Asianet Suvarna News Asianet Suvarna News

ಕಾರ್‌ಗಳಲ್ಲಿ 6 ಏರ್‌ ಬ್ಯಾಗ್‌ ಪ್ರಚಾರ, ಅಕ್ಷಯ್‌ ಕುಮಾರ್‌ರನ್ನ ಹೊಗಳಿದ ನಿತಿನ್‌ ಗಡ್ಕರಿ!

ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರು ತಮ್ಮ ಅಧಿಕೃತ ಟ್ವಿಟ್ಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿರುವ ವಿಡಿಯೋ ಜಾಹೀರಾತಿನಲ್ಲಿ ನಟ ಅಕ್ಷಯ್ ಕುಮಾರ್ ಅವರು ರಸ್ತೆ ಸುರಕ್ಷತೆ ಮತ್ತು ಏರ್‌ಬ್ಯಾಗ್‌ಗಳ ಪ್ರಾಮುಖ್ಯತೆಯನ್ನು ಪ್ರಚಾರ ಮಾಡುತ್ತಿದ್ದಾರೆ. ಈ ಕುರಿತಾಗಿ ಬಾಲಿವುಡ್‌ ನಟನನ್ನು ಶ್ಲಾಘನೆ ಮಾಡಿದ್ದಾರೆ.
 

Union Minister Nitin Gadkari praises Akshay Kumar for promoting 6 airbags in cars and supporting road safety san
Author
First Published Sep 12, 2022, 10:53 AM IST

ಮುಂಬೈ (ಸೆ.12): ಕಾರ್‌ಗಳಲ್ಲಿ ಸೀಟ್‌ ಬೆಲ್ಟ್‌ ಹಾಗೂ 6 ಏರ್‌ಬ್ಯಾಗ್‌ಗಳ ಮಹತ್ವವನ್ನು ಒತ್ತಿ ಹೇಳುವ ಬಾಲಿವುಡ್‌ ಸ್ಟಾರ್‌ ಅಕ್ಷಯ್‌ ಕುಮಾರ್‌ ಅವರ ಟಿವಿ ಜಾಹೀರಾತನ್ನು ರಸ್ತೆ ಸಾರಿಗೆ ಮತ್ತು ಹೆದ್ದಾರಿಗಳ ಸಚಿವ ನಿತಿನ್ ಗಡ್ಕರಿ ತಮ್ಮ ಟ್ವಿಟರ್‌ ಪುಟದಲ್ಲಿ ಹಂಚಿಕೊಂಡಿದ್ದಾರೆ. ಈ ವಿಡಿಯೋದಲ್ಲಿ ರಸ್ತೆ ಸುರಕ್ಷತೆ ಬಗ್ಗೆ ಮೌಲ್ಯವನ್ನು ಒತ್ತಿ ಹೇಳಲಾಗಿದೆ. ಪ್ರತಿ ವಾಹನದಲ್ಲಿ ಆರು ಏರ್‌ಬ್ಯಾಗ್‌ಗಳ ಅಗತ್ಯವನ್ನು ಒತ್ತಿಹೇಳುವ ಅಕ್ಷಯ್ ಕುಮಾರ್ ಕಾರುಗಳಲ್ಲಿ ಏರ್‌ಬ್ಯಾಗ್‌ಗಳ ಮಹತ್ವವನ್ನು ಚರ್ಚಿಸುತ್ತಿರುವ ವೀಡಿಯೊವನ್ನು ಹೊಂದಿದೆ. ರಸ್ತೆ ಸುರಕ್ಷತೆಯನ್ನು ಬೆಂಬಲಿಸುವ ಹಲವಾರು ಜಾಹೀರಾತುಗಳಲ್ಲಿ ಬಾಲಿವುಡ್ ನಟ ಈಗಾಗಲೇ ಕಾಣಿಸಿಕೊಂಡಿದ್ದು, ಈ ಸರಣಿಯಲ್ಲಿ ಇದು ಅವರ ಹೊಸ ಎರಡು ಜಾಹೀರಾತುಗಳಾಗಿವೆ. ಮದುವೆಯ ಬಳಿಕ ಮಗಳನ್ನು ಗಂಡನ ಮನೆಗೆ ಕಳಿಸುವ ವೇಳೆ ತಂದೆ ಅಳುತ್ತಿರುತ್ತಾರೆ. ಈ ವೇಳೆ ಪೊಲೀಸ್‌ ರೂಪದಲ್ಲಿ ಬರುವ ಅಕ್ಷತ್‌ ಕುಮಾರ್‌, ಇಂಥ ಕಾರ್‌ನಲ್ಲಿ ಮಗಳನ್ನು ಕಳಿಸುವ ಸಮಯದಲ್ಲಿ ನೀವು ಅಳುತ್ತಿರುವುದು ಸರಿಯಾಗಿಯೇ ಇದೆ ಎಂದು ಹೇಳುತ್ತಾರೆ. ಅದಕ್ಕೆ ಆ ವ್ಯಕ್ತಿ ಕಾರಿಗೆ ಏನಾಗಿದೆ, ಸನ್‌ರೂಫ್, ಅತ್ಯಾಧುನಿಕ ಮ್ಯೂಸಿಕ್ ಸಿಸ್ಟಂ ಸೇರಿದಂತೆ ಎಲ್ಲಾ ಆಧುನಿಕ ಸೌಲಭ್ಯಗಳನ್ನು ಕಾರ್‌ನಲ್ಲಿ ಅಳವಡಿಸಲಾಗಿದೆ ಎಂದು ಹೇಳುತ್ತಾರೆ. ಆದರೆ, ಅಕ್ಷಯ್‌ ಕುಮಾರ್‌ ಈ ಕಾರ್‌ನಲ್ಲಿ ಬರೀ ಎರಡು ಏರ್‌ ಬ್ಯಾಗ್‌ ಇದೆ. ಹಾಗೇನಾದರೂ ಆಕ್ಸಿಡೆಂಟ್‌ ಆದಲ್ಲಿ ಮುಂದಿನವರು ಬದುಕುತ್ತಾರೆ. ಹಿಂದಿನವರಿಗೆ ಈ ಭಾಗ್ಯವಿಲ್ಲ ಎನ್ನುವ ಮೂಲಕ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ಸುರಕ್ಷತೆಯ ಪ್ರಯೋಜನಗಳ ಬಗ್ಗೆ ಮಾತನಾಡಿದ್ದಾರೆ.

