ಈ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಹಲವು ಮಹಿಳೆಯರು ಈ ಬಗ್ಗೆ ಹೇಳಿರೋದನ್ನು ನಾನು ಗಮನಿಸಿದ್ದೇನೆ. ನಾನು ನಿರ್ಭಯಾ ತಂಡಕ್ಕೆ ಹಲವು ಬಾರಿ ಕರೆ ಮಾಡಿದರೂ ಯಾರೂ ಪ್ರತಿಕ್ರಿಯಿಸಿಲ್ಲ
ಮುಂಬೈ: ನಡುರಸ್ತೆಯಲ್ಲಿಯೇ ಲೈಂಗಿಕ ಕಿರುಕುಳ ನೀಡುತ್ತಿದ್ದ ಅಪರಿಚಿತ ವ್ಯಕ್ತಿಯ ವಿಡಿಯೋವನ್ನು ಮಹಿಳೆ ಎಕ್ಸ್ ಖಾತೆಯಲ್ಲ ಹಂಚಿಕೊಂಡಿದ್ದಾರೆ. ಈ ವ್ಯಕ್ತಿ ಪ್ಯಾಂಟ್ ಬಿಚ್ಚಿ ಕರೆದಿದ್ದಾನೆ ಎಂದು ಮಹಿಳೆ ಆರೋಪಿಸಿದ್ದಾರೆ. ಇದು ಮುಂಬೈನ ಘಟನೆಯಾಗಿದ್ದು, ಎಕ್ಸ್‌ನಲ್ಲಿ ವಿಡಿಯೋ ಹಂಚಿಕೊಂಡಿರುವ ಮಹಿಳೆ ಪೊಲೀಸರಿಗೆ ಟ್ಯಾಗ್ ಮಾಡಿ ದೂರು ನೀಡಿದ್ದಾರೆ. ಮಹಿಳೆ ಹಂಚಿಕೊಂಡ ವಿಡಿಯೋದಲ್ಲಿ ಶಾರ್ಟ್ ಮತ್ತು ಬನಿಯನ್ ಧರಿಸಿರುವ ವ್ಯಕ್ತಿ ಓಡಿ ಹೋಗುತ್ತಿರೋದನ್ನು ಗಮನಿಸಬಹುದು. ಆತನ ಹಿಂದೆಯೇ ಮಹಿಳೆ ನಿಂತುಕೊಳ್ಳುವಂತೆ ಕೂಗಿದ್ದಾರೆ. ಒಟ್ಟು ಮೂರು ಬಾರಿ ಮಹಿಳೆ ಜೊತೆ ಅಪರಿಚಿತ ಕಾಮುಕರು ಅಸಭ್ಯವಾಗಿ ನಡೆದುಕೊಂಡಿದ್ದಾರೆ.
ಮುಂಬೈನ ಪ್ರತಿಷ್ಠಿತ ಬಡಾವಣೆಗಳಲ್ಲೊಂದಾದ ಜುಹುನಲ್ಲಿ ನಾಚಿಕೆಗೇಡಿನ ಕೆಲಸ ನಡೆದಿದೆ. viyaa (@viyaadoshi) ಹೆಸರಿನ ಎಕ್ಸ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಮಾಡಲಾಗಿದೆ. ವಿಡಿಯೋದಲ್ಲಿ ಮಹಿಳೆ ಜೋರಾಗಿ ಕೂಗುತ್ತಿದ್ದರೂ ಆ ವ್ಯಕ್ತಿ ಹಿಂದಿರುಗಿಯೂ ನೋಡದೇ ಓಡಿ ಹೋಗಿದ್ದಾನೆ. ಇದು ಜುಹು ಬಡಾವಣೆಯ ಜಾನಕಿ ಕುಟೀರ ಪ್ರದೇಶ ಎಂದು ಮಹಿಳೆ ಎಕ್ಸ್ ಖಾತೆಯಲ್ಲಿ ತಿಳಿಸಿದ್ದಾರೆ. ಜುಲೈ 21ರ ಬೆಳಗ್ಗೆ 8.55ರ ವೇಳೆಗೆ ಈ ಘಟನೆ ನಡೆದಿದೆ.
ಆನ್‌ಲೈನಲ್ಲಿ ಮಸಾಜ್‌ಗೆ ಬುಕ್ ಮಾಡಿ ಯುವತಿಯರಸುಲಿಗೆ ಮಾಡುತ್ತಿದ್ದ ನಕಲಿ ಪೊಲೀಸ್ ಬಂಧನ
ಮುಂಬೈ ಪೊಲೀಸರಿಗೆ ಮಾಹಿತಿ
ಮಹಿಳೆಯ ಟ್ವೀಟ್‌ಗೆ ಪ್ರತಿಕ್ರಿಯಿಸಿರುವ ಮುಂಬೈ ಪೊಲೀಸರು, ನಿಮ್ಮ ಮೊಬೈಲ್ ಸಂಖ್ಯೆ ಹಾಗೂ ವಿವರವನ್ನು ನಮಗೆ ನೇರವಾಗಿ ಮೆಸೇಜ್ ಮಾಡಿ ಎಂದು ಕೇಳಿದೆ. ಘಟನೆ ನಡೆದ ಸಂದರ್ಭದಲ್ಲಿ ನಾನು ನಿರ್ಭಯಾ ದಳದ ಸಿಬ್ಬಂದಿಗೆ ಕಾಲ್ ಮಾಡಿದೆ. ಆದ್ರೆ ಯಾವುದೇ ಸ್ಪಂದನೆ ಸಿಕ್ಕಿಲ್ಲ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಕೊನೆಗೆ ವಿಡಿಯೋ ಮಾಡಿ ಎಕ್ಸ್ ಖಾತೆ ಮೂಲಕ ಮುಂಬೈ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಮಹಿಳೆಯ ಪೋಸ್ಟ್‌ನಲ್ಲಿ ಏನಿದೆ?
