ಲೋಕಸಭೆಯಲ್ಲಿ ಬಳಸಲು ಯೋಗ್ಯವಲ್ಲದ ಅಸಂಸದೀಯ ಪದಗಳ ಹೊಸ ಪಟ್ಟಿ ಬಿಡುಗಡೆ ಮಾಡಲಾಗಿದೆ. ಆದರೆ ಇದು ವಿವಾದಕ್ಕೆ ಕಾರಣವಾಗಿದೆ. ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ನಡೆಯನ್ನು ಟೀಕಿಸಿದ ಕಾಂಗ್ರೆಸ್ ಇದೀಗ ಪೇಚಿಗೆ ಸಿಲುಕಿದೆ.
ನವದೆಹಲಿ(ಜು.14): ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಪ್ರತಿ ನಿರ್ಧಾರ, ನಡೆ, ಯೋಜನೆ ವಿರುದ್ಧ ಪ್ರತಿಭಟನೆ, ಟೀಕೆ ಮೂಲಕ ಭಾರಿ ಸಂಚಲನ ಸೃಷ್ಟಿಸುತ್ತಿರುವ ಕಾಂಗ್ರೆಸ್ ಇದೀಗ ಅಸಂಸದೀಯ ಪದ ನಿಷೇಧ ಪಟ್ಟಿ ವಿಷಯ ಹಿಡಿದು ಹೋರಾಟ ಆರಂಭಿಸಿದೆ. ಲೋಕಸಭೆಯಲ್ಲಿ ಕಾರ್ಯದರ್ಶಿ ಅಸಂಸದೀಯ ಪದಗಳ ಹೊಸ ಕೈಪಿಡಿ ಬಿಡುಗಡೆ ಮಾಡಿದ್ದಾರೆ. ಇದು ವಿವಾದಕ್ಕೆ ಕಾರಣವಾಗಿದೆ. ಈ ಪಟ್ಟಿಯಲ್ಲಿ ಜುಮ್ಲಜೀವಿ, ಶಕುನಿ, ಭ್ರಷ್ಟ ಸೇರಿದಂತೆ ಹಲುವ ಪದಗಳ ಬಳಕೆ ನಿಷೇಧಕ್ಕೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿದೆ. ಇಷ್ಟೇ ಅಲ್ಲ ಹೊಸ ವಿವಾದ ಎಂಬಂತೆ ಬಿಂಬಿಸಿದೆ. ಆದರೆ ಪ್ರತಿ ವರ್ಷ ಈ ರೀತಿ ಅಸಂಸದೀಯ ಪದಗಳನ್ನು ಪಟ್ಟಿ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಈ ಬಾರಿ ಲೋಕಸಭೆಯಲ್ಲಿ ಬಿಡುಗಡೆ ಮಾಡಿರುವ ಪಟ್ಟಿಯಲ್ಲಿನ ಕೆಲ ಅಸಸಂದೀಯ ಪದಗಳನ್ನು ಈಗಾಗಲೇ ಯುಪಿಎ ಸರ್ಕಾರದ ಅಡಿಯಲ್ಲಿ ರಾಜ್ಯಸಭೆಯಲ್ಲಿ ಹಾಗೂ ಕಾಂಗ್ರೆಸ್ ಆಡಳಿತದ ಕೆಲ ವಿಧಾಸಭೆಗಳಲ್ಲಿ ನಿಷೇಧಿಸಿದೆ. ಅಂದು ಅಸಂಸದೀಯ ಎಂದು ಕೆಲ ಪದಗಳನ್ನು ನಿಷೇಧಿಸಿದ್ದ ಕಾಂಗ್ರೆಸ್ ಇದೀಗ ವಿರೋಧಿಸುತ್ತಿದೆ.
ಲೋಕಸಭಾ ಕಾರ್ಯದರ್ಶಿ ಬಿಡುಗಡೆ ಮಾಡಿದ ಅಸಂಸದೀಯ ಪದಗಳ(unparliamentary words) ಪೈಕಿ, ಬಾಲ ಬುದ್ದಿ, ಭ್ರಷ್ಟ, ಬೂಟಾಟಿಕೆ, ನಾಚಿಗೇಡು, ನಾಟಕ, ಅಸಮರ್ಥ, ದ್ರೋಹ ಎಸಗಿದ ಸೇರಿದಂತೆ ಕಲ ಪದಗಳನ್ನು ಅಸಂಸದೀಯ ಎಂದು ಪಟ್ಟಿ ಮಾಡಲಾಗಿದೆ. ಇನ್ನು ಲೋಕಸಭೆ ಹಾಗೂ ರಾಜ್ಯ ಸಭಾ ಕಲಾಪಗಳಲ್ಲಿ ಶಕುನಿ, ಸರ್ವಾಧಿಕಾರಿ, ವಿನಾಷಪುರುಷ, ಖಲಿಸ್ತಾನಿ, ನೌಟಂಕಿ, ಕಿವುಡ ಸರ್ಕಾರ ಸೇರಿದಂತೆ ಕೆಲ ಪದಗಳನ್ನು ಕಡತದಿಂದ ತೆಗೆದು ಹಾಕಲಾಗಿದೆ ಎಂದು ಪ್ರಕಟಿಸಲಾಗಿದೆ. ಕೇಂದ್ರ ಸರ್ಕಾರ(BJP) ಇಂದು ನಿಷೇಧಿಸಿದ ಅಥವಾ ಬಳಕೆಗೆ ಯೋಗ್ಯವಲ್ಲದ ಕೆಲ ಪದಗಳನ್ನು ಈ ಮೊದಲೇ ಕಾಂಗ್ರೆಸ್ ನೇತೃತ್ವದ ಯುಪಿಎ ಸರ್ಕಾರ ಹಾಗೂ ಕೆಲ ರಾಜ್ಯಗಳಲ್ಲಿನ ಕಾಂಗ್ರೆಸ್ ಸರ್ಕಾರ ನಿಷೇಧಿಸಿದೆ.
