Asianet Suvarna News Asianet Suvarna News

84328 ಕೋಟಿ ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಒಪ್ಪಿಗೆ: ಭಾರತ ಚೀನಾ ನಡುವೆ ಮಾತುಕತೆ

ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಗಡಿಯಲ್ಲಿ ಸದಾ ಕ್ಯಾತೆಯ ನಡುವೆಯೇ ಭಾರತೀಯ ಸೇನೆಗೆ ಭರ್ಜರಿ ಬಲ ತುಂಬುವ 84328 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ.

Union Govt agreed Arms purchase worth 84328 crore agreed: Talks between India and China akb
Author
First Published Dec 23, 2022, 9:31 AM IST

ನವದೆಹಲಿ: ನೆರೆಯ ಚೀನಾ ಮತ್ತು ಪಾಕಿಸ್ತಾನದಿಂದ ಗಡಿಯಲ್ಲಿ ಸದಾ ಕ್ಯಾತೆಯ ನಡುವೆಯೇ ಭಾರತೀಯ ಸೇನೆಗೆ ಭರ್ಜರಿ ಬಲ ತುಂಬುವ 84328 ಕೋಟಿ ರು. ಮೌಲ್ಯದ ಶಸ್ತ್ರಾಸ್ತ್ರ ಖರೀದಿಗೆ ಕೇಂದ್ರ ಸರ್ಕಾರ ಗುರುವಾರ ಅನುಮೋದನೆ ನೀಡಿದೆ. ರಕ್ಷಣಾ ಸಚಿವ ರಾಜ್‌ನಾಥ್‌ ಸಿಂಗ್‌ ಅಧ್ಯಕ್ಷತೆಯಲ್ಲಿ ನಡೆದ ರಕ್ಷಣಾ ಖರೀದಿ ಮಂಡಳಿ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಈ ಒಟ್ಟು ಮೊತ್ತದ ಪೈಕಿ 82127 ಕೋಟಿ ರು.ಮೌಲ್ಯದ ಶಸ್ತ್ರಾಸ್ತ್ರಗಳನ್ನು ದೇಶೀಯವಾಗಿಯೇ ಖರೀದಿಸಲಾಗುವುದು. ಇದು ಮೇಕ್‌ ಇನ್‌ ಇಂಡಿಯಾ ಯೋಜನೆಗೆ ಇನ್ನಷ್ಟುಬಲ ತುಂಬಲಿದೆ ಎಂದು ಸರ್ಕಾರ ಹೇಳಿದೆ.

ಗುರುವಾರ ಅನುಮೋದನೆ ಅನ್ವಯ ಭೂಸೇನೆ, ನೌಕಾಪಡೆ ಮತ್ತು ವಾಯುಪಡೆಗೆ ಲಘು ಟ್ಯಾಂಕ್‌, ಯುದ್ಧನೌಕೆ ಧ್ವಂಸ ಕ್ಷಿಪಣಿ (missiles), ದೂರ ನಿರ್ದೇಶಿತ ಬಾಂಬ್‌, ಅತ್ಯಾಧುನಿಕ ವಾಹನಗಳು, ಬಹು ಉದ್ದೇಶಿತ ನೌಕೆಗಳು, ಸಾಕಷ್ಟು ದೂರ ಸಾಗಬಲ್ಲ ಹೊಸ ಕ್ಷಿಪಣಿ ವ್ಯವಸ್ಥೆ (Air Force), ಅತ್ಯಾಧುನಿಕ ಕರಾವಳಿ ಕಾವಲು ನೌಕೆಗಳು, ಬ್ಯಾಲೆಸ್ಟಿಕ್‌ ಹೆಲ್ಮೆಟ್‌, ಸೇರಿವೆ ಎಂದು ಮೂಲಗಳು ತಿಳಿಸಿವೆ.