"ದೇಶಾದ್ಯಂತ ರಾಷ್ಟ್ರೀಯ ರಸ್ತೆ ಸುರಕ್ಷತಾ (Road Safety) ಅಭಿಯಾನವನ್ನು ಬೆಂಬಲಿಸಿದ್ದಕ್ಕಾಗಿ ಧನ್ಯವಾದಗಳು, ಅಕ್ಷಯ್ ಕುಮಾರ್ (Akshay Kumar). ರಸ್ತೆ ಸುರಕ್ಷತೆ ವಿಷಯಗಳ ಬಗ್ಗೆ ಜಾಗೃತಿ ಮೂಡಿಸುವಲ್ಲಿ ನಿಮ್ಮ ಪ್ರಯತ್ನಗಳು ನಿಜವಾಗಿಯೂ ಶ್ಲಾಘನೀಯ. ಜಾಗೃತಿ ಮತ್ತು ಸಾರ್ವಜನಿಕ ಸಹಭಾಗಿತ್ವದೊಂದಿಗೆ ಭಾರತದಲ್ಲಿ ರಸ್ತೆ ಅಪಘಾತಗಳನ್ನು ಕಡಿಮೆ ಮಾಡಲು ನಾವು ಬದ್ಧರಾಗಿದ್ದೇವೆ" ಎಂದು ನಿತಿನ್‌ ಗಡ್ಕರಿ ಟ್ವಿಟರ್‌ನಲ್ಲಿ ಬರೆದುಕೊಂಡಿದ್ದಾರೆ. ಸಚಿವರ ಟ್ವಿಟರ್ ಹ್ಯಾಂಡಲ್ ರಸ್ತೆ ಸುರಕ್ಷತೆಯ ಮಹತ್ವವನ್ನು ವಿವರಿಸುವ ಮೂರು ವೀಡಿಯೊಗಳನ್ನು ಬಿಡುಗಡೆ ಮಾಡಿದೆ.ಅನೇಕ ಸಂದರ್ಭಗಳಲ್ಲಿ, ಕೇಂದ್ರ ಸಚಿವ ನಿತಿನ್ ಗಡ್ಕರಿ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳ ಮಹತ್ವದ ಬಗ್ಗೆ ಮಾತನಾಡಿದ್ದಾರೆ. ಇತ್ತೀಚೆಗೆ, ಎಲ್ಲಾ ಕಾರುಗಳಲ್ಲಿ ಆರು ಏರ್‌ಬ್ಯಾಗ್‌ಗಳನ್ನು (Air Bags) ಕಡ್ಡಾಯಗೊಳಿಸುವ ನಿಟ್ಟಿನಲ್ಲಿ ಸಚಿವಾಲಯವು ಕಾರ್ಯನಿರ್ವಹಿಸುತ್ತಿದೆ ಎಂದು ಗಡ್ಕರಿ ಹೇಳಿದ್ದಾರೆ.