ಸೋನಿಯಾ ಗಾಂಧಿಗೆ ಇಡಿ ಸಮನ್ಸ್ ವಿರೋಧಿಸಿ ದೇಶಾದ್ಯಂತ ಕಾಂಗ್ರೆಸ್ ಭಾರಿ ಪ್ರತಿಭಟನೆ ಪ್ಲಾನ್
ಪಂಜಾಬ್ ಅಸೆಂಬ್ಲಿಯಲ್ಲಿ ಲಾಲಿಪಾಪ್ ಪದವನ್ನು ಅಸಸಂದೀಯ ಎಂದು ನಿಷೇಧಿಸಲಾಗಿದೆ. ಸುಳ್ಳು ಹೇಳುತ್ತಿದ್ದೀರಿ ಅನ್ನೋ ಪದವನ್ನು ಪಂಜಾಬ್ ವಿಧಾನಸಭೆಯಲ್ಲಿ ನಿಷೇಧಿಸಲಾಗಿದೆ. ಶಟ್ , ಅಶಕ್ತ ಪದಗಳನ್ನು ಚತ್ತೀಸಘಡ ಅಸೆಂಬ್ಲಿಯಲ್ಲಿ ಅಸಂಸದೀಯ ಎಂದು ನಿಷೇಧಿಸಲಾಗಿದೆ. ಇನ್ನ ರಾಜಸ್ಥಾನ ವಿಧಾಸಭೆಯಲ್ಲಿ ಅನಕ್ಷರಸ್ತ, ನಿರ್ಲಕ್ಷ್ಯ ಪದಗಳನ್ನು ನಿಷೇಧಿಸಿದೆ.
ಅಸಂಸದೀಯ ಪದಗಳ ಬಳಕೆ ನಿಷೇಧ ಸಾಮಾನ್ಯ ಪ್ರಕ್ರಿಯೆ. ಪ್ರತಿ ವರ್ಷ ಈ ರೀತಿ ಪದಗಳ ಪಟ್ಟಿ ಮಾಡಿ ಬಿಡುಗಡೆ ಮಾಡಲಾಗುತ್ತದೆ. ಇದನ್ನು ಕಾಂಗ್ರೆಸ್ ಮಾಡಿದೆ ಇದೀಗ ಬಿಜೆಪಿ ಮಾಡುತ್ತಿದೆ. ಇದು ವಿವಾದಕ್ಕೆ ಕಾರಣವಾಗಲು ಮುಖ್ಯ ಕಾರಣ ಇದರಲ್ಲಿ ಹೇಳಿರುವ ಬಹುತೇಕ ಪದಗಳು ಕಾಂಗ್ರೆಸ್ ನಾಯಕರು ಹೇಳಿದ್ದಾರೆ. ಇದೀಗ ಕಾಂಗ್ರೆಸ್ ನಾಯಕರ ಒಬ್ಬರ ಹಿಂದೊಬ್ಬರು ಕೇಂದ್ರದ ವಿರುದ್ದ ಮುಗಿಬಿದ್ದಿದ್ದಾರೆ. ಜುಮ್ಲಜೀವಿಗೆ ಜುಮ್ಲಜೀವಿ ಎಂದು ಹೇಳದೆ ಇನ್ನೇನು ಹೇಳಲು ಸಾಧ್ಯ ಎಂದು ಕಾಂಗ್ರೆಸ್ ನಾಯಕ ಅಭಿಷೇಕ್ ಮನು ಸಿಂಗ್ವಿ ಹೇಳಿದ್ದಾರೆ.
ರಾಷ್ಟ್ರ ಲಾಂಛನದ ಸಿಂಹದ ಉಗ್ರಾವತಾರಕ್ಕೆ ಕಾಂಗ್ರೆಸ್ ಕ್ಯಾತೆ, ಕೇಂದ್ರದ ವಿರುದ್ಧ ಮತ್ತೊಂದು ರಣಕಹಳೆ!
ವಿವಾದ ಬೆನ್ನಲ್ಲೇ ಲೋಕಸಭಾ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಇದೀಗ ಬಿಡುಗಡೆ ಮಾಡಿರುವ ಅಸಂಸದೀಯ ಪಟ್ಟಿಯಲ್ಲಿರುವ ಕೆಲ ಪದಗಳು ಈಗಾಗಲ ಹಲವು ರಾಜ್ಯಗಳ ವಿಧಾನಸಭೆಯಲ್ಲಿ ನಿಷೇಧಿಸಲಾಗಿದೆ. 2021ರಲ್ಲಿ ಈ ಪದಗಳ ಪಟ್ಟಿ ಮಾಡಲಾಗಿತ್ತು. ಇದೀಗ ಅಂತಿಮಗೊಂಡು ಬಿಡುಗಡೆ ಮಾಡಲಾಗಿದೆ ಎಂದಿದ್ದಾರೆ.
