ಪುರುಷರ ದಿನದಂದು ಪತಿಗೆ ಏನು ಉಡುಗೊರೆ ನೀಡಬೇಕು ಎಂದು ಯೋಚಿಸುತ್ತಿದ್ದೀರಾ? ಹಾಗಾದ್ರೆ ಇಲ್ಲಿವೆ ನೋಡಿ 5 ಬಜೆಟ್ ಫ್ರೆಂಡ್ಲಿ ಗಿಫ್ಟ್‌ಗಳು
ಪುಷ್ಪಗುಚ್ಛ
ನಿಮ್ಮಿಬ್ಬರ ವಿಶೇಷ ಚಿತ್ರವಿರುವ ಪುಷ್ಪಗುಚ್ಛದ ಜೊತೆ ಮುದ್ದಾದ ಸಂದೇಶವನ್ನು ಬರೆಯಲಾದ ಪತ್ರ ನೀಡಿ. ಇದು ಭಾವನಾತ್ಮಕ ಉಡುಗೊರೆಯಾಗಿದ್ದು, ಪ್ರತಿದಿನ ನೀವು ಅವರಿಗೆ ಎಷ್ಟು ವಿಶೇಷ ಎಂದು ನೆನಪಿಸುತ್ತದೆ.
ಸುಗಂಧ ದ್ರವ್ಯ
ಹುಡುಗರಿಗೆ ಮೇಕಪ್ ಹೆಚ್ಚು ಇಷ್ಟವಿರುವುದಿಲ್ಲ, ಆದ್ದರಿಂದ ನೀವು ಅವರಿಗೆ ಪುರುಷರ ದಿನದಂದು ಸುಗಂಧ ದ್ರವ್ಯಗಳ ಸೆಟ್ ಅನ್ನು ಉಡುಗೊರೆಯಾಗಿ ನೀಡಬಹುದು.
ವ್ಯಾಲೆಟ್ ಅಥವಾ ಕಾರ್ಡ್ ಹೋಲ್ಡರ್
ಒಂದು ಉತ್ತಮ ಮತ್ತು ಸ್ಟೈಲಿಶ್ ವ್ಯಾಲೆಟ್ ಅಥವಾ ಕಾರ್ಡ್ ಹೋಲ್ಡರ್ ಉಡುಗೊರೆಯಾಗಿ ನೀಡಿ. ಇದರಲ್ಲಿ ಸಣ್ಣ ಟಿಪ್ಪಣಿ ಬರೆದು ಕೊಟ್ರೆ ಪುರುಷರಿಗೆ ಇಷ್ಟವಾಗುತ್ತದೆ.
ಗ್ರೂಮಿಂಗ್ ಕಿಟ್
ಇತ್ತೀಚಿನ ದಿನಗಳಲ್ಲಿ ಗ್ರೂಮಿಂಗ್ ಉತ್ಪನ್ನಗಳು ಟ್ರೆಂಡ್‌ನಲ್ಲಿವೆ. ಶೇವಿಂಗ್ ಕ್ರೀಮ್, ರೇಜರ್, ಟ್ರಿಮ್ಮರ್ ಅಥವಾ ಸುಗಂಧ ದ್ರವ್ಯವನ್ನು ಒಳಗೊಂಡಿರುವ ಗ್ರೂಮಿಂಗ್ ಕಿಟ್ ಖರೀದಿಸಿ.
ಪುರುಷರ ಪರಿಕರಗಳು
ಟೈ, ಬೆಲ್ಟ್, ಸನ್‌ಗ್ಲಾಸ್, ವಾಚ್ ಮತ್ತು ಬ್ರೇಸ್ಲೆಟ್ ಸೇರಿದಂತೆ ಹಲವು ವಸ್ತುಗಳನ್ನು ಒಟ್ಟಿಗೆ ಇರಿಸಿ ಉಡುಗೊರೆ ಪೆಟ್ಟಿಗೆಯಲ್ಲಿ ಪ್ಯಾಕ್ ಮಾಡಿ ನೀಡಿ.