ನವದೆಹಲಿ(ಅ.28): ಬಿಹಾರ ಚುನಾವಣಾ ಪ್ರಚಾರದಲ್ಲಿ ತೊಡಗಿಸಿಕೊಂಡಿದ್ದ ಕೇಂದ್ರ ಸಚಿವೆ ಸ್ಮೃತಿ ಇರಾನಿಗೆ ಕೊರೋನಾ ವಕ್ಕರಿಸಿದೆ. ಬುಧವಾರ(ಅ.28) ರಂದು ನಡೆಸಿದ ಪರೀಕ್ಷೆಯಲ್ಲಿ  44 ವರ್ಷದ ಸ್ಮೃತಿ ಇರಾನಿಗೆ ಕೊರೋನಾ ಪಾಸಿಟೀವ್ ಬಂದಿರುವುದು ದೃಢಪಪಟ್ಟಿದೆ.

ಸ್ಮೃತಿ ಇರಾನಿ ಟ್ವಿಟರ್ ಮೂಲಕ ಕೊರೋನಾ ವಕ್ಕರಿಸಿರುವುದನ್ನು ಖಚಿತಪಡಿಸಿದ್ದಾರೆ.  ಯಾವುದೇ ಪ್ರಕಟಣೆ ಮಾಡುವಾಗ ಪದಗಳನ್ನು ಹುಡುಕುವ ಪರಿಪಾಠ ನನಗೆ ಅಪರೂಪ. ಆದರೆ ಇದೀಗ ಪ್ರಕಟಣೆಯನ್ನು ಸರಳವಾಗಿಸುತ್ತಿದ್ದೇನೆ. ನನಗೆ ಕೊರೋನಾ ವೈರಸ್ ದೃಢಪಟ್ಟಿದೆ. ನನ್ನ ಸಂಪರ್ಕಕ್ಕೆ ಬಂದವರೆಲ್ಲಾ ಕೊರೋನಾ ಟೆಸ್ಟ್ ಪರೀಕ್ಷೆ ಮಾಡಿಸಿಕೊಳ್ಳಿ ಎಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತಿದ್ದೇನೆ ಎಂದು ಟ್ವಿಟರ್ ಮೂಲಕ ಸ್ಮೃತಿ ಇರಾನಿ ಮನವಿ ಮಾಡಿದ್ದಾರೆ.

 

ಭಾರತದಲ್ಲಿ ಕೊರೋನಾ ವೈರಸ್ ಸೋಂಕು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಕಳೆದ 24 ಗಂಟೆಯಲ್ಲಿ 43,893 ಹೊಸ ಪ್ರಕರಣಗಳು ಪತ್ತೆಯಾಗಿದೆ. ಇನ್ನೂ 508  ಮಂದಿ ಬಲಿಯಾಗಿದ್ದಾರೆ. ಇನ್ನೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 80 ಲಕ್ಷ ದಾಟಿದೆ. ಇದೀಗ ಭಾರತ ಸೋಂಕಿತರ ಸಂಖ್ಯೆಯಲ್ಲಿ ಅಮೇರಿಕ ಹಿಂದಿಕ್ಕುವ ಸೂಚನೆ ನೀಡುತ್ತಿದೆ. ಅಮೇರಿಕದಲ್ಲಿ ಸದ್ಯ 87 ಲಕ್ಷಕ್ಕೂ ಹೆಚ್ಚು ಸೋಂಕಿತರನ್ನು ಹೊಂದಿದೆ.