Asianet Suvarna News Asianet Suvarna News

ಪೂಜೆ ವೇಳೆ ದೇವರ ಮೂರ್ತಿಗೆ ಹಾನಿ : ಚಿಕಿತ್ಸೆ ನೀಡಿ ಎಂದು ವೈದ್ಯರ ಮೊರೆ ಹೋದ ಅರ್ಚಕ!

*ಸ್ನಾನ ಮಾಡಿಸುವಾಗ ಹಾನಿಗೊಳಗಾದ ಕೃಷ್ಣನ ವಿಗ್ರಹ
*ಚಿಕಿತ್ಸೆ ನೀಡಿ ಎಂದು ಆಸ್ಪತ್ರೆ ಮೋರೆ ಹೋದ ಅರ್ಚಕ
*ಪೂಜಾರಿಯ ಬೇಡಿಕೆ ನೋಡಿ ಆಶ್ಚರ್ಯಗೊಂಡ ಸಿಬ್ಬಂದಿ
*ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೆಜ್

UP Agra Hospital Bandaged Krishna Idols Broken Arm On Priest Request mnj
Author
Bengaluru, First Published Nov 19, 2021, 6:47 PM IST

ಆಗ್ರಾ(ನ.19): ಭಾರತ ಭಾವನಾತ್ಮಕ ಜನರಿಂದ ಕೂಡಿರುವ ರಾಷ್ಟ್ರ. ಹಲವು ವಿಧದ ಅಚಾರ -ವಿಚಾರ ಹಾಗೂ ನಂಬಿಕೆಗಳನ್ನು ಇಲ್ಲಿ ಕಾಣಬಹುದು. ಧರ್ಮ, ಸಂಪ್ರದಾಯದ ವಿಚಾರದಲ್ಲಿ ಭಾರತೀಯರಷ್ಟು ಕಾಳಜಿ ವಹಿಸುವ ಜನರು ಬೇರೆ ದೇಶದಲ್ಲಿ ಕಾಣಸಿಗುವುದು ಅಸಾಧ್ಯ. ಇದಕ್ಕೆ ನಿದರ್ಶನವೆಂಬಂತೆ ದೇವರಲ್ಲಿ ಆಳವಾಗಿ ನಂಬಿಕೆ ಹೊಂದಿರುವ ಅರ್ಚಕನೊಬ್ಬ (Priest) ತಾನು ಪೂಜಿಸುವ ವಿಗ್ರಹದ ಕೈ ಮುರಿದಾಗಾ ಚಿಕಿತ್ಸೆ ನೀಡಲೆಂದು ಆಸ್ಪತ್ರೆಗೆ (Hospita) ಕರೆದೊಯ್ದಿದ್ದಾರೆ. ಉತ್ತರಪ್ರದೇಶದ (Uttar Prdesh) ಆಗ್ರಾದ ಜಿಲ್ಲಾ ಆಸ್ಪತ್ರೆಯಲ್ಲಿ ಶುಕ್ರವಾರ ಪೂಜಾರಿಯೊಬ್ಬರು ಶ್ರೀಕೃಷ್ಣನ (Shri Krishna) ವಿಗ್ರಹದ ಮುರಿದ ಕೈಗೆ ಬ್ಯಾಂಡೇಜ್ (Bandage) ಹಾಕುವಂತೆ ಅಳಲು ತೋಡಿಕೊಂಡಾಗ ಅಲ್ಲಿನ ಸಿಬ್ಬಂದಿ ದಿಗ್ಭ್ರಮೆಗೊಂಡಿದ್ದಾರೆ. ದೇವರ ವಿಗ್ರಹಕ್ಕೆ ಚಿಕಿತ್ಸೆ ನೀಡಲು ಒತ್ತಾಯಿಸಿ  ಅರ್ಚಕ ಆಸ್ಪತ್ರೆಗೆ ಬಂದಿದ್ದರು.

ಸ್ನಾನ ಮಾಡಿಸುವಾಗ ದೇವರ  ಕೈ ಆಕಸ್ಮಿಕವಾಗಿ ಮುರಿದಿದೆ!

ಬೆಳಿಗ್ಗೆ ಪೂಜೆಯ ವೇಳೆ ವಿಗ್ರಹಕ್ಕೆ ಸ್ನಾನ (Bath) ಮಾಡಿಸುವಾಗ ದೇವರ  ಕೈ ಆಕಸ್ಮಿಕವಾಗಿ ಮುರಿದಿದೆ ಎಂದು ಪೂಜಾರಿ ಹೇಳಿದ್ದಾರೆ. ವಿಷಯ ಕೇಳಿ ಆಶ್ಚರ್ಯರಾದ ವೈದ್ಯಕೀಯ ಸಿಬ್ಬಂದಿ (Doctors) ಕೆಲ ಹೊತ್ತಿನ ನಂತರ  'ಶ್ರೀ ಕೃಷ್ಣ' ಹೆಸರಿನಲ್ಲಿ ನೋಂದಣಿಯನ್ನು (Registration) ಮಾಡಿಸಿಕೊಂಡು ವಿಗ್ರಹದ ತೋಳಿಗೆ (Hand) ಬ್ಯಾಂಡೇಜ್ ಹಾಕಿದ್ದಾರೆ. ಬಾಲ ಗೋಪಾಲನ ಕೈ ಮುರಿದದ್ದಾಕ್ಕಾಗಿ ಪೂಜಾರಿ ಅಳುತ್ತಿರುವ ವಿಡಿಯೋ ಕೂಡ ಸಾಮಾಜಿಕ ಜಾಲತಾಣಗಳಲ್ಲಿ (Social Media) ಹರಿದಾಡಿದೆ. ಕೆಲವು ಪ್ರತ್ಯಕ್ಷದರ್ಶಿಗಳ ಪ್ರಕಾರ, ಅರ್ಚಕರು ಬೆಳಿಗ್ಗೆ 9 ಗಂಟೆಗೆ ಜಿಲ್ಲಾ ಆಸ್ಪತ್ರೆಗೆ ತಲುಪಿದರು ಮತ್ತು ಆಸ್ಪತ್ರೆಯ ಸಿಬ್ಬಂದಿಗೆ ವಿಗ್ರಹಕ್ಕೆ ಶೀಘ್ರವಾಗಿ ಚಿಕಿತ್ಸೆ ನೀಡುವಂತೆ ಒತ್ತಾಯಿಸಿದ್ದಾರೆ. ‘ಬೆಳಿಗ್ಗೆ ಪೂಜೆ ಸಲ್ಲಿಸಿ ಶ್ರೀಗಳ ಮೂರ್ತಿಗೆ ಸ್ನಾನ ಮಾಡುವಾಗ ವಿಗ್ರಹ ಜಾರಿ ಬಿದ್ದು ಕೈ ಮುರಿದಿದೆ’ ಎಂದು ಅರ್ಚಕ ಲೇಖ್‌ ಸಿಂಗ್ (Lekh singh) ಹೇಳಿದ್ದಾರೆ.

