Lakhimpur Kheri Violence: 124 ದಿನಗಳ ಬಳಿಕ ಆಶಿಶ್ ಮಿಶ್ರಾ ಜೈಲಿನಿಂದ ಹೊರಕ್ಕೆ!

* ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಆಶಿಶ್ ಮಿಶ್ರಾಗೆ ರಿಲೀಫ್

* 124 ದಿನಗಳ ಬಳಿಕ ಆಶಿಶ್ ಮಿಶ್ರಾ ಜೈಲಿನಿಂದ ಹೊರಕ್ಕೆ

* ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠದಿಂದ ಜಾಮೀನು ಮಂಜೂರು 

Union Minister Son Accused in UP Lakhimpur Kheri Case Gets Bail From Allahabad HC pod

ಲಕ್ನೋ(ಫೆ.10): ಲಖಿಂಪುರ ಖೇರಿ ಹಿಂಸಾಚಾರ ಪ್ರಕರಣದಲ್ಲಿ ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಪುತ್ರ ಆಶಿಶ್ ಮಿಶ್ರಾ 124 ದಿನಗಳ ನಂತರ ಜಾಮೀನು ಪಡೆದಿದ್ದಾರೆ. ಕಳೆದ ವರ್ಷ ಅಕ್ಟೋಬರ್ 3 ರಂದು ಲಖಿಂಪುರ ಖೇರಿಯ ಟಿಕುನಿಯಾದಲ್ಲಿ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಆಶಿಶ್ ಮಿಶ್ರಾ ಅವರನ್ನು ಅಕ್ಟೋಬರ್ 9 ರಂದು ಬಂಧಿಸಲಾಗಿತ್ತು.

ಜಾಮೀನು ಮಂಜೂರಾದರೂ, ಆಶಿಶ್ ಮಿಶ್ರಾ ಜೈಲಿನಿಂದ ಹೊರಬರಲು ಒಂದೋ ಎರಡೋ ದಿನ ಬೇಕಾಗಬಹುದು. ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠ ಜಾಮೀನು ಮಂಜೂರು ಮಾಡಿದೆ, ಆದರೆ ಈ ಬಗ್ಗೆ ಇನ್ನೂ ಆದೇಶ ಬರಬೇಕಿದೆ ಎಂದು ಆಶಿಶ್ ಮಿಶ್ರಾ ಅವರ ವಕೀಲ ಅವಧೇಶ್ ಸಿಂಗ್ ಹೇಳಿದ್ದಾರೆ. ಆದೇಶ ಬಂದ ನಂತರ ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು ಇದು ಒಂದು ಅಥವಾ ಎರಡು ದಿನ ತೆಗೆದುಕೊಳ್ಳಬಹುದು ಎಂದು ತಿಳಿಸಿದರು. 

ಆಶಿಶ್ ಮಿಶ್ರಾಗೆ ಜಾಮೀನು ಸಿಕ್ಕಿದ್ದು ಹೇಗೆ?

* ಆಶಿಶ್ ಮಿಶ್ರಾ ಪರ ವಕೀಲ ಸಲೀಲ್ ಶ್ರೀವಾಸ್ತವ ಅವರು ಜಾಮೀನು ಪಡೆಯಲು ಆಧಾರವನ್ನು ನೀಡಿದ್ದಾರೆ. ಕಾರು ಆಶಿಶ್ ಮಿಶ್ರಾ ಓಡಿಸುತ್ತಿರಲಿಲ್ಲ, ಹರಿ ಓಂ ಮಿಶ್ರಾ ಓಡಿಸುತ್ತಿದ್ದರು. ಅಲ್ಲದೇ ಅವರು ತಮ್ಮ ಸ್ವಂತ ರಕ್ಷಣೆಗಾಗಿ ಕಾರು ಹತ್ತಿಸಿದ್ದರು ರೆಂದಿದ್ದಾರೆ.

