ಲಖನೌ[ಜ.19]: ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್‌ ಅವರ ಬಲಗೈ ಬಂಟ ಎಂದೇ ಮೂರು ವರ್ಷಗಳ ಹಿಂದೆ ಗುರುತಿಸಿಕೊಂಡಿದ್ದ ಹಿಂದೂ ಯುವ ವಾಹಿನಿ ಸಂಘಟನೆಯ ಮಾಜಿ ಅಧ್ಯಕ್ಷ ಸುನೀಲ್‌ ಸಿಂಗ್‌ ಅವರು ಅಖಿಲೇಶ್‌ ನೇತೃತ್ವದ ಸಮಾಜವಾದಿ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ.

ಶನಿವಾರ ಅಖಿಲೇಶ್‌ ಯಾದವ್‌ ಹಾಗೂ ಎಸ್‌ಪಿ ಸಂಸ್ಥಾಪಕರಾದ ಮುಲಾಯಂ ಸಿಂಗ್‌ ಅವರ ಸಮ್ಮುಖದಲ್ಲಿ ಸುನೀಲ್‌ ಎಸ್‌ಪಿಗೆ ಸೇರಿದರು. ಅಲ್ಲದೆ, ದಲಿತ ನಾಯಕಿ ಮಾಯಾವತಿ ನೇತೃತ್ವದ ಬಿಎಸ್‌ಪಿಯ ಕೆಲ ಮುಖಂಡರು ಸಹ ಇದೇ ವೇಳೆ ಎಸ್‌ಪಿಗೆ ಸೇರಿದರು.

ಹಿಂದುತ್ವ ಹಾಗೂ ರಾಷ್ಟ್ರವಾದದ ಉತ್ತೇಜನಕ್ಕಾಗಿ ಯೋಗಿ 2002ರಲ್ಲಿ ಹಿಂದು ಯುವ ವಾಹಿನಿ ಸ್ಥಾಪಿಸಿದ್ದರು. ಅದಕ್ಕೆ ಸುನೀಲ್‌ ಅಧ್ಯಕ್ಷರಾಗಿದ್ದರು.