ಗೋಪಾಲನ ಕೈ ಮುರಿದಿದ್ದು ನನಗೆ ನೋವು ಉಂಟು ಮಾಡಿದೆ!

"ನಾನು ದೇವರೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದೇನೆ ಹಾಗಾಗಿ ಗೋಪಾಲನ ಕೈ ಮುರಿದಿದ್ದು ನನಗೆ ನೋವು ಉಂಟು ಮಾಡಿದೆ. ಹಾಗಾಗಿ ನಾನು ಚಿಕಿತ್ಸೆ (Treatment) ಪಡೆಯಲು ಜಿಲ್ಲಾ ಆಸ್ಪತ್ರೆಗೆ ಹೋದೆ" ಎಂದು ಅವರು ಹೇಳಿದ್ದಾರೆ. ಲೇಖ್ ಸಿಂಗ್ ಅವರು ಕಳೆದ 30 ವರ್ಷಗಳಿಂದ ಅರ್ಜುನ್ ನಗರದ (Arjun Nagar) ಖೇರಿಯಾ ಮೋಡ್‌ನಲ್ಲಿರುವ ಪತ್ವಾರಿ ದೇವಸ್ಥಾನದಲ್ಲಿ (temple) ಅರ್ಚಕರಾಗಿದ್ದಾರೆ.

Chanting beads: ಯಾವ ದೇವರಿಗೆ ಯಾವ ಜಪಮಾಲೆ ಇಷ್ಟ, ಬಳಸೋದು ಹೇಗೆ?

"ಆಸ್ಪತ್ರೆಯಲ್ಲಿ ನನ್ನ ವಿನಂತಿಯನ್ನು ಯಾರೂ ಗಂಭೀರವಾಗಿ ಪರಿಗಣಿಸಲಿಲ್ಲ. ಹಾಗಾಗಿ ನಾನು ಭಾವುಕನಾಗಿ ನನ್ನ ದೇವರಿಗಾಗಿ ಅಳಲು ಪ್ರಾರಂಭಿಸಿದೆ" ಎಂದು ಅವರು ಹೇಳಿದ್ದಾರೆ. ಪೂಜಾರಿ ಜೊತೆಗೆ ಹಲವು ಸ್ಥಳೀಯರು ಕೂಡ ಇದ್ದರು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.

ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ಬ್ಯಾಂಡೆಜ್

ಜಿಲ್ಲಾ ಆಸ್ಪತ್ರೆಯ ಮುಖ್ಯ ವೈದ್ಯಕೀಯ ಅಧೀಕ್ಷಕ ಡಾ ಅಶೋಕ್ ಕುಮಾರ್ ಅಗರವಾಲ್ (Ashok Kumar Agrwal) ಮಾತನಾಡಿ  ಕೈ ಮುರಿದುಕೊಂಡಿರುವ ವಿಗ್ರಹದೊಂದಿಗೆ  ಅರ್ಚಕರೊಬ್ಬರು ಬಂದು  ಚಿಕಿತ್ಸೆಗಾಗಿ ಅಳುಲು ಪ್ರಾರಂಭಿಸಿದ್ದರು ಹಾಗಾಗಿ ನಾವು ಅರ್ಚಕರ ಭಾವನೆಗಳನ್ನು ಪರಿಗಣಿಸಿ ವಿಗ್ರಹಕ್ಕೆ ‘ಶ್ರೀ ಕೃಷ್ಣ’ ಹೆಸರಿನಲ್ಲಿ ನೋಂದಣಿ  ಮಾಡಿಸಿ ಅರ್ಚಕರ ತೃಪ್ತಿಗಾಗಿ ವಿಗ್ರಹವನ್ನು ಬ್ಯಾಂಡೇಜ್ ಮಾಡಿದ್ದೇವೆ ಎಂದು ಹೇಳಿದ್ದಾರೆ. ಅಸ್ಪತ್ರೆಯಲ್ಲಿ ಶ್ರೀಕೃಷ್ಣದ ವಿಗ್ರಹ ಹಿಡಿದು ಅರ್ಚಕ ಲೇಖ್‌ ಸಿಂಗ್‌ ಅಳುತ್ತಿರುವ ವಿಡಿಯೋ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ (Viral) ಆಗಿದೆ.

ತುಮಕೂರು: ಕಾಲಿನಿಂದ ದೇವರ ವಿಗ್ರಹ ತುಳಿದು ವಿಕೃತಿ ಮೆರೆದವನ ಬಂಧನ

Follow Us:
Download App:
  • android
  • ios