* ಚಾಲಕನ ಅಪರಾಧಕ್ಕೆ ಆಶಿಶ್ ಮಿಶ್ರಾ ಅವರನ್ನು ಹೇಗೆ ಹೊಣೆಗಾರರನ್ನಾಗಿ ಮಾಡಲಾಗುತ್ತದೆ ಎಂದೂ ಅವರು ಪ್ರಶ್ನಿಸಿದ್ದಾರೆ. ಲಖಿಂಪುರ ಹಿಂಸಾಚಾರದಲ್ಲಿ ಬುಲೆಟ್‌ನಿಂದ ಯಾವುದೇ ರೈತ ಸಾವನ್ನಪ್ಪಿಲ್ಲ ಎಂದು ಪೋಸ್ಟ್‌ಮಾರ್ಟಮ್ ವರದಿ ಬಹಿರಂಗಪಡಿಸಿದೆ ಎಂದು ಅವರು ಹೇಳಿದರು.

* ಚಾರ್ಜ್ ಶೀಟ್ ಬಗ್ಗೆಯೂ ಸವಾಲೆಸೆದಿರುವ ವಕೀಲರು ಪೊಲೀಸರು ಸಲ್ಲಿಸಿರುವ ಚಾರ್ಜ್‌ಶೀಟ್‌ನಲ್ಲಿ ಸುಪ್ರೀಂ ಕೋರ್ಟ್‌ ಸೂಚಿಸಿರುವ ಎಸ್‌ಐಟಿ ಅಧಿಕಾರಿಗಳ ಸಹಿ ಇಲ್ಲ, ಅದಕ್ಕಾಗಿಯೇ ನಾವು ಅದನ್ನು ಕಾನೂನುಬಾಹಿರವೆಂದು ಪರಿಗಣಿಸುತ್ತೇವೆ ಎಂದು ಅವರು ಹೇಳಿದ್ದಾರೆ.

ಆಶಿಶ್ ಮಿಶ್ರಾ ವಿರುದ್ಧದ ಆರೋಪಗಳೇನು?

- ಲಖಿಂಪುರ ಹಿಂಸಾಚಾರದ ತನಿಖೆ ನಡೆಸುತ್ತಿರುವ ಎಸ್‌ಐಟಿ ಜನವರಿ 3 ರಂದು 5000 ಪುಟಗಳ ಆರೋಪಪಟ್ಟಿ ಸಲ್ಲಿಸಿತ್ತು. ಇದರಲ್ಲಿ ಎಸ್ ಐಟಿ ಆಶಿಶ್ ಮಿಶ್ರಾ ಅವರನ್ನು ‘ಪ್ರಮುಖ ಆರೋಪಿ’ಯನ್ನಾಗಿ ಉಲ್ಲೇಖಿಸಲಾಗಿದೆ.

- ಡಿಸೆಂಬರ್‌ನಲ್ಲಿ, ಆಶಿಶ್ ಮಿಶ್ರಾ ತನ್ನ ಕಾರಿನಿಂದ 4 ರೈತರನ್ನು ಹತ್ಯೆಗೈದಿದ್ದಾರೆಂದು ಎಸ್‌ಐಟಿ ಹೇಳಿದೆ.

ಆಶಿಶ್ ಮಿಶ್ರಾ ವಿರುದ್ಧ ಈ 3 ದೊಡ್ಡ ಆರೋಪಗಳು:-

1. ಶಸ್ತ್ರಾಸ್ತ್ರಗಳ ಬಳಕೆ: ಎಸ್‌ಐಟಿ ಪ್ರಕಾರ, ಟಿಕುನಿಯಾ ಗ್ರಾಮದಲ್ಲಿ ನಡೆದ ಹಿಂಸಾಚಾರದ ಸಂದರ್ಭದಲ್ಲಿ ಹಾರಿಸಲಾದ ಗುಂಡುಗಳು ಆಶಿಶ್ ಮಿಶ್ರಾ ಮತ್ತು ಅಂಕಿತ್ ದಾಸ್ ಅವರ ಪರವಾನಗಿ ಪಡೆದ ಶಸ್ತ್ರಾಸ್ತ್ರಗಳಾಗಿವೆ.

2. ಸ್ನೇಹಿತರು ಶಾಮೀಲು: ಆಶಿಶ್ ಮಿಶ್ರಾ ಅಲ್ಲದೆ ಇನ್ನೂ 13 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಇವರೆಲ್ಲರೂ ಆಶಿಶ್ ಮಿಶ್ರಾ ಜೊತೆ ಸಂಬಂಧ ಹೊಂದಿದ್ದರು. ಹಿಂಸಾಚಾರದಲ್ಲಿ ಅಂಕಿತ್ ದಾಸ್ ಮತ್ತು ಸುಮಿತ್ ಜೈಸ್ವಾಲ್ ಭಾಗಿಯಾಗಿದ್ದರು.

