ನವೆದೆಹಲಿ(ಆ.05): ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರಕ್ಕೆ ಪ್ರಧಾನಿ ನರೇಂದ್ರ ಮೋದಿ ಶಿಲಾನ್ಯಾಸ ನೆರವೇರಿಸಿದ್ದಾರೆ. ದೇಶದಲ್ಲಿ ಹೊಸ ಅಧ್ಯಾಯವೊಂದು ತೆರೆದುಕೊಂಡಿದೆ. ಎಲ್ಲರಲ್ಲೂ ಸಂಭ್ರಮ ಮನೆ ಮಾಡಿದೆ. ಶತ ಶತಮಾನಗಳ ಹೋರಾಟದ ಫಲವಾಗಿ ಇದೀಗ ಭವ್ಯ ಮಂದಿರ ನಿರ್ಮಾಣವಾಗುತ್ತಿದೆ. ಅಯೋಧ್ಯೆಯಲ್ಲಿ ರಾಮ ಮಂದಿರ ಭೂಮಿ ಪೂಜೆಗೂ ಮುನ್ನ ಬಾಬರ್ ರಸ್ತೆಯನ್ನು ಅಳಿಸಿ ಹಾಕಲಾಗಿದೆ. ಇಷ್ಟೇ ಅಲ್ಲ ಈ ರಸ್ತೆಯನ್ನು 5 ಆಗಸ್ಟ್ ಎಂದು ಮರು ನಾಮಕರಣ ಮಾಡಲು ಕೇಂದ್ರ ಮಾಜಿ ಸಚಿವ ವಿಜಯ್ ಗೋಯಲ್ ಆಗ್ರಹಿಸಿದ್ದಾರೆ. 

 ನರೇಂದ್ರ ಮೋದಿ, ರಾಮ ಜನ್ಮಭೂಮಿಗೆ ಭೇಟಿ ಕೊಟ್ಟ ದೇಶದ ಮೊದಲ ಪ್ರಧಾನ ಮಂತ್ರಿ

ಕೇಂದ್ರ ದೆಹಲಿ ಬಂಗಾಳಿ ಮಾರುಕಟ್ಟೆ ಸಮೀಪದಲ್ಲಿ ಬಾಬರ್ ರಸ್ತೆ ಇದೆ. ಭೂಮಿ ಪೂಜೆಗೂ ಮುನ್ನ ವಿಜಯ್ ಗೋಯಲ್  ರಸ್ತೆಗೆ ಹಾಕಲಾಗಿದ್ದ ಫಲಕದಲ್ಲಿ ಬಾಬರ್ ರಸ್ತೆಯನ್ನು ಅಳಿಸಿ ಹಾಕಿದ್ದಾರೆ. ಇಷ್ಟೇ ಅಲ್ಲ ರಾಮ ಮಂದಿರ ಭೂಮಿ ಪೂಜೆ ನೇರವೇರುತ್ತಿರುವ ದಿನನ್ನೇ ಹೆಸರಾಗಿಡಲು ಆಗ್ರಹಿಸಿದ್ದಾರೆ.  ಬಾಬರ್ ರಸ್ತೆ ಬದಲು ಆಗಸ್ಟ್ 5 ರಸ್ತೆ ಎಂದು ಮರುನಾಮಕರಣ ಮಾಡಲು ಕೇಂದ್ರ ಗೃಹ ಸಚಿವ ಅಮಿತ್ ಶಾಗೆ ಪತ್ರ ಬರೆದಿದ್ದಾರೆ.

ಬಾಬರ್ ದಾಳಿಕೋರ, ಭಾರತದ ಹಲವು ದೇವಾಲಯಗಳನ್ನು ನಾಶ ಪಡಿಸಿದ್ದಾನೆ. ರಾಮ ಮಂದಿರ ನಾಶ ಮಾಡಿ ಬಾಬ್ರಿ ಮಸೀದಿ ಕಟ್ಟಿದ್ದಾನೆ. ಇದೀಗ ಎಲ್ಲಾ ಸಮಸ್ಯೆಗಳು ಬಗೆ ಹರಿದು ರಾಮ ಮಂದಿರ ನಿರ್ಮಾಣ ಕಾರ್ಯಕ್ಕೆ ಚಾಲನೆ ಸಿಕ್ಕಿದೆ. ಹೀಗಾಗಿ ಬಾಬರ್ ರಸ್ತೆ ಇನ್ನೂ ಇರುವುದು ಸರಿಯಲ್ಲ ಎಂದು ವಿಜಯ್ ಗೋಯೆಲ್ ಹೇಳಿದ್ದಾರೆ.

ರಾಮ ಮಂದಿರ ಭೂಮಿ ಪೂಜೆ ಕಾರ್ಯಕ್ರಮದ ನಿಮಿತ್ತ ಹೆಚ್ಚುವರಿ ಭದ್ರತೆ ನಿಯೋಜನೆ ಮಾಡಲಾಗಿತ್ತು. ಆದರೆ  ವಿಜಯ್ ಗೋಯೆಲ್ ಬಾಬರ್ ರಸ್ತೆಗೆ ತೆರಳಿ ನಾಮಫಲಕದಲ್ಲಿ ಬಾಬರ್ ರಸ್ತೆಗೆ ಅಳಿಸಿ, ಅದರ ಕೆಳಗೆ 5 ಆಗಸ್ಟ್ ರೋಡ್ ಎಂದು ಬರೆದಿದ್ದಾರೆ. ಕಳೆದ ವರ್ಷ ಇದೇ ಬಾಬರ್ ರಸ್ತೆ ನಾಮಫಲಕಕ್ಕೆ ಹಿಂದೂ ಸೇನೆ ಮಸಿ ಬಳಿದಿತ್ತು.