Asianet Suvarna News Asianet Suvarna News

ಭಾರತದ ಮೇಲೆ ಕೊಕೇನ್‌ ದಾಳಿ: ಅಧಿಕಾರಿಗಳಿಗೆ ನಿರ್ಮಲಾ ಎಚ್ಚರಿಕೆ

ದೇಶದಲ್ಲಿ ಕೊಕೇನ್‌ ಪತ್ತೆ ಹೆಚ್ಚಳ ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದೊಳಗೆ ಬೆಟ್ಟದಷ್ಟುಗಾತ್ರದಲ್ಲಿನ ಅಕ್ರಮ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವ ದಂಧೆಕೋರರ ಹೆಡೆಮುರಿ ಕಟ್ಟಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

union Finance Minister Nirmala sitharaman warns officers after drug mafia increase in nation akb
Author
First Published Dec 6, 2022, 8:47 AM IST

ನವದೆಹಲಿ: ದೇಶದಲ್ಲಿ ಕೊಕೇನ್‌ ಪತ್ತೆ ಹೆಚ್ಚಳ ಪ್ರಕರಣದ ಬಗ್ಗೆ ತೀವ್ರ ಕಳವಳ ವ್ಯಕ್ತಪಡಿಸಿರುವ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌, ದೇಶದೊಳಗೆ ಬೆಟ್ಟದಷ್ಟುಗಾತ್ರದಲ್ಲಿನ ಅಕ್ರಮ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡುತ್ತಿರುವ ದಂಧೆಕೋರರ ಹೆಡೆಮುರಿ ಕಟ್ಟಿ ಎಂದು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಂದಾಯ ಗುಪ್ತಚರ ಇಲಾಖೆಯ (Revenue Intelligence Department) 65ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಸಚಿವೆ ನಿರ್ಮಲಾ (Nirmala sitharaman), ಕೊಕೇನ್‌ ಮತ್ತು ಇತರೆ ಮಾದಕ ವಸ್ತುಗಳು ಭಾರೀ ಪ್ರಮಾಣದಲ್ಲಿ ಭಾರತಕ್ಕೆ ಪೂರೈಕೆ ಆಗುತ್ತಿದೆ. ಹೀಗಾಗಿ ನಮ್ಮ ದೇಶ ಮಾದಕ ವಸ್ತು ಬಳಕೆದಾರರ ದೇಶವಾಗಿ ಹೊರಹೊಮ್ಮುತ್ತಿದೆಯೇ ಎಂಬುದನ್ನು ಅಧಿಕಾರಿಗಳು ಪತ್ತೆ ಮಾಡಬೇಕು. ಡ್ರಗ್ಸ್ ದಂಧೆಕೋರರು ನಿಮಗಿಂತ ಬುದ್ಧಿವಂತರಾಗದಂತೆ ಅಧಿಕಾರಿಗಳು ನೋಡಿಕೊಳ್ಳಬೇಕು. ಮಾದಕ ವಸ್ತು ಕಳ್ಳಸಾಗಣೆಯ ಇಂಥ ಪ್ರತಿ ಪ್ರಕರಣ ಕೂಡಾ ಆರಂಭದಲ್ಲೇ ತಾರ್ಕಿಕ ಅಂತ್ಯ ಕಾಣುವಂತೆ ನೋಡಿಕೊಳ್ಳಬೇಕು. ದಂಧೆಕೋರರು ಬಂಧನಕ್ಕೊಳಗಾಗಿ ಸೂಕ್ತ ಶಿಕ್ಷೆಗೆ ಒಳಪಡುವುದನ್ನು ಕಂದಾಯ ಗುಪ್ತಚರ ಇಲಾಖೆ ಖಾತರಿಪಡಿಸಿಕೊಳ್ಳಬೇಕು ಎಂದು ಹೇಳಿದರು.

Bengaluru: ಡ್ರಗ್ಸ್‌ ಸ್ಮಗ್ಲಿಂಗ್‌: ಔಷಧಿ ವ್ಯಾಪಾರಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್‌

2019-20ರಲ್ಲಿ ದೇಶದಲ್ಲಿ 8.667 ಕೆ.ಜಿ ಕೊಕೇನ್‌ ವಶಪಡಿಸಿಕೊಂಡಿದ್ದರೆ, 2021-22ರಲ್ಲಿ ವಶಪಡಿಸಿಕೊಂಡ ಕೊಕೇನ್‌ ಪ್ರಮಾಣ ಶೇ.3479 ರಷ್ಟುಏರಿಕೆಯಾಗುವ ಮೂಲಕ 310 ಕೆ.ಜಿಗೆ ತಲುಪಿದೆ. ಇನ್ನು 2020-21ರಲ್ಲಿ 64.39 ಕೆ.ಜಿ ಮೆಥಾಮೆಫ್ತಾಮೈನ್‌ ವಶಪಡಿಸಿಕೊಂಡಿದ್ದರೆ 2021-22ರಲ್ಲಿ ಆ ಪ್ರಮಾಣವು 884.69 ಕೆ.ಜಿಗೆ ತಲುಪಿದೆ ಎಂದು ಕಂದಾಯ ಗುಪ್ತಚರ ಇಲಾಖೆಯ ಇತ್ತೀಚಿನ ವರದಿಗಳು ತಿಳಿಸಿದ್ದವು.

Drive Against Drug Menace: ಹೊಸ ವರ್ಷಕ್ಕೂ ಮುನ್ನ ಡ್ರಗ್ಸ್ ಮಾಫಿಯಾ ವಿರುದ್ಧ ಪೊಲೀಸ್ ಸಮರ

Follow Us:
Download App:
  • android
  • ios