3. ಸ್ಥಳದಲ್ಲೇ ಉಪಸ್ಥಿತಿ: ಪ್ರಕರಣದ ಡೈರಿಯಲ್ಲಿ ಸಾಕ್ಷಿಗಳ ಹೇಳಿಕೆಯ ಆಧಾರದ ಮೇಲೆ ಆಶಿಶ್ ಮಿಶ್ರಾ ಅಲಿಯಾಸ್ ಮೋನು ಸ್ಥಳದಲ್ಲಿಯೇ ಇದ್ದಾರು ಎಂದು ಹಿರಿಯ ಪ್ರಾಸಿಕ್ಯೂಷನ್ ಅಧಿಕಾರಿ (ಎಸ್‌ಪಿಒ) ಎಸ್‌ಪಿ ಯಾದವ್ ತಿಳಿಸಿದ್ದರು.

ಲಖಿಂಪುರ ಘಟ ಬಳಿಕ ಇಲ್ಲಿಯವರೆಗೆ ಏನಾಯಿತು?

- 3 ಅಕ್ಟೋಬರ್ 2021: ಲಖಿಂಪುರ ಖೇರಿಯ ಟಿಕುನಿಯಾ ಗ್ರಾಮದಲ್ಲಿ ಹಿಂಸಾಚಾರ ನಡೆಯಿತು. ಇದರಲ್ಲಿ ರೈತರು ತುಳಿತಕ್ಕೊಳಗಾದರು. ಈ ಹಿಂಸಾಚಾರದಲ್ಲಿ ನಾಲ್ವರು ರೈತರ ಹೊರತಾಗಿ ಮೂವರು ಬಿಜೆಪಿ ಕಾರ್ಯಕರ್ತರು ಹಾಗೂ ಓರ್ವ ಪತ್ರಕರ್ತ ಸಾವನ್ನಪ್ಪಿದ್ದಾರೆ.

- ಅಕ್ಟೋಬರ್ 4, 2021: ಬಹ್ರೈಚ್ ಜಿಲ್ಲೆಯ ರೈತ ಜಗಜಿತ್ ಸಿಂಗ್, ಆಶಿಶ್ ಮಿಶ್ರಾ ಸೇರಿದಂತೆ 15-20 ಅಪರಿಚಿತ ಜನರ ವಿರುದ್ಧ ಎಫ್‌ಐಆರ್ ದಾಖಲಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಅಕ್ಟೋಬರ್ 6 ರಂದು ಶಿವಪುರಿ ಬಿಜೆಪಿ ಕೌನ್ಸಿಲರ್ ಸುಮಿತ್ ಜೈಸ್ವಾಲ್ ಕೂಡ ಎಫ್‌ಐಆರ್ ದಾಖಲಿಸಿದ್ದಾರೆ.

- 5 ಅಕ್ಟೋಬರ್ 2021: ಲಖಿಂಪುರ ಹಿಂಸಾಚಾರದ ತನಿಖೆಗಾಗಿ ವಿಶೇಷ ತನಿಖಾ ತಂಡವನ್ನು (SIT) ರಚಿಸಲಾಗಿದೆ.

- 9 ಅಕ್ಟೋಬರ್ 2021: ಬೆಳಿಗ್ಗೆ ಆಶಿಶ್ ಮಿಶ್ರಾ ಅವರನ್ನು ವಿಚಾರಣೆಗೆ ಕರೆಯಲಾಯಿತು. ಸುಮಾರು 12 ಗಂಟೆಗಳ ಕಾಲ ವಿಚಾರಣೆ ನಡೆಸಿದ ಬಳಿಕ ಆತನನ್ನು ಬಂಧಿಸಲಾಯಿತು.

- ಡಿಸೆಂಬರ್ 14, 2021: ಎಫ್‌ಐಆರ್‌ನಲ್ಲಿನ ಸೆಕ್ಷನ್‌ಗಳನ್ನು ಬದಲಾಯಿಸುವಂತೆ ಎಸ್‌ಐಟಿ ನ್ಯಾಯಾಲಯಕ್ಕೆ ಮನವಿ ಮಾಡಿದೆ. ಹಿಂಸಾಚಾರವನ್ನು ಯೋಜಿತ ಪಿತೂರಿ ಎಂದು ಎಸ್‌ಐಟಿ ಬಣ್ಣಿಸಿದೆ. ಎಫ್‌ಐಆರ್‌ನಲ್ಲಿ ಅಪರಾಧಿ ನರಹತ್ಯೆಯ ಬದಲಿಗೆ ಕೊಲೆಯ ವಿಭಾಗವನ್ನು ಸೇರಿಸಲು ನ್ಯಾಯಾಲಯವು ಅನುಮೋದಿಸಿತು.

