Asianet Suvarna News Asianet Suvarna News

ಚುಂಚಶ್ರೀ ಸೇರಿ ಹಲವು ಸಂತರ ಜೊತೆ ಅಮಿತ್‌ ಶಾ ಸಭೆ

  •   ಚುಂಚಶ್ರೀ ಸೇರಿ ಹಲವು ಸಂತರ ಜೊತೆ ಅಮಿತ್‌ ಶಾ ಸಭೆ ಚರ್ಚೆ
  • ಉತ್ತರಾಖಂಡ ರಾಜ್ಯದ ಹರಿದ್ವಾರದ ಆಚಾರ್ಯ ಮಹಾಸಭಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಉಪಸ್ಥಿತಿಯಲ್ಲಿ ರಾಷ್ಟ್ರದ ಪ್ರಮುಖ ಸಾಧು-ಸಂತರು ಭಾಗವಹಿಸಿ ಚರ್ಚೆ 
union home minuster amith Shah meets Swamijis in Haridwar snr
Author
Bengaluru, First Published Nov 1, 2021, 8:15 AM IST

ಬೆಂಗಳೂರು (ನ.01):  ದೇಶದ ಧರ್ಮ (Religion), ಸಂಸ್ಕೃತಿ (Culture) ಮತ್ತಿತರ ವಿಷಯಗಳಿಗೆ ಸಂಬಂಧಿಸಿದಂತೆ ಉತ್ತರಾಖಂಡ ರಾಜ್ಯದ ಹರಿದ್ವಾರದ (Hridwar) ಆಚಾರ್ಯ ಮಹಾಸಭಾದಲ್ಲಿ ಕೇಂದ್ರ ಗೃಹ ಸಚಿವ ಅಮಿತ್‌ ಶಾ (Home Minister amith Shah) ಅವರ ಉಪಸ್ಥಿತಿಯಲ್ಲಿ ರಾಷ್ಟ್ರದ ಪ್ರಮುಖ ಸಾಧು-ಸಂತರು ಭಾಗವಹಿಸಿ ಚರ್ಚೆ ನಡೆಸಿದರು.

ಧರ್ಮ ಮತ್ತು ಸಂಸ್ಕೃತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ಹಲವು ಆಯಾಮಗಳಲ್ಲಿ ಈ ಸಂದರ್ಭದಲ್ಲಿ ಚರ್ಚೆ ನಡೆಸಲಾಯಿತು. ಹಲವು ಸಾಧು-ಸಂತರು (Sadhu santha), ಮುಂದಿನ ನಡೆಯ ಬಗ್ಗೆ ಅಮೂಲ್ಯವಾದ ಸಲಹೆಗಳನ್ನು ನೀಡಿದರು. ಇದರ ಆಧಾರದ ಮೇಲೆ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲು ನಿರ್ಧರಿಸಲಾಯಿತು.

ಪಾಕ್‌ ಜೊತೆಗಲ್ಲ, ಕಾಶ್ಮೀರಿ ಯುವಕರ ಜೊತೆ ಅಮಿತ್ ಶಾ ಮಾತು: ಏನಿದರ ರಹಸ್ಯ?

ಕರ್ನಾಟಕದ (karnataka) ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಡಾ.ನಿರ್ಮಲಾನಂದನಾಥ ಸ್ವಾಮೀಜಿ (Nirmalanandanatha swamiji), ರಾಜಕೋಟ್‌ನ ಪರಮಾನಂದ ಸರಸ್ವತಿ, ಅವಧೇಶ ಸ್ವಾಮೀಜಿ, ಬಾಬಾ ರಾಮದೇವ್‌ (Baba ramdev), ಉತ್ತರಾಖಂಡ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್‌ ರಾವತ್‌ ಮತ್ತಿತರರು ಭಾಗವಹಿಸಿದ್ದರು.

