ಸಿಎಂ ಯೋಗಿ ಆದಿತ್ಯನಾಥ್‌ಗೆ ಕೊರೋನಾ ನೆಗೆಟಿವ್ | ಕಳೆದ ವರ್ಷ ರಚಿಸಿದ್ದ ಟೀಮ್-11 ಫೇಲ್, ಈಗ ಟೀಮ್-8 

ಲಕ್ನೋ(ಏ.30): ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್ ಅವರು ಕೊರೋನಾದಿಂದ ಗುಣಮುಖರಾಗಿದ್ದು, ರಿಪೋರ್ಟ್ ನೆಗೆಟಿವ್ ಬಂದಿದೆ. ಹಾಗೆಯೇ ಕೊರೋನಾ ನಿರ್ವಹಣೆ ರಚಿಸಲಾಗಿದ್ದ ಟೀಮ್-11ನ್ನು ವಿಸರ್ಜಿಸಿದ್ದಾರೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಟೀಮ್ 11 ಕೊರೋನಾ ಸಮಸ್ಯೆ ನಿಭಾಯಿಸಲು ಅಸಮರ್ಥವಾಗಿದ್ದು ಸಾಂಕ್ರಾಮಿಕ ರೋಗದಲ್ಲಿ ಜನರಿಗೆ ಪರಿಹಾರವನ್ನು ಒದಗಿಸುವಲ್ಲಿ ವಿಫಲವಾಗಿದೆ ಎನ್ನಲಾಗಿದೆ. ಸರ್ಕಾರದ ವಕ್ತಾರರ ಪ್ರಕಾರ, ಮುಖ್ಯಮಂತ್ರಿ ಈಗ ವೈದ್ಯಕೀಯ ತಂಡ ಸಚಿವ ಸುರೇಶ್ ಖನ್ನಾ ಮತ್ತು ಆರೋಗ್ಯ ಸಚಿವ ಜೈ ಪ್ರತಾಪ್ ಸಿಂಗ್ ನೇತೃತ್ವದಲ್ಲಿ 'ತಂಡ 9' ರಚಿಸಿದ್ದಾರೆ.

ಭಾರತಕ್ಕೆ ಬಂತು ಅಮೆರಿಕ ಪರಿಹಾರ, ಕಿಚ್ಚ ಫ್ಯಾನ್ಸ್‌ಗೆ ಸಂತಸದ ವಿಚಾರ; ಏ.30ರ ಟಾಪ್ 10 ಸುದ್ದಿ!

ಸಾಮಾನ್ಯ ಜನರಿಗೆ ಅಗತ್ಯವಾದ ಪರಿಹಾರವನ್ನು ಒದಗಿಸಲು ಮತ್ತು ಪರಿಸ್ಥಿತಿಯನ್ನು ಸೂಕ್ಷ್ಮ ರೀತಿಯಲ್ಲಿ ನಿಭಾಯಿಸುವುದು ಹೊಸ ಸಮಿತಿಯು ಜವಾಬ್ದಾರಿಯಾಗಿದೆ. ನಂತರ ಮುಖ್ಯಮಂತ್ರಿ ಲಕ್ನೋದಲ್ಲಿ ನಿರ್ಮಾಣ ಹಂತದಲ್ಲಿದ್ದ ಡಿಆರ್‌ಡಿಒ ಆಸ್ಪತ್ರೆಯನ್ನು ಪರೀಕ್ಷಿಸಿದ್ದಾರೆ.