- ಜನವರಿ 3, 2022: SIT 5000 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತು. ಇದರಲ್ಲಿ 14 ಮಂದಿಯನ್ನು ಆರೋಪಿಗಳನ್ನಾಗಿ ಮಾಡಲಾಗಿದೆ. ಆಶಿಶ್ ಮಿಶ್ರಾ ಅವರ ಸಂಬಂಧಿ ವೀರೇಂದ್ರ ಶುಕ್ಲಾ ಅವರನ್ನು ಕೂಡ ಎಸ್‌ಐಟಿ ಆರೋಪಿಯನ್ನಾಗಿ ಮಾಡಿದೆ.

- 10 ಫೆಬ್ರವರಿ 2022: ಅಲಹಾಬಾದ್ ಹೈಕೋರ್ಟ್‌ನ ಲಕ್ನೋ ಪೀಠವು ಆಶಿಶ್ ಮಿಶ್ರಾ ಅಲಿಯಾಸ್ ಮೋನುಗೆ ಜಾಮೀನು ನೀಡಿತು. ಆಶಿಶ್ ಮಿಶ್ರಾ ಇನ್ನೆರಡು ದಿನದಲ್ಲಿ ಜೈಲಿನಿಂದ ಹೊರಬರಲಿದ್ದಾರೆ.

ಅಕ್ಟೋಬರ್ 3 ರಂದು ಏನಾಯಿತು?

ಅಕ್ಟೋಬರ್ 3 ರಂದು ಉಪ ಮುಖ್ಯಮಂತ್ರಿ ಕೇಶವ್ ಪ್ರಸಾದ್ ಮೌರ್ಯ ಅವರು ಲಖಿಂಪುರ ಖೇರಿ ಪ್ರವಾಸದಲ್ಲಿದ್ದರು. ಕೇಂದ್ರ ಗೃಹ ಖಾತೆ ರಾಜ್ಯ ಸಚಿವ ಅಜಯ್ ಮಿಶ್ರಾ ಟೆನಿ ಅವರ ಬನ್ವೀರ್‌ಪುರ ಗ್ರಾಮದಲ್ಲಿ ನಡೆದ ಗಲಭೆಯಲ್ಲಿ ಅವರು ಭಾಗವಹಿಸಬೇಕಿತ್ತು. ಉಪ ಮುಖ್ಯಮಂತ್ರಿ ಮೌರ್ಯ ಅವರನ್ನು ಬರಮಾಡಿಕೊಳ್ಳಲು ಮೂರು ವಾಹನಗಳು ಬನ್‌ವೀರ್‌ಪುರದಿಂದ ಹೊರಬಂದವು. ಆದರೆ ದಾರಿ ಮಧ್ಯೆ ಟಿಕುನಿಯಾ ಗ್ರಾಮದಲ್ಲಿ ರೈತರು ಪ್ರತಿಭಟನೆ ಆರಂಭಿಸಿದರು. ನಂತರ ರೈತರೊಂದಿಗೆ ವಾಗ್ವಾದ ನಡೆಯಿತು. ಆಶಿಶ್ ಮಿಶ್ರಾ ತಮ್ಮ ಥಾರ್ ಜೀಪ್ ಅನ್ನು ರೈತರ ಮೇಲೆ ಏರಿಸಿದ್ದಾರೆ ಎಂದು ಆರೋಪಿಸಲಾಗಿದೆ. ಇದರಿಂದ 4 ರೈತರು ಸಾವನ್ನಪ್ಪಿದ್ದಾರೆ. ಈ ಹಿಂಸಾಚಾರದ ನಂತರ 3 ಬಿಜೆಪಿ ಕಾರ್ಯಕರ್ತರು ಮತ್ತು 1 ಪತ್ರಕರ್ತ ಸಾವನ್ನಪ್ಪಿದರು

Latest Videos
Follow Us:
Download App:
  • android
  • ios