ಇರುಮುಡಿ ಹೊತ್ತು ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆದ ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್!
ಕೇಂದ್ರ ಸಚಿವ ರಾಜೀವ್ ಚಂದ್ರಶೇಖರ್ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಎಲ್ಲಾ ಭಕ್ತರಂತೆ ಕೇಂದ್ರ ಸಚಿವರು ಇರುಮುಡಿ ಹೊತ್ತುಕೊಂಡು ಪಾದಯಾತ್ರೆ ಮೂಲಕ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಇದು ರಾಜೀವ್ ಚಂದ್ರಶೇಖರ್ ಅವರ 26ನೇ ಶಬರಿಮಲೆ ದರ್ಶನವಾಗಿದೆ.
ನವದೆಹಲಿ(ಆ.18): ಶಬರಿಮಲೆ ಅಯ್ಯಪ್ಪನ ಸನ್ನಿಧಾನ ಭಕ್ತರ ದರ್ಶನಕ್ಕೆ ತೆರೆದುಕೊಂಡಿದೆ. ದೇಶ ವಿದೇಶಗಳಿಂದ ಭಕ್ತಿಭಾವದಿಂದ ಆಗಮಿಸುವ ಭಕ್ತರು ಅಯ್ಯಪ್ಪನ ದರ್ಶನ ಪಡೆದು ಪುನೀತರಾಗುತ್ತಾರೆ. ಇದೀಗ ಕೇಂದ್ರ ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಖಾತೆ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಪಾದಯಾತ್ರೆ ಮೂಲಕ ಶಬರಿಮಲೆ ಅಯ್ಯಪ್ಪನ ದರ್ಶನ ಪಡೆದಿದ್ದಾರೆ. ಬೆಂಗಳೂರಿನ ಅಯ್ಯಪ್ಪ ದೇವಸ್ಥಾನದಿಂದ ಇರುಮುಡಿಕಟ್ಟು ತುಂಬಿಕೊಂಡು ಕೇರಳದ ಪಟ್ಟಣಂತಿಟ್ಟಗೆ ತೆರಳಿದ ಸಚಿವರು, ಯಾತ್ರಾರ್ಥಿಗಳೊಂದಿಗೆ ಪಾದಯಾತ್ರೆ ಆರಂಭಿಸಿದ್ದಾರೆ. ಇಂದು ಬೆಳಗ್ಗೆ ಪಂಜಾಬದಿಂದ ಇರುಮುಡಿ ಹೊತ್ತುಕೊಂಡು ಪಾದಯಾತ್ರೆ ಆರಂಭಿಸಿದ ರಾಜೀವ್ ಚಂದ್ರಶೇಖರ್ ಒಂದೂವರೆ ಗಂಟೆಯಲ್ಲಿ ಅಯ್ಯಪ್ಪನ ಸನ್ನಿಧಾನ ತಲುಪಿದ್ದಾರೆ. ಅಯ್ಯಪ್ಪನ ದರ್ಶನ ಪಡೆದ ರಾಜೀವ್ ಚಂದ್ರಶೇಕರ್ ಬಳಿಕ ಪೂಜೆ ಸಲ್ಲಿಸಿದ್ದಾರೆ.
ಅಯ್ಯಪ್ಪನ ದರ್ಶನ ಕುರಿತು ರಾಜೀವ್ ಚಂದ್ರಶೇಕರ್ ಟ್ವಿಟರ್ ಮೂಲಕ ಸಂತಸ ಹಂಚಿಕೊಂಡಿದ್ದಾರೆ. ಪಂಬಾದಿಂದ ರಾಜೀವ್ ಚಂದ್ರಶೇಕರ್ ಇತರ ಭಕ್ತರಂತೆ ಇರುಮುಡಿ ಹೊತ್ತುಕೊಂಡು ಪಾದಯಾತ್ರೆ ನಡೆಸಿದ್ದಾರೆ. ಪಾದಯಾತ್ರೆ ವೇಳೆ ಇತರ ಯಾತ್ರಾರ್ಥಿಗಳ ಸಚಿವರ ಜೊತೆ ಫೋಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಕೇಂದ್ರ ಸಚಿವರಾದ ಬಳಿಕ ರಾಜೀವ್ ಚಂದ್ರಶೇಖರ್ ಇದೇ ಮೊದಲ ಬಾರಿಗೆ ಅಯ್ಯಪ್ಪನ ದರ್ಶನ ಮಾಡಿದ್ದಾರೆ. ಆದರೆ ಇದು ರಾಜೀವ್ ಚಂದ್ರಶೇಖರ್ ಅವರ 26ನೇ ಅಯ್ಯಪ್ಪನ ದರ್ಶನವಾಗಿದೆ ಅನ್ನೋದು ವಿಶೇಷ.
