ನವದೆಹಲಿ (ಏ. 20) ಹಿಂದೆ  ಆಶಾಕಾರ್ಯಕರ್ತರ ಮೇಲೆ ಹಲ್ಲೆ ನಡೆದಾಗಲೇ ಇನ್ನು ಕಠಿಣ ಕ್ರಮಗಳು ಕೈಗೊಳ್ಳಬೇಕಾಗಿತ್ತು ಎಂದು ಕೇಂದ್ರ ಸಚಿವ  ಡಿ.ವಿ.ಸದಾನಂದ ಗೌಡ ಹೇಳಿದ್ದಾರೆ.

ಕರೋನಾ ಹರಡಲೇ ಬೇಕು ಅನ್ನೋ ರೀತಿ ಅವರು ಕೆಲಸ ಮಾಡಲಾಗುತ್ತಿದೆ. ಇದು ಪಕ್ಕಾ ಪೂರ್ವ ಯೋಜಿತ ಕೃತ್ಯ.  ಇದನ್ನು ಹೀಗೆ ಬಿಟ್ಟರೇ  ಕರೋನಾ ಮಾದರಿಯಲ್ಲಿ ಇಂಥ ಕೃತ್ಯಗಳು ಮುಂದುವರೆಯುತ್ತವೆ. ಪದೇ ಪದೇ ಜಾಗೃತಿ ಇಲ್ಲ ಅನ್ನೋದು ನಾಟಕ ಎಂದು ಹೇಳಿದ್ದಾರೆ.

ಬಾಸ್ ರಿಂದಲೇ ಕ್ಲಾಸ್; ಜಮೀರ್ ಕತೆ ನೋಡ್ರಪ್ಪಾ

ಪಾದರಾಯನಪುರ ಘಟನೆ ಹಿಂದೆ  ಜಮೀರ್ ಅಹಮದ್ ಇದರಿಂದ ಇದ್ದಾರೆ ಎಂದು ಸದಾನಂದ ಗೌಡ ನೇರವಾಗಿ ಆರೋಪ ಮಾಡಿದ್ದಾರೆ.  ರಾಜೀನಾಮೆ ಕೊಡೋರಿ ಅನ್ನೋದು ಗೌರವ ಇದ್ದವರಿಗೆ ಮಾತ್ರ ಎಂದು ಸದಾನಂದ ಗೌಡ ಜಮೀರ್ ಗೆ ಟಾಂಗ್ ನೀಡಿದ್ದಾರೆ.

 ಶಕುನಿ ಬುದ್ದಿ, ಕುಠಿಲ ನೀತಿ ಎಂಬುದು ಅವರ ಮಾತುಗಳು, ಅವರ ಹೇಳಿಕೆಗಳೇ ಗೊತ್ತಾಗುತ್ತಿವೆ ಎಂದು  ಬೆಂಗಳೂರಿನ ಪಾದರಾಯನಪುರದಲ್ಲಿ ಪೊಲೀಸ್ ಸಿಬ್ಬಂದಿ ಮತ್ತು ಆರೋಗ್ಯ ಸಿಬ್ಬಂದಿ ಮೇಲೆ ಹಲ್ಲೆ ನಡೆದ ಪ್ರಕರಣಕ್ಕೆ ಪ್ರತಿಕ್ರಿಯೆ ನೀಡಿದರು.