ಹೆದ್ದಾರಿ ಸುರಕ್ಷತೆಗೆ ಕೇಂದ್ರ ಬದ್ಧ, ಕಾರುಗಳಲ್ಲಿ 6 ಏರ್‌ಬ್ಯಾಗ್ ಕಡ್ಡಾಯ: ಶೀಘ್ರದಲ್ಲೇ ಕಾನೂನು: ನಿತಿನ್‌ ಗಡ್ಕರಿ

ಕಾರುಗಳ ತಯಾರಕರು ಇದೇ ಕಾರುಗಳನ್ನು (Car) ರಫ್ತು ಮಾಡುವಾಗ ಆರು ಏರ್‌ಬ್ಯಾಗ್‌ಗಳನ್ನು ಕಡ್ಡಾಯವಾಗಿ ಹಾಕುತ್ತಾರೆ, ಹಾಗಾದರೆ ನೀವು ಭಾರತೀಯ ಕಾರುಗಳಿಗೆ ಕೇವಲ 4 ಏರ್‌ಬ್ಯಾಗ್‌ಗಳನ್ನು ಮಾತ್ರ ಏಕೆ ಹಾಕುತ್ತೀರಿ? ನಮ್ಮ ಜೀವನಕ್ಕೆ ಯಾವುದೇ ಮೌಲ್ಯವಿಲ್ಲವೇ? ಏರ್‌ಬ್ಯಾಗ್‌ನ ಬೆಲೆ ಕೇವಲ 900 ರೂ, ಮತ್ತು ಸಂಖ್ಯೆ ಹೆಚ್ಚಾದಾಗ, ವೆಚ್ಚ ಇನ್ನಷ್ಟು ತಗ್ಗುತ್ತದೆ ಎಂದು ಸಚಿವರು ಇತ್ತೀಚೆಗೆ ಹೇಳಿದ್ದರು. ಕಾರುಗಳಲ್ಲಿ ಹಿಂಬದಿ ಸೀಟಿನಲ್ಲಿ ಕುಳಿತುಕೊಳ್ಳುವವರಿಗೆ ಸೀಟ್ ಬೆಲ್ಟ್ (Seat Belt) ಕಡ್ಡಾಯಗೊಳಿಸಲಾಗುವುದು ಎಂದು ಅವರು ಸ್ಪಷ್ಟಪಡಿಸಿದ್ದಾರೆ.

Seat Belt ಹಾಕ್ಕೊಂಡು ಪ್ರಾಣ ಉಳಿಸ್ಕಳಿ..! ಬೆಲ್ಟ್‌ ಹಾಕ್ಕೊಂಡ್ರಷ್ಟೇ ಏರ್‌ಬ್ಯಾಗ್‌ ಓಪನ್‌

ಈ ತಿಂಗಳ ಆರಂಭದಲ್ಲಿ ಟಾಟಾ ಸನ್ಸ್‌ ಮಾಜಿ ಚೇರ್ಮನ್‌ ಸೈರಸ್‌ ಮಿಸ್ತ್ರಿ, ಅಹಮದಾಬಾದ್‌ನಿಂದ ಮುಂಬೈಗೆ ವಾಪಸಾಗುವ ವೇಳೆ ಪಾಲ್ಘರ್‌ನಲ್ಲಿ ನಡೆದ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದರು. ಈ ದುರಂತಕ್ಕೆ ಕಾರಿನ ಓವರ್‌ಸ್ಪೀಡ್‌ ಕಾರಣ ಎಂದು ಹೇಳಲಾಗಿತ್ತು. ಅದರೊಂದಿಗೆ ಹಿಂಬದಿಯಲ್ಲಿ ಕುಳಿತಿದ್ದ ಅವರು ಸೀಟ್‌ ಬೆಲ್ಟ್‌ ಧರಿಸಿರಲಿಲ್ಲ ಎಂದೂ ವರದಿಯಾಗಿತ್ತು. ಇದರ ಬೆನ್ನಲ್ಲಿಯೇ ಕಾರ್‌ಗೆ 6 ಏರ್‌ಬ್ಯಾಗ್‌ಗಳನ್ನು ಕಡ್ಡಾಯ ಮಾಡುವ ಹಿಂಬದಿ ಸವಾರರಿಗೂ ಸೀಟ್‌ ಬೆಲ್ಟ್‌ ಕಡ್ಡಾಯ ಮಾಡುವುದಾಗಿ ನಿತನ್‌ ಗಡ್ಕರಿ ಹೇಳಿದ್ದರು.

Follow Us:
Download App:
  • android
  • ios