ಸುಪ್ರೀಂಗೆ 9 ಹೊಸ ನ್ಯಾಯಾಧೀಶರು, ಕರ್ನಾಟಕದ ಬಿವಿ ನಾಗರತ್ನ ಹೆಸರು ಫೈನಲ್
* ಸುಪ್ರೀಂ ಕೋರ್ಟ್ ಗೆ ಹೊಸ ಒಂಭತ್ತು ನ್ಯಾಯಮೂರ್ತಿಗಳು
* ಕೊಲಿಜಿಯಂ ಶಿಫಾರಸು ಮಾಡಿದ್ದ 9 ಹೆಸರುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅಂಕಿತ
* ಕರ್ನಾಟಕದ ಬಿ. ವಿ. ನಾಗರತ್ನ ಅವರಿಗೆ ಸುಪ್ರೀಂ ಮುಖ್ಯ ನ್ಯಾಯಮೂರ್ತಿಯಾಗುವ ಅವಕಾಶ
ನವದೆಹಲಿ( ಆ. 26) ಕೊಲಿಜಿಯಂ ಶಿಫಾರಸು ಮಾಡಿದ್ದ 9 ಹೆಸರುಗಳಿಗೆ ರಾಷ್ಟ್ರಪತಿ ರಾಮನಾಥ್ ಕೋವಿಂದ್ ಗುರುವಾರ ಅಂಕಿತ ಹಾಕಿದ್ದು ಸುಪ್ರೀಂ ಕೋರ್ಟ್ ಗೆ 9 ಹೊಸ ನ್ಯಾಯಮೂರ್ತಿಗಳ ನೇಮಕವಾಗಲಿದೆ. ಇದರಲ್ಲಿ ಮೂವರು ಮಹಿಳೆಯರು ಸೇರಿದ್ದಾರೆ.
ಕರ್ನಾಟಕ ಹೈಕೋರ್ಟ್ ನ ನ್ಯಾಯಮೂರ್ತಿ ಬಿ. ವಿ. ನಾಗರತ್ನ, ನ್ಯಾಯಮೂರ್ತಿ ಬೇಲಾ ಎಂ. ತ್ರಿವೇದಿ, ತೆಲಂಗಾಣ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಹಿಮಾ ಕೊಹ್ಲಿ, ಜಸ್ಟೀಸ್ ಸಿ.ಟಿ. ರವಿಕುಮಾರ್, ಎಂಎಂ ಸುಂದರೇಶ್ ಮತ್ತು ಮಾಜಿ ಹೆಚ್ಚುವರಿ ಸಾಲಿಸಿಟರ್ ಜನರಲ್ ಪಿ.ಎಸ್. ನರಸಿಂಹ ಅವರ ನೇಮಕವಾಗಲಿದೆ.
ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಅಭಯ್ ಶ್ರೀನಿವಾಸ ಓಕಾ, ವಿಕ್ರಮ್ ನಾಥ್ ಮತ್ತು ಜೀತೇಂದ್ರ ಕುಮಾರ್ ಮಹೇಶ್ವರಿ ಅವರ ಹೆಸರನ್ನು ಕೂಡಾ ಕೊಲಿಜಿಯಂ ಶಿಫಾರಸು ಮಾಡಿತ್ತು.
ಕನ್ನಡತಿ ನಾಗರತ್ನ ಅವರಿಗೆ ಒಲಿದು ಬಂದ ಹುದ್ದೆ
ಈ ಪೈಕಿ ಕರ್ನಾಟಕದ ನ್ಯಾಯಮೂರ್ತಿ ಬಿ.ವಿ. ನಾಗರತ್ನ ದೇಶದ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿಯಾಗಿ ನೇಮಕವಾಗುವ ಸಾಧ್ಯತೆ ಹೆಚ್ಚಿದೆ. ಆದರೆ ಇನ್ನು ಆರು ವರ್ಷಕಾಯಬೇಕಾಗುತ್ತದೆ.
ಸುಪ್ರೀಂ ಕೋರ್ಟ್ ನ ಕೊಲಿಜಿಯಂನಲ್ಲಿ ಮುಖ್ಯ ನ್ಯಾಯಮೂರ್ತಿ ಎನ್.ವಿ.ರಮಣ, ನ್ಯಾಯಮೂರ್ತಿಗಳಾದ ಯು ಲಲಿತ್, ಎಎಂ ಖನ್ವಿಲ್ಕರ್, ಡಿವೈ ಚಂದ್ರಚೂಡ್, ಎಲ್ ನಾಗೇಶ್ವರ ರಾವ್ ಇದ್ದರು ಈ ಸಲಿತಿ ಆ. 17 ರಂದು ವರದಿ ಸಲ್ಲಿಸಿತ್ತು. ಎಂಟು ಜನ ಹೈ ಕೋರ್ಟ್ ನ್ಯಾಯಾಧೀಶರು ಮತ್ತು ಒಬ್ಬರು ವಕೀಲರ ಹೆಸರನ್ನು ಶಿಫಾರಸು ಮಾಡಿತ್ತು.
ಹೈ ಕೋರ್ಟ್ ಮುಖ್ಯ ನ್ಯಾಯಾಧೀಶರಾದ ವಿಕ್ರಂ ನಾಥ್ (ಗುಜರಾತ್), ಎಎಸ್ ಓಕಾ (ಕರ್ನಾಟಕ), ಹೀಮಾ ಕೊಹ್ಲಿ (ತೆಲಂಗಾಣ), ಜೆಕೆ ಮಹೇಶ್ವರಿ (ಸಿಕ್ಕಿಂ) ಹೈ ಕೋರ್ಟ್ ನ್ಯಾಯಾಧೀಶರಾದ ಬಿವಿ ನಾಗರತ್ನ(ಕರ್ನಾಟಕ), ಎಂಎಂ ಸುಂದರೇಶ್(ಮದ್ರಾಸ್), ಸಿಟಿ ರವಿಕುಮಾರ್ (ಕೇರಳ), ಬೆಲಾ ಎಂ ತ್ರಿವೇದಿ(ಗುಜರಾತ್) ಮತ್ತು ಹಿರಿಯ ವಕೀಲರಾದ ಪಿಎಸ್ ನರಸಿಂಹ ಹೆಸರನ್ನು ಶಿಫಾರಸು ಮಾಡಲಾಗಿತ್ತು.
2027 ನಾಗರತ್ನ ಸುಪ್ರೀಂ ಕೋರ್ಟ್ ನ ಮೊದಲ ಮಹಿಳಾ ಮುಖ್ಯ ನ್ಯಾಯಮೂರ್ತಿ ಎಂಬ ಶ್ರೇಯಕ್ಕೆ ಪಾತ್ರವಾಗಲಿದ್ದಾರೆ. ಮಾಜಿ ಸಿಜೆಐ ಎಸ್ ವೆಂಕಟರಕಣಯ್ಯ ಅವರ ಪುತ್ರಿಯಾದ ನಾಗರತ್ನ ವಾಣಿಜ್ಯ ಕಾನೂನನ್ನು ಅಧ್ಯಯನ ಮಾಡಿದವರು. 2008 ರಲ್ಲಿ ಕರ್ನಾಟಕ ಹೈಕೋರ್ಟ್ ನ ಅಡಿಶನಲ್ ಜಡ್ಜ್ ಆದರು.