ನವದೆಹಲಿ(ಅ.28): ಕೇಂದ್ರ ಸಚಿವೆ ಸ್ಮೃತಿ ಇರಾನಿ ಅವರಿಗೆ ಕೊರೋನಾ ಪಾಸಿಟಿವ್ ಇರೋದು ದೃಢಪಟ್ಟಿದೆ. ಬಿಹಾರ ಚುನಾವಣೆಯ ಭಾಗವಾಗಿ ಸಕ್ರಿಯವಾಗಿ ಪ್ರಚಾರ ಮಾಡಿದ್ದ ಸಚಿವೆಗೆ ಸೋಂಕು ತಗುಲಿದೆ.

ಒಂದು ವಿಚಾರ ತಿಳಿಸುವಾಗ ಪದಗಳಿಗಾಗಿ ಹುಡುಕಾಡಿದ್ದು ಬಹಳ ಕಮ್ಮಿ. ಇಲ್ಲಿ ಇದನ್ನು ಸರಳವಾಗಿ ಹೇಳುತ್ತಿದ್ದೇನೆ. ನನಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ನನ್ನ ಜೊತೆಗಿದ್ದವರು ಸೆಲ್ಫ್‌ ಕ್ವಾರೆಂಟೈನ್ ಆಗಿ. ಆದಷ್ಟು ಬೇಗ ಕೊರೋನಾ ಟೆಸ್ಟ್ ಮಾಡಿಸಿಕೊಳ್ಳಿ ಎಂದು ಸಚಿವೆ ಟ್ವೀಟ್ ಮಾಡಿದ್ದಾರೆ.

ಕಾರಿನಲ್ಲಿ ಒಬ್ಬರೇ ಇದ್ದಾಗ ಮಾಸ್ಕ್ ಧರಿಸಬೇಕಿಲ್ಲ: ಸುಧಾಕರ್ ಸ್ಪಷ್ಟನೆ

44 ವರ್ಷದ ನಟಿ ನ್ಯಾಷನಲ್ ಡೆಮಾಕ್ರೆಟಿಕ್ ಮೈತ್ರಿ ಸರ್ಕಾರದ ಪರವಾಗಿ ಬಿಹಾರದಲ್ಲಿ ಪ್ರಚಾರ ನಡೆಸುತ್ತಿದ್ದರು. ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಬುಧವಾರ 80 ಲಕ್ಷ ತಲುಪಿದೆ. 43,893 ಹೊಸ ಪ್ರಕರಣಗಳು ದಾಖಲಾಗಿವೆ.

ಗೃಹ ಸಚಿವ ಅಮಿತ್‌ ಶಾ, ಸಾರಿಗೆ ಸಚಿವ ನಿತಿನಗ ಗಡ್ಕರಿ, ಇಂಧನ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೂ ಕೊರೋನಾ ಪಾಟಿಸಿವ್ ಕಂಡು ಬಂದಿತ್ತು.