ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಹಾಗೆಯೇ ಪರಸ್ಪರ ಲಾಭದಾಯಕ ಒಪ್ಪಂದ, ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

ನವದೆಹಲಿ (ಜೂನ್ 15, 2023): ಭಾರತ ಮತ್ತು ಬ್ರೆಜಿಲ್‌ ನಡುವಿನ ಸಂಬಂಧಕ್ಕೆ 75 ವರ್ಷಗಳಾಗುತ್ತಿರುವ ಬೆನ್ನಲ್ಲೇ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಅವರ ನೇತೃತ್ವದ 10 ಜನರ ನಿಯೋಗ 3 ದಿನಗಳ ಬ್ರೆಜಿಲ್‌ ಭೇಟಿ ಕೈಗೊಂಡಿತ್ತು. ಜೂನ್‌ 11ರಿಂದ 13ರವರೆಗೆ ವಿವಿಧ ಒಪ್ಪಂದಗಳು ಹಾಗೂ ದ್ವಿಪಕ್ಷೀಯ ಕಾರ್ಯಕ್ರಮಗಳ ಬಗ್ಗೆ ಈ ನಿಯೋಗ ಚರ್ಚೆ ನಡೆಸಿದೆ.

ಜಪಾನಿನ ಹಿರೋಶಿಮಾದಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಬ್ರೆಜಿಲ್‌ ಅಧ್ಯಕ್ಷ ಲುಯಿಜ್‌ ಇನ್ಯಾಶಿಯೋ ಲುಲಾ ಡಿ ಸಿಲ್ವಾ ನಡುವೆ ನಡೆದ ಮಾತುಕತೆಯ ಬಳಿಕ ಕೇಂದ್ರ ಸಂಸದೀಯ, ಕಲ್ಲಿದ್ದಲು ಮತ್ತು ಗಣಿ ಸಚಿವ ಪ್ರಲ್ಹಾದ್‌ ಜೋಶಿ ನೇತೃತ್ವದ ನಿಯೋಗ ಬ್ರೆಜಿಲ್‌ ಪ್ರವಾಸ ಕೈಗೊಂಡಿತ್ತು. ಜೂನ್ 13ರಂದು ಈ ನಿಯೋಗ ಬ್ರೆಜಿಲ್‌ ಮೇಲ್ಮನೆಯ ಅಧ್ಯಕ್ಷ ರೋಡ್ರೊಗೋ ಒಟಾವಿಯೋ ಸೋರೆಸ್‌ ಜೊತೆ ಸಭೆ ನಡೆಸಿದ ನಿಯೋಗ ಉಭಯ ದೇಶಗಳ ನಡುವಿನ ದ್ವೀಪಕ್ಷೀಯ ಒಪ್ಪಂದಗಳ ಕುರಿತಾಗಿ ಚರ್ಚೆ ನಡೆಸಿತು. 

ಇದನ್ನು ಓದಿ: ರೈಲು ಪ್ರಯಾಣಿಕರಿಗೆ ಗುಡ್‌ ನ್ಯೂಸ್‌: ಬೆಂಗಳೂರು - ಹುಬ್ಬಳ್ಳಿ ನಡುವೆ ಮತ್ತೆರಡು ಹೊಸ ರೈಲು ಸಂಚಾರ

Scroll to load tweet…

ಇದೇ ವೇಳೆ ಕಳೆದ 2 ವರ್ಷಗಳಲ್ಲಿ ಉಭಯ ದೇಶಗಳ ನಡುವಿನ ವ್ಯಾಪಾರ ಹೆಚ್ಚಾಗಿರುವುದಕ್ಕೆ ಮೆಚ್ಚುಗೆ ವ್ಯಕ್ತಪಡಿಸಲಾಯಿತು. ಹಾಗೆಯೇ ಪರಸ್ಪರ ಲಾಭದಾಯಕ ಒಪ್ಪಂದ, ಆರ್ಥಿಕ ಬೆಳವಣಿಗೆಗಳ ಕುರಿತು ಚರ್ಚಿಸಲಾಯಿತು.

ಈ ಬಗ್ಗೆ ಟ್ವೀಟ್‌ ಮಾಡಿರುವ ಪ್ರಲ್ಹಾದ್‌ ಜೋಶಿ, ಬ್ರೆಜಿಲಿಯನ್‌ ಕಾಂಗ್ರೆಸ್‌ ಉಪಾಧ್ಯಕ್ಷರಾದ ಮಾರ್ಕೋಸ್‌ ಪಿರೇರಾ, ಫೆಡರಲ್‌ ಡೆಪ್ಯುಟಿ ವಿನಿಷಿಯಸ್‌ ಕರ್ವಾಲೋ ಅವರೊಂದಿಗೆ ಭಾರತ -ಬ್ರೆಜಿಲ್‌ ದ್ವಿಪಕ್ಷೀಯ ಸಭೆ ನಡೆಸಿ ಸಾಮಾಜಿಕ, ಆರ್ಥಿಕ ಸುಧಾರಣೆಯ ಬಗ್ಗೆ ಚರ್ಚಿಸಲಾಯಿತು. ಅವರನ್ನು ಭಾರತಕ್ಕೆ ಆಹ್ವಾನಿಸಲಾಯಿತು ಎಂದು ಹೇಳಿದ್ದಾರೆ.

Scroll to load tweet…

ಇದನ್ನೂ ಓದಿ: ಎಚ್‌ಡಿಕೆಗೆ ಸೋಲಿನ ಹತಾಶೆ, ಸ್ಥಿಮಿತ ಇಲ್ಲ: ಬ್ರಾಹ್ಮಣ ಸಿಎಂ ಹೇಳಿಕೆಗೆ ಪ್ರಹ್ಲಾದ್‌ ಜೋಶಿ ಮೊದಲ ಪ್ರತಿಕ್ರಿಯೆ..