ಅಮಿತ್ ಶಾ ಮಿಷನ್ ಕಾಶ್ಮೀರ್

 

ಜಮ್ಮು ಮತ್ತು ಕಾಶ್ಮೀರದಲ್ಲಿ(Jammu & Kashmir) ಭಾರೀ ಪ್ರಮಾಣದಲ್ಲಿ ಭದ್ರತಾ ಪಡೆಗಳನ್ನು ನಿಯೋಜಿಸಿದ ಹೊರತಾಗಿಯೂ ಭಯೋತ್ಪಾದನಾ ಚಟುವಟಿಕೆಗಳು ಪೂರ್ಣವಾಗಿ ನಿರ್ಮೂಲನೆಯಾಗದೆ ಇರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಕೇಂದ್ರ ಗೃಹ ಸಚಿವ ಅಮಿತ್‌ ಶಾ, ರಾಜ್ಯದಲ್ಲಿ ಉಗ್ರ ಚಟುವಟಿಕೆಗಳನ್ನು ಸಂಪೂರ್ಣವಾಗಿ ಮಟ್ಟಹಾಕುವಂತೆ ಭದ್ರತಾ ಪಡೆಗಳಿಗೆ ತಾಕೀತು ಮಾಡಿದ್ದಾರೆ. ಅಲ್ಲದೆ ಇದಕ್ಕಾಗಿ ಎಲ್ಲಾ ರೀತಿಯ ನೆರವು ನೀಡಲು ಕೇಂದ್ರ ಸರ್ಕಾರ ಬದ್ಧವಾಗಿದೆ ಎಂದು ಭರವಸೆ ನೀಡಿದ್ದಾರೆ.

ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುತ್ತಿದ್ದ ಸಂವಿಧಾನದ 370ನೇ ವಿಧಿ ಹಿಂಪಡೆದ ಎರಡು ವರ್ಷಗಳ ನಂತರ ಮೊದಲ ಬಾರಿ ಅಮಿತ್‌ ಶಾ(Amit Shah) ಮೂರು ದಿನಗಳ ಭೇಟಿಗಾಗಿ ಶನಿವಾರ ಜಮ್ಮು ಮತ್ತು ಕಾಶ್ಮೀರಕ್ಕೆ (Kashmir) ಆಗಮಿಸಿದರು. ಈ ವೇಳೆ ರಾಜ್ಯ ಸರ್ಕಾರದ ಅಧಿಕಾರಿಗಳು ಮತ್ತು ಭದ್ರತಾ ಪಡೆಗಳ(Security Forces) ಮುಖ್ಯಸ್ಥರ ಜೊತೆ ಸಮಾಲೋಚನೆ ನಡೆಸಿದ ಅವರು ಕೇಂದ್ರಾಡಳಿತ ಪ್ರದೇಶದಲ್ಲಿನ(Union Territory) ಭದ್ರತಾ ಪರಿಸ್ಥಿತಿ ಕುರಿತು ಸಮಗ್ರ ಮಾಹಿತಿ ಪಡೆದುಕೊಂಡರು.

ಜಮ್ಮು ಕಾಶ್ಮೀರ ಹುತಾತ್ಮ ಇನ್ಸ್‌ಪೆಕ್ಟರ್ ಪರ್ವೇಜ್ ಮನೆಗೆ ಅಮಿತ್ ಶಾ ಭೇಟಿ, ಪತ್ನಿಗೆ ಸರ್ಕಾರಿ ಉದ್ಯೋಗ!

