ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ ಇನ್ನಿಲ್ಲ. ಬಿಹಾರ ರಾಜಕಾರಣದಲ್ಲಿ ಹೊಸ ದಿಕ್ಕು ಹುಟ್ಟುಹಾಕಿದ್ದ ನಾಯಕ ಇನ್ನು ನೆನಪು ಮಾತ್ರ 

ನವದೆಹಲಿ(ಅ. 08) ಕೇಂದ್ರ ಸಚಿವ ರಾಮ್ ವಿಲಾಸ್ ಪಾಸ್ವಾನ್ (74) ನಿಧನರಾಗಿದ್ದಾರೆ. ಕೇಂದ್ರ ಆಹಾರ ಮತ್ತು ನಾಗರಿಕ ಸರಬರಾಜು ಸಚಚಿವರಾಗಿ ಕಾರ್ಯನಿರ್ವಹಿಸುತ್ತಿದ್ದ ಪಾಸ್ವಾನ್ ಅಗಲಿದ್ದಾರೆ.

ತಂದೆ ಸಾವಿನ ಸುದ್ದಿಯನ್ನು ಪುತ್ರ ಚಿರಾಗ್ ಪಾಸ್ವಾನ್ ಟ್ವಿಟರ್ ನಲ್ಲಿ ತಿಳಿಸಿದ್ದಾರೆ. ಪಾಸ್ವಾನ್ ರ ಲೋಕ ಜನಶಕ್ತಿ ಪಕ್ಷದ (ಎಲ್ಜೆಪಿ) ಎನ್ ಡಿಎ ಮೈತ್ರಿಕೂಟದಲ್ಲಿ ಇತ್ತು. 

ಸುರೇಶ್ ಅಂಗಡಿಗೆ ಕೊನೆಗೂ ಕೂಡಿ ಬರದ ಅದೃಷ್ಟ

ಇತ್ತಿಚೆಗೆ ನವದೆಹಲಿಯ ಆಸ್ಪತ್ರೆಯಲ್ಲಿ ಪಾಸ್ವಾನ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದರು. ಬಿಹಾರ ಚುನಾವಣೆ ಸಹ ಎದುರಿನಲ್ಲಿಯೇ ಇದ್ದು ಪಾಸ್ವಾನ್ ಅಗಲಿಕೆ ಎನ್‌ಡಿಗೆ ಆಘಾತ ನೀಡಿದೆ. ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ್ ಅಂಗಡಿ ಕೆಲ ದಿನಗಳ ಹಿಂದೆ ನಿಧನರಾಗಿದ್ದರು. 

5 ಜುಲೈ 1946 ರಂದು ಜನಿಸಿದ್ದ ಪಾಸ್ವಾನ್ ಆರಂಭದಿಂದಲೂ ಎನ್‌ಡಿಎ ಮೈತ್ರಿಕೂಟದೊಂದಿಗೆ ಇದ್ದವರು. ಅಟಲ್ ಬಿಹಾರಿ ವಾಜಪೇಯಿ ಕಾಲದಲ್ಲಿಯೂ ರಸಗೊಬ್ಬರ, ಗಣಿ ಸೇರಿದಂತೆ ಅನೇಕ ಇಲಾಖೆಗಳ ಜವಾಬ್ದಾರಿ ನಿರ್ವಹಿಸಿದ್ದರು. ಅನೇಕ ದಿನಗಳಿಂದ ಕಾಡುತ್ತಿದ್ದ ಅನಾರೋಗ್ಯ ಕೊನೆಯದಾಗಿ ಅವರನ್ನು ಬಲಿ ತೆಗೆದುಕೊಂಡಿದೆ. 

ಬಿಹಾರದಲ್ಲಿ 243 ವಿಧಾನಸಭಾ ಸ್ಥಾನಗಳಿದ್ದು, ಅಕ್ಟೋಬರ್ 28, ನವೆಂಬರ್ 3, ಮತ್ತು 7ರಂದು ಮೂರು ಹಂತಗಳಲ್ಲಿ ಚುನಾವಣೆ ನಡೆಯಲಿದೆ ಮತ್ತು ಮತ ಎಣಿಕೆ ನವೆಂಬರ್ 10ಕ್ಕೆ ನಡೆಯಲಿದೆ.

Scroll to load tweet…