ಎಸಿಬಿ ರದ್ದು ಮಾಡಿದ ಕೋರ್ಟ್, ಸಿದ್ಧರಾಮಯ್ಯ ಜನರ ಕ್ಷಮೆ ಕೇಳಲಿ ಎಂದ ರಾಜೀವ್ ಚಂದ್ರಶೇಖರ್!
ಅಯ್ಯಪ್ಪನ ದರ್ಶನ ಪಡೆದ ರಾಜೀವ್ ಚಂದ್ರಶೇಖರ್ ಸಂಜೆ ಕೊಚ್ಚಿ ತಲುಪಿ ನೆಡುಂಬಶ್ಶೇರಿ ವಿಮಾನ ನಿಲ್ದಾಣದಿಂದ ದೆಹಲಿಗೆ ಮರಳಿದ್ದಾರೆ. ಬಳಿಕ ತಮ್ಮ ಅಯ್ಯಪ್ಪನ ದರ್ಶನ ಹಾಗೂ ತಮ್ಮ ಪಾದಾಯಾತ್ರೆ ಕುರಿತು ಮಾಹಿತಿಯೊಂದನ್ನು ಹಂಚಿಕೊಂಡಿದ್ದಾರೆ. 2016ರಿಂದ 2022ರ ವರೆಗಿನ ನಾಲ್ಕು ಬಾರಿ ಅಯ್ಯಪ್ಪನ ಸನ್ನಿಧಾನವನ್ನು ಪಾದಯಾತ್ರೆ ಮೂಲಕ ದರ್ಶಿಸಿದ್ದಾರೆ. ಈ ಬಾರಿ ಸೇರಿದಂತೆ ಕಳೆದ 4 ಬಾರಿ ಪಾದಯಾತ್ರೆ ಮೂಲಕ ಅಯ್ಯಪ್ಪ ಸನ್ನಿಧಾನ ತಲುಪಲು ತೆಗೆದುಕೊಂಡ ಸಮಯವನ್ನು ಹಂಚಿಕೊಂಡಿದ್ದಾರೆ. 2016ರಲ್ಲಿ ರಾಜೀವ್ ಚಂದ್ರಶೇಕರ್ ಪಂಬಾದಿಂದ ಅಯ್ಯಪ್ಪನ ದೇಗುಲಕ್ಕೆ ಪಾದಯಾತ್ರೆ ಮೂಲಕ 1 ಗಂಟೆ 16 ನಿಮಿಷದಲ್ಲಿ ತಲುಪಿದ್ದಾರೆ. 2017ರಲ್ಲಿ 1 ಗಂಟೆ 4 ನಿಮಿಷದಲ್ಲಿ ತಲುಪಿದ್ದರೆ, 2019ರಲ್ಲಿ 1 ಗಂಟೆ 6 ನಿಮಿಷದಲ್ಲಿ ತಲುಪಿದ್ದಾರೆ. 2022ರಲ್ಲಿ ಅಂದರೆ ಈ ಬಾರಿ 1 ಗಂಟೆ 30 ನಿಮಿಷದಲ್ಲಿ ತಲುಪಿದ್ದಾರೆ.
