಮಕ ಸಾಮಾಜಿಕ ಬದಲಾವಣೆಗೆ ಸಾಕ್ಷಿಯಾಗುತ್ತಿದೆ. ದುರದೃಷ್ಟವಶಾತ್ ಕೆಲ ಜನರು ರಾಜಕೀಯವಾಗಿ ಪ್ರತಿಭಟಿಸುತ್ತಿದ್ದಾರೆ. ಇಂತಹ ಜನರ ಬಗ್ಗೆ 'ಸಾಮಾಜಿಕ ಬದಲಾವಣೆಗಾಗಿ ಮಹತ್ವದ ಕಾರ್ಯಗಳನ್ನು ಪ್ರಾರಂಭಿಸಿದಾಗ, ಕೆಲವರು ಆವೇಶದಿಂದ ಇದನ್ನು ವಿರೋಧಿಸುತ್ತಾರೆ' ಎಂದಿದ್ದರು ಎಂದು ಬರೆದಿದ್ದಾರೆ.

ಅಲ್ಲದೇ ಹೀಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಒಬಿಸಿ ಆಯೋಗದ ರಚನೆಯನ್ನು ವಿರೋಧಿಸಿದ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೂ ಅವಮಾನಿಸಿದವರೇ ಆಗಿದ್ದಾರೆ. ಇಂತಹವರು ನೈತಿಕವಾಗಿಯೂ ಡಾ. ಲೋಹಿಯಾ ಅವರ ಒಂದೇ ಒಂದು ತತ್ವವನ್ನು ಅನುಸರಿಸಲಿಲ್ಲ ಎಂದಿದ್ದಾರೆ.

ಅಂತಿಮವಾಗಿ ರಾಜಕೀಯ ಬದಿಗಿಟ್ಟು ವಾಸ್ತವವನ್ನು ಅರಿತುಕೊಳ್ಳಲು ಸೂಚಿಸಿರುವ ಯೋಗಿ ಹೀಗೆ ವಿರೋಧ ವ್ಯಕ್ತಪಡಿಸುತ್ತಿರುವವರು ಒಬಿಸಿ ಆಯೋಗದ ರಚನೆಯನ್ನು ವಿರೋಧಿಸಿದ ಮತ್ತು ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನೂ ಅವಮಾನಿಸಿದವರೇ ಆಗಿದ್ದಾರೆ. ಇಂತಹವರು ನೈತಿಕವಾಗಿಯೂ ಡಾ. ಲೋಹಿಯಾ ಅವರ ಒಂದೇ ಒಂದು ತತ್ವವನ್ನು ಅನುಸರಿಸಲಿಲ್ಲ ಎಂದಿದ್ದಾರೆ.

Latest Videos
Follow Us:
Download App:
  • android
  • ios