ರಾಜ್ಯದಲ್ಲಿ ಹೊಸದಾಗಿ ಕಾಣಿಸಿಕೊಂಡಿರುವ ಹಿಂಸಾಚಾರದ ಘಟನೆಗಳ ಬಗ್ಗೆ ಪ್ರಸ್ತಾಪಿಸಿದ ಅಮಿತ್‌ ಶಾ ‘ಭಯೋತ್ಪಾದನಾ ನಿಗ್ರಹ ಚಟುವಟಿಕೆಗಳಲ್ಲಿ ಅಲಕ್ಷ್ಯಕ್ಕೆ ಯಾವುದೇ ಆಸ್ಪದವಿಲ್ಲ. ಕಣಿವೆ ರಾಜ್ಯದಿಂದ ಉಗ್ರರನ್ನು ಪೂರ್ಣವಾಗಿ ನಿರ್ನಾಮ ಮಾಡಲು ಭದ್ರತಾ ಪಡೆಗಳು ಸತತ ಮತ್ತು ನಿರ್ದಿಷ್ಟಪ್ರಯತ್ನ ಮಾಡಬೇಕು. ಈ ವಿಷಯದಲ್ಲಿ ಭದ್ರತಾ ಪಡೆಗಳ ನಡುವೆ ಮತ್ತು ಗುಪ್ತಚರ ಸಂಸ್ಥೆಗಳ ಜೊತೆ ಹೆಚ್ಚಿನ ಸಮನ್ವಯ ಅಗತ್ಯವಿದೆ. ಈ ಬಗ್ಗೆ ಹೆಚ್ಚಿನ ಒತ್ತು ನೀಡಬೇಕು. ರಾಜ್ಯದಲ್ಲಿ ಶಾಂತಿ ಪುನರ್‌ ಸ್ಥಾಪನೆಯಾಗುವುದನ್ನು ಸರ್ಕಾರ ಬಯಸುತ್ತದೆ. ಈ ನಿಟ್ಟಿನಲ್ಲಿ ಭದ್ರತಾ ಪಡೆಗಳಿಗೆ ಏನೇನು ನೆರವಿನ ಅಗತ್ಯವಿದೆಯೋ ಅದನ್ನು ನೀಡಲು ಕೇಂದ್ರ ಸರ್ಕಾರ ಬದ್ಧ. ಒಟ್ಟಿನಲ್ಲಿ ಉಗ್ರರನ್ನು ಸಂಪೂರ್ಣವಾಗಿ ಸದೆ ಬಡಿಯಿರಿ’ ಎಂದು ಭದ್ರತಾ ಸಂಸ್ಥೆಗಳಿಗೆ ತಾಕೀತು ಮಾಡಿದರು ಎನ್ನಲಾಗಿದೆ.

ಜೊತೆಗೆ ‘ರಾಜ್ಯದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಭದ್ರತಾ ಪಡೆಗಳ ನಿಯೋಜನೆ ಆಗಿದ್ದರೂ ಅಮಾಯಕ ನಾಗರಿಕರ ಹತ್ಯೆ ನಡೆಯಲು ಕಾರಣವೇನು? ಪದೇ ಪದೇ ಇಂಥ ಘಟನೆಗಳು ಏಕೆ ನಡೆಯುತ್ತಿವೆ? ಯುವಕರು ಉಗ್ರವಾದದತ್ತ ತಿರುಗಲು ಕಾರಣವಾಗುತ್ತಿರುವ ಅಂಶಗಳಾದರೂ ಏನು? ಇತ್ತೀಚಿನ ಪೂಂಚ್‌ ಮತ್ತು ರಜೋರಿ ಉಗ್ರ ನಿಗ್ರಹ ಕಾರ್ಯಾಚರಣೆಗಳು ಅಷ್ಟುಸುದೀರ್ಘ ಅವಧಿಗೆ ವಿಸ್ತರಣೆಯಾಗಿದ್ದು ಏಕೆ?’ ಎಂಬ ಕಠಿಣ ಪ್ರಶ್ನೆಗಳನ್ನು ಅಮಿತ್‌ ಶಾ ಭದ್ರತಾ ಪಡೆಗಳ ಮುಂದಿಟ್ಟರು ಎಂದು ಮೂಲಗಳು ತಿಳಿಸಿವೆ.

Follow Us:
Download App:
  • android
  • ios