ಮುಂಬೈ ಪೊಲೀಸರೇ, ಇದು ಜುಹುವಿನ ಜಾನಕಿ ಕುಟೀರ ಪ್ರದೇಶ. ಈ ವ್ಯಕ್ತಿ ನಡುರಸ್ತೆಯಲ್ಲಿಯೇ ಪ್ಯಾಂಟ್ ಬಿಚ್ಚಿ ಜೋರಾಗಿ ಕರೆಯುವ ಮೂಲಕ ಅಸಭ್ಯವಾಗಿ ವರ್ತಿಸಿದ್ದಾನೆ. ಜುಲೈ 21ರ ಬೆಳಗ್ಗೆ 8.55ಕ್ಕೆ ಈ ಘಟನೆ ನಡೆದಿದೆ. ಅಪರಿಚಿತರಿಂದ ಮೂರನೇ ಬಾರಿ ಎದುರಿಸುತ್ತಿರುವ ಕಿರುಕುಳ ಆಗಿದೆ. ಮೂರು ಬಾರಿಯೂ ಬೇರೆ ಜನರಿದ್ದರು ಎಂದು ಮಹಿಳೆ ಸ್ಪಷ್ಟಪಡಿಸಿದ್ದಾರೆ. ಈ ಸ್ಥಳದಲ್ಲಿ ಇಂತಹ ಘಟನೆಗಳು ನಡೆಯುತ್ತಿರುತ್ತವೆ. ಹಲವು ಮಹಿಳೆಯರು ಈ ಬಗ್ಗೆ ಹೇಳಿರೋದನ್ನು ನಾನು ಗಮನಿಸಿದ್ದೇನೆ. ನಾನು ನಿರ್ಭಯಾ ತಂಡಕ್ಕೆ ಹಲವು ಬಾರಿ ಕರೆ ಮಾಡಿದರೂ ಯಾರೂ ಪ್ರತಿಕ್ರಿಯಿಸಿಲ್ಲ. ಈ ಪ್ರದೇಶದಲ್ಲಿ ಸುರಕ್ಷತಾ ಕ್ರಮಗಳನ್ನು ಹೆಚ್ಚಿಸಬೇಕೆಂದು ಮಹಿಳೆ ಮನವಿ ಮಾಡಿಕೊಂಡಿದ್ದಾರೆ.
ಯುವತಿಯ ತಲೆ ಹೊಕ್ಕಿದ್ದ 70 ಸೂಜಿಗಳ ಶಸ್ತ್ರಚಿಕಿತ್ಸೆ ನಡೆಸಿ ಹೊರತೆಗೆದ ವೈದ್ಯರು
ಮುಂಬೈ ಪೊಲೀಸರಿಗೆ ಧನ್ಯವಾದ ತಿಳಿಸಿದ ಮಹಿಳೆ
ತಮ್ಮ ಸಮಸ್ಯೆಗೆ ಕ್ಷಿಪ್ರವಾಗಿ ಪ್ರತಿಕ್ರಿಯಿಸಿದ ಮುಂಬೈ ಪೊಲೀಸರಿಗೆ ಮಹಿಳೆ ಧನ್ಯವಾದಗಳನ್ನು ಸಲ್ಲಿಸಿದ್ದಾರೆ. ತಕ್ಷಣವೇ ಗಸ್ತು ವಾಹನಗಳ ಸಂಚಾರ ಹೆಚ್ಚಿಸಿರೋದನ್ನು ಗಮನಿಸಿದ್ದೇನೆ. ಇದು ಕೇವಲ ನನ್ನೊಬ್ಬಳ ರಕ್ಷಣೆಯ ಪ್ರಶ್ನೆಯಲ್ಲ. ಪ್ಯಾಟ್ರೋಲಿಂಗ್ ಮೂಲಕ ಎಲ್ಲ ಮಹಿಳೆಯರ ಸುರಕ್ಷಣೆಯನ್ನು ಹೆಚ್ಚಿಸಿದಂತಾಗಿದೆ. ಮುಂಬೈ ನಿವಾಸಿ ಎಂದು ಹೇಳಿಕೊಳ್ಳಲು ನನಗೆ ಹೆಮ್ಮೆ ಆಗುತ್ತದೆ ಎಂದು ಬರೆದುಕೊಂಡಿದ್ದಾರೆ.