ಭಾರತ-ಚೀನಾ ನಡುವೆ ಸೇನಾ ಮಾತು​ಕ​ತೆ

ನವ​ದೆ​ಹ​ಲಿ: ಅರುಣಾಚಲದ ತವಾಂಗ್‌ನಲ್ಲಿ (Tawang) ಇತ್ತೀಚೆಗೆ ಚೀನಾ ನಡೆಸಿದ ಅತಿಕ್ರಮಣದಿಂದ ಉಭಯ ದೇಶಗಳ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ನಡುವೆಯೇ ಪೂರ್ವ ಲಡಾಖ್‌ (East Ladakh)  ಬಿಕ್ಕಟ್ಟು ಇತ್ಯರ್ಥ ಸಂಬಂಧ ಉಭಯ ದೇಶಗಳ ಸೇನೆಗಳು ಡಿ.20ರಂದು ಉನ್ನತ ಮಟ್ಟದ ಮಾತುಕತೆ ನಡೆಸಿವೆ. ಭಾರ​ತ-ಚೀನಾ ಕಾರ್ಪ್‌ ಕಮಾಂಡರ್‌ ಮಟ್ಟದ 17ನೇ ಸಭೆಯು ಚೀನಾ​ದ ಕರೆ​ಯಿ​ರುವ ಚುಹ್ಶುಲ್‌-ಮೊಲ್ಡೊ ಗಡಿ ಸಭಾ ಸ್ಥಾನ​ದಲ್ಲಿ ಡಿ.20ರಂದು ನಡೆ​ದಿ​ತ್ತು. ಗಡಿ ಬಿಕ್ಕಟ್ಟು ಹಾಗೂ ಇನ್ನಿ​ತರೆ ವಿಚಾ​ರ​ಗ​ಳನ್ನು ಶೀಘ್ರ ಪರಿ​ಹ​ರಿ​ಸಲು ಉಭ​ಯ ದೇಶದ ನಾಯ​ಕರು ಒದ​ಗಿ​ಸಿದ ಮಾರ್ಗ​ದ​ರ್ಶ​ನದ ಅನು​ಸಾರ ಮಾತು​ಕ​ತೆ​ಗಳು ನಡೆದಿವೆ ಎಂದು ವಿದೇ​ಶಾಂಗ ವ್ಯವ​ಹಾರ ಸಚಿ​ವಾ​ಲ​ಯದ ವಕ್ತಾರ ಅರಿಂದಮ್‌ ಬಗ್ಚಿ ಹೇಳಿ​ದ್ದಾ​ರೆ.

ಜಗತ್ತಿಗೆ ಎದುರಾಗಿದ್ದ ಕಂಟಕ ತಪ್ಪಿಸಿದ್ದರು ನಮೋ: ಇದು ಸಿಐಎ ಮುಖ್ಯಸ್ಥ ಹೇಳಿದ ರಹಸ್ಯ

ಈ ಸಭೆ​ಯಲ್ಲಿ ಗಡಿ​ಯಲ್ಲಿ ಶಾಂತಿ ಕಾಪಾ​ಡಿ​ಕೊ​ಳ್ಳಲು ಹಾಗೂ ದ್ವಿಪ​ಕ್ಷೀಯ ಸಂಬಂಧ​ಗಳ ಸುಧಾ​ರ​ಣೆ​ಗಾಗಿ ಮುಕ್ತ ಹಾಗೂ ರಚ​ನಾ​ತ್ಮಕ ರೀತಿ​ಯಲ್ಲಿ ಚರ್ಚೆ​ಗಳು ನಡೆದಿವೆ. ಉಭಯ ದೇಶ​ಗಳು ಪರ​ಸ್ಪರ ಸೇನೆ ಹಾಗೂ ರಾಜ​ತಾಂತ್ರಿಕ ಮಾರ್ಗ​ಗಳ ಮೂಲಕ ಮಾತುಕತೆ ಮುಂದು​ವ​ರೆ​ಸಲು ಹಾಗೂ ಸಮಸ್ಯೆಗ​ಳಿಗೆ ಪರ​ಸ್ಪರ ಸ್ವೀಕಾ​ರಾರ್ಹ ಪರಿ​ಹಾ​ರ​ವನ್ನು ಶೀಘ್ರ ರೂಪಿ​ಸಲು ಒಪ್ಪಿ​ಕೊಂಡಿವೆ ಎಂದು ತಿಳಿ​ಸಿ​ದ್ದಾ​ರೆ.

ಭಾರತೀಯ ಸೇನೆಗೆ ಬರಲಿದೆ ಸೂಸೈಡ್‌ ಡ್ರೋನ್‌, ಇದರ ಸಾಮರ್ಥ್ಯಕ್ಕೆ ಸಾಟಿಯೇ ಇಲ್ಲ!

Follow Us:
Download App:
  • android
  • ios