ಸೆಮಿ ಕಂಡಕ್ಟರ್ ಫ್ಯಾಬ್‌ಪ್ಲಾಂಟ್ ಆರಂಭಿಸಲು ಮನವಿ
ಕರ್ನಾಟಕದಲ್ಲಿ ಸ್ಥಾಪಿಸಲು ಉದ್ದೇಶಿಸಿರುವ ಸೆಮಿ ಕಂಡಕ್ಟರ್ ಫ್ಯಾಪ್ ಪ್ಲಾಂಟ್ ಅನ್ನು ಮೈಸೂರಿನಲ್ಲಿ ಆರಂಭಿಸುವಂತೆ ಸಂಸದ ಪ್ರತಾಪ ಸಿಂಹ, ಕೇಂದ್ರ ಮಾಹಿತಿ ತಂತ್ರಜ್ಞಾನ ಮತ್ತು ಕೌಶಲ್ಯಾಭಿವೃದ್ಧಿ ರಾಜ್ಯ ಸಚಿವ ರಾಜೀವ್ ಚಂದ್ರಶೇಖರ್ ಅವರಿಗೆ ಮನವಿ ಮಾಡಿದ್ದಾರೆ. ಇಸ್ರೇಲ್ ಮೂಲದ ಎಎಸ್‌ಎಂಸಿ ಅನಲಾಗ್ ಫ್ಯಾಬ್ ಕಂಪನಿಯು ಕರ್ನಾಟಕದಲ್ಲಿ ಆರಂಭಿಸುತ್ತಿರುವ ಸೆಮಿ ಕಂಡಕ್ಟರ್ ಫ್ಯಾಬ್ ಪ್ಲಾಂಟ್ ಅನ್ನು ಮೈಸೂರಿನ ಬಳಿ ಸ್ಥಾಪಿಸುವಂತೆ ರಾಜ್ಯ ಸರ್ಕಾರಕ್ಕೆ ಸೂಚಿಸುವಂತೆ ಸಂಸದ ಪ್ರತಾಪ ಸಿಂಹ ಕೋರಿದ್ದಾರೆ. ಸುಮಾರು 22,900 ಕೋಟಿ ವೆಚ್ಚದಲ್ಲಿ ನಿರ್ಮಿಸುತ್ತಿರುವ ಈ ಪ್ಲಾಂಟ್ ಅನ್ನು ಸುಮಾರು 150 ಎಕರೆ ಪ್ರದೇಶದಲ್ಲಿ ಸ್ಥಾಪಿಸಲಾಗುತ್ತಿದ್ದು, ಇದಕ್ಕೆ ಅಗತ್ಯವಿರುವ ಭೂಮಿ ಸಿಗಲಿದೆ. ಅಲ್ಲದೆ ಈ ಭಾಗದಲ್ಲಿ ಹೆಚ್ಚು ಉದ್ಯೋಗಾವಕಾಶ ದೊರಕಿದಂತೆ ಆಗುತ್ತದೆ. ಸೆಮಿ ಕಂಡಕ್ಟರ್ ಆರಂಭಿಸುವುದರಿಂದ ಈ ಭಾಗದ ಕೈಗಾರಿಕಾಭಿವೃದ್ಧಿಗೆ ಹೊಸ ಆಯಾಮ ನೀಡಿದಂತೆ ಆಗುತ್ತದೆ ಎಂದು ಅವರು ಕೋರಿದ್ದಾರೆ.
ಸದ್ಯದಲ್ಲಿಯೇ ಮೈಸೂರು- ಬೆಂಗಳೂರು ನಡುವೆ ಹತ್ತು ಪಥದ ಹೆದ್ದಾರಿ ನಿರ್ಮಾಣವಾಗಲಿದೆ, ವಿಮಾನ ನಿಲ್ದಾಣ ವಿಸ್ತರಣೆ ಆಗಲಿದೆ, ರೈಲ್ವೆ ನಿಲ್ದಾಣ ವಿಸ್ತರಣೆ, ಗೂಡ್‌್ಸ ಟರ್ಮಿನಲ್ ಸ್ಥಾಪನೆ ಸೇರಿದಂತೆ ಹಲವು ಅಭಿವೃದ್ಧಿ ಕಾರ್ಯ ನಡೆಯುತ್ತಿರುವುದರಿಂದ ಈ ಭಾಗದಲ್ಲಿ ಸೆಮಿಕಂಡಕ್ಟರ್ ಫ್ಯಾಬ್ ಆರಂಭಿಸುವುದು ಉತ್ತಮ ಎಂದು ಅವರು ಕೋರಿದ